Home
ಸುದ್ದಿಜಾಲ

Xiaomi: ಭಾರತದಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ ಲಾಂಚ್‌ ಮಾಡಿದ ಶಿಯೋಮಿ: ಬೆಲೆ ಅಷ್ಟೇನಿಲ್ಲ... ಫೀಚರ್ಸ್‌ ಮಾತ್ರ ಸೂಪರ್

ಸ್ಮಾರ್ಟ್‌ಟಿವಿಗಳು (smart TV) ಇಂದು ಬಹು ಬೇಡಿಕೆ ಪಡೆಯುತ್ತಿರುವ ಡಿವೈಸ್‌ಗಳಾಗುತ್ತಿವೆ. ಈ ನಡುವೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಶಿಯೋಮಿ (Xiaomi) ಈಗ ಸ್ಮಾರ್ಟ್‌ಟಿವಿಯನ್ನೂ ಸಹ ಲಾಂಚ್ ಮಾಡಿದೆ. ಬೆಲೆ ಅಗ್ಗವಾದರೂ ಫೀಚರ್ಸ್‌ ಮಾತ್ರ ಪ್ರೀಮಿಯಂ.

ಹೌದು, ಶಿಯೋಮಿ ಭಾರತದಲ್ಲಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ A32 (2024) ಅನ್ನು ಲಾಂಚ್‌ ಮಾಡಿದೆ. ಇದು ಬ್ರಾಂಡ್‌ನಿಂದ ಬಜೆಟ್ ಕೊಡುಗೆಯಾಗಿದ್ದು, ದೇಶದಲ್ಲಿ 15,000 ರೂ.ಗಿಂತ ಕಡಿಮೆ ಬೆಲೆ ವಿಭಾಗದಲ್ಲಿನ ಟಿವಿಗಳಲ್ಲಿ ಆಗ್ರಸ್ಥಾನ ಪಡೆಯಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿ ಏನೆಲ್ಲಾ ಫೀಚರ್ಸ್ ಪಡೆದಿದೆ?, ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ ಲಾಂಚ್‌ ಮಾಡಿದ ಶಿಯೋಮಿ...

ಶಿಯೋಮಿ ಸ್ಮಾರ್ಟ್‌ಟಿವಿ: 32 ಇಂಚಿನ ಸ್ಮಾರ್ಟ್ ಟಿವಿ A32 (2024) ಅನ್ನು ಲಾಂಚ್‌ ಮಾಡಲಾಗಿದ್ದು, ಇದನ್ನು ಕಂಪೆನಿಯ ಸ್ಮಾರ್ಟ್ ಟಿವಿ ಹಿಂದಿನ ಮಾದರಿಗಳಿಗೆ ಹೋಲಿಸಿದರೆ 4-ಸ್ಟಾರ್ BEE ಪ್ರಮಾಣೀಕರಣದೊಂದಿಗೆ ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿದೆ ಎಂದು ಭರವಸೆ ನೀಡಿದೆ. ಈ 2024 ಆವೃತ್ತಿಯು ಲೋಹದ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, ಶಿಯೋಮಿಯ ಸ್ಥಳೀಯ ವಿವಿಡ್ ಪಿಕ್ಚರ್ ಇಂಜಿನ್‌ನೊಂದಿಗೆ 32-ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ.

ಇದರೊಂದಿಗೆ ರೋಮಾಂಚಕ ಬಣ್ಣಗಳನ್ನು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರತಿ ಫ್ರೇಮ್‌ನೊಂದಿಗೆ ಸ್ಪಷ್ಟತೆಯನ್ನು ನೀಡಲಿದೆ ಎಂದು ಕಂಪನಿ ಹೇಳುತ್ತದೆ. ಅಲ್ಲದೆ 8GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದ್ದು, ಕಡಿಮೆ ಲೇಟೆನ್ಸಿ ಮೋಡ್ ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಹಾಗೂ ಮಿರಾಕಾಸ್ಟ್ ಸೇರಿದಂತೆ ಬಹು ಕನೆಕ್ಟಿವಿಟಿ ಪೋರ್ಟ್‌ಗಳನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ ಲಾಂಚ್‌ ಮಾಡಿದ ಶಿಯೋಮಿ...

ಗೂಗಲ್ ಟಿವಿಯಿಂದ ರನ್‌ ಆಗುವ ಈ ಶಿಯೋಮಿ ಸ್ಮಾರ್ಟ್ ಟಿವಿ A32 ಸರಳವಾದ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬರುತ್ತದೆ. ಜೊತೆಗೆ 20W ಡಾಲ್ಬಿ ಆಡಿಯೋ ತಂತ್ರಜ್ಞಾನ ಮತ್ತು ಡಿಟಿಎಸ್‌ ವರ್ಚುವಲ್ X ಹೊಂದಾಣಿಕೆಗೆ ಬೆಂಬಲವನ್ನು ಪಡೆದಿದ್ದು, ತನ್ನ ಇತ್ತೀಚಿನ ಟಿವಿಯು 4-ಸ್ಟಾರ್ BEE ಪ್ರಮಾಣೀಕರಣದೊಂದಿಗೆ ಹೆಚ್ಚು ಶಕ್ತಿಯ ದಕ್ಷತೆಯನ್ನು ಪಡೆದಿದೆ ಎಂದು ಶಿಯೋಮಿ ಹೇಳಿಕೊಂಡಿದೆ. ಅಂದರೆ ಇದು ಹಿಂದಿನ ಮಾದರಿಯ 2 ಸ್ಟಾರ್ ರೇಟಿಂಗ್‌ನಿಂದ ಅಪ್‌ಗ್ರೇಡ್ ಆಗಿದೆ.

ಈ ಸುಧಾರಣೆಯು ಶೇಕಡಾ 24 ರಷ್ಟು ಹೆಚ್ಚು ಪವರ್‌ ಉಳಿತಾಯವನ್ನು ಮಾಡಲಿದೆ ಎನ್ನಲಾಗಿದ್ದು, ಇಷ್ಟೇ ಅಲ್ಲದೆ ಇದು ಉತ್ತಮ ವೀಕ್ಷಣೆಯ ಅನುಭವವನ್ನು ನೀಡುವುದನ್ನು ಮುಂದುವರೆಸುವುದರೊಂದಿಗೆ ಮನರಂಜನೆ ಮತ್ತು ಯಾವುದೇ ಪರಿಸರಕ್ಕೆ ಉತ್ತಮ ಆಯ್ಕೆಯಾಗಿದೆ ಎಂದು ತಿಳಿಸಲಾಗಿದೆ. ಈ ಆವೃತ್ತಿಯು ವೈಯಕ್ತಿಕಗೊಳಿಸಿದ ಕಂಟೆಂಟ್‌ ಬಳಕೆಗಾಗಿ ಶಿಯೋಮಿ ಟಿವಿ+ ನ ಅತ್ಯಾಧುನಿಕ ಆವೃತ್ತಿಯನ್ನು ಪರಿಚಯಿಸುತ್ತದೆ.

ಬಳಕೆದಾರರಿಗೆ ತಿಳುವಳಿಕೆಯುಳ್ಳ ವೀಕ್ಷಣೆಯ ಆಯ್ಕೆಗಳನ್ನು ಮಾಡಲು IMDb ರೇಟಿಂಗ್‌ಗಳೊಂದಿಗೆ ಯುನಿವರ್ಸಲ್ ಸರ್ಚ್‌ನ ಹೊಸ ಇಂಟರ್ಫೇಸ್ ಅನ್ನು ನೀಡಲಾಗಿದೆ. ಈ ಸೌಲಭ್ಯವು ಇಂಟರ್ಫೇಸ್ ಸುಧಾರಿತ ಬಳಕೆದಾರ ಸಂವಹನವನ್ನು ನೀಡಲು ಭರವಸೆ ನೀಡುತ್ತದೆ. ಇದು ಈಗ 30 ಓಟಿಟಿ ಆಪ್‌ಗಳು ಮತ್ತು 90+ ಲೈವ್ ಚಾನಲ್‌ಗಳಿಗೆ ಪ್ರವೇಶವನ್ನು ಅನುಮತಿಸಲಿದ್ದು, ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ 150+ ಚಾನಲ್‌ಗಳಲ್ಲಿ ಉಚಿತ ಲೈವ್ ಟಿವಿಯನ್ನು ವೀಕ್ಷಿಸಬಹುದಾಗಿದೆ. ಇಷ್ಟೆ ಅಲ್ಲದೆ ಕಿಡ್ಸ್ ಮೋಡ್, ಲೈವ್ ಸ್ಪೋರ್ಟ್ಸ್ ಮತ್ತು ಸ್ಮಾರ್ಟ್ ಶಿಫಾರಸುಗಳಂತಹ ಫೀಚರ್ಸ್‌ ಅನ್ನೂ ಸಹ ಈ ಸ್ಮಾರ್ಟ್‌ಟಿವಿಯಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ ಲಾಂಚ್‌ ಮಾಡಿದ ಶಿಯೋಮಿ...

ಶಿಯೋಮಿ ಸ್ಮಾರ್ಟ್‌ಟಿವಿ ಬೆಲೆ ಹಾಗೂ ಲಭ್ಯತೆ: ಬೆಲೆಗೆ ಸಂಬಂಧಿಸಿದಂತೆ, ಶಿಯೋಮಿ ಸ್ಮಾರ್ಟ್‌ಟಿವಿ A32 2024 ಆವೃತ್ತಿಯು 12,499 ರೂ.ಗಳ ಬಿಡುಗಡೆ ಬೆಲೆಯಲ್ಲಿ ಲಭ್ಯವಿರುತ್ತದೆ. ಇದನ್ನು ನೀವು ಮೇ 28 ರಿಂದ ಮಿ.ಕಾಮ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಶಿಯೋಮಿ ರಿಟೇಲರ್‌ ಸ್ಟೋರ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Xiaomi has launched a new 32-inch Smart TV A32 (2024) in India. It is a budget offering from the brand and will top the TVs in the sub-Rs 15,000 price segment in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+