ಶಿಯೋಮಿಯಿಂದ 65W ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಬಿಡುಗಡೆ!

|

ಜನಪ್ರಿಯ ಶಿಯೋಮಿ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರೊಂದಿಗೆ ಅಗ್ಗದ ಬೆಲೆಗೆ ಹಲವು ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳನ್ನು ಲಾಂಚ್ ಮಾಡಿ ಮಾರುಕಟ್ಟೆಯಲ್ಲಿ ತನ್ನ ಐಡೆಂಟಿಟಿ ಹೆಚ್ಚಿಸಿಕೊಂಡಿದೆ. ಈಗಾಗಲೇ ಫಾಸ್ಟ್‌ ಚಾರ್ಜಿಂಗ್ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವ ಸಂಸ್ಥೆಯು ಈಗ ಮತ್ತೊಂದು ವೇಗದ ಚಾರ್ಜಿಂಗ್ ಉಪಕರಣವನ್ನು ಪರಿಚಯಿಸಿದೆ.

65W PD ಫಾಸ್ಟ್ ಚಾರ್ಜರ್

ಹೌದು, ಶಿಯೋಮಿ ಹೊಸದಾಗಿ 65W PD ಫಾಸ್ಟ್ ಚಾರ್ಜರ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಚಾರ್ಜ್ ಸಿಂಗಲ್ ಯುಎಸ್‌ಬಿ-ಸಿ ಟೈಪ್‌ ಫೋರ್ಟ್‌ ಹೊಂದಿದ್ದು, ಹಾಗೂ ಫೊಲ್ಡೆಬಲ್ ಪಿನ್ ಒಳಗೊಂಡಿದೆ. ಸ್ಮಾರ್ಟ್‌ಫೋನ್, ನೋಟ್‌ಬುಕ್‌ ಡಿವೈಸ್‌, ಸೇರಿದಂತೆ ಇತರೆ ಡಿವೈಸ್‌ಗಳಿಗೆ ಚಾರ್ಜ್ ಒದಗಿಸುವ ಸೌಲಭ್ಯವನ್ನು ಈ ಚಾರ್ಜರ್‌ ಪಡೆದಿರುವುದು ವಿಶೇಷವಾಗಿದೆ. ಹಾಗೆಯೇ ಚಾರ್ಜಿಂಗ್ ಪಿನ್ ಅನ್ನು ಸುಲಭವಾಗಿ ಸಾಗಿಸಲು 90 ಡಿಗ್ರಿಗಳಲ್ಲಿ ಮಡಚಬಹುದಾಗಿದೆ.

ಯುನಿವರ್ಸಲ್ ಫಾಸ್ಟ್‌ ಚಾರ್ಜರ್

ಶಿಯೋಮಿಯ ಹೊಸ 65W ಯುನಿವರ್ಸಲ್ ಫಾಸ್ಟ್‌ ಚಾರ್ಜರ್ ಹಲವಾರು ಸಾಧನಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಆಪಲ್ ಮ್ಯಾಕ್‌ಬುಕ್ ಪ್ರೊ 15 (2016, 2018, 2020), ಮ್ಯಾಕ್‌ಬುಕ್ ಪ್ರೊ 13 (2016, 2017, 2018, 2020), ಮ್ಯಾಕ್‌ಬುಕ್ 12 (2017), ಮತ್ತು ಮ್ಯಾಕ್‌ಬುಕ್ ಏರ್ 13 (2018, 2020) ಸೇರಿವೆ. ಇದು ಹಾನರ್ ಮ್ಯಾಜಿಕ್ ಬುಕ್ 14, ರೇಜರ್ ಬ್ಲೇಡ್ ಸ್ಟೆಲ್ತ್ 17, ಗೂಗಲ್ ಪಿಕ್ಸೆಲ್ ಬುಕ್ ಮತ್ತು ಸ್ಯಾಮ್ಸಂಗ್ ಎಕ್ಸ್ಇ 513 ಸಿ 24 ಅನ್ನು ಡಿವೈಸ್‌ಗಳನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ ಹುವಾವೇ ಮೇಟ್‌ಬುಕ್ ಇ 12.0 ಮತ್ತು ಮೇಟ್‌ಬುಕ್ ಎಕ್ಸ್ ಪ್ರೊ ಡಿವೈಸ್‌ಗಳಿಗೂ ಸಪೋರ್ಟ್‌ ನೀಡುತ್ತದೆ.

ಲೆನೊವೊ ಥಿಂಕ್‌ಪ್ಯಾಡ್

ಲೆನೊವೊ ಡಿವೈಸ್‌ಗಳಿಗೂ ಶಿಯೋಮಿ ಈ ಚಾರ್ಜರ್ ಸಪೋರ್ಟ್‌ ನೀಡುತ್ತದೆ. ಮುಖ್ಯವಾಗಿ ಲೆನೊವೊ ಥಿಂಕ್‌ಪ್ಯಾಡ್ ಎಸ್ 3-490 14-ಇಂಚು, ಯೋಗ ಸಿ 930, ಥಿಂಕ್‌ಪ್ಯಾಡ್ ನ್ಯೂ ಎಸ್ 2 13.3-ಇಂಚು ಮತ್ತು ಥಿಂಕ್‌ಪ್ಯಾಡ್ ಎಕ್ಸ್ 270 ಅನ್ನು ಬೆಂಬಲಿಸುತ್ತದೆ. ಡೆಲ್‌ನಲ್ಲಿ, ಚಾರ್ಜರ್ ಎಕ್ಸ್‌ಪಿಎಸ್ 13, ಎಕ್ಸ್‌ಪಿಎಸ್ 15, ಎಕ್ಸ್‌ಪಿಎಸ್ 13 2-ಇನ್ -1, ಮತ್ತು ಡೆಲ್ ಲ್ಯಾಟಿಟ್ಯೂಡ್ 5480 ಅನ್ನು ಬೆಂಬಲಿಸುತ್ತದೆ. ಶಿಯೋಮಿ 65 ಡಬ್ಲ್ಯೂ ಯುನಿವರ್ಸಲ್ ಚಾರ್ಜರ್ ಸಹ ಎಚ್‌ಪಿ ಎಲೈಟ್ ಬುಕ್ ಫೋಲಿಯೊ ಜಿ 1 12.5, ಎಚ್‌ಪಿ ಸ್ಪೆಕ್ಟರ್ 13-af001, ಮತ್ತು HP ಸ್ಪೆಕ್ಟರ್ x360 13-w021 TU 13.3.ಹಾಗೆಯೇ ಸ್ವಂತ ಶಿಯೋಮಿ ಸಂಸ್ಥೆಯ ಮಿ ನೋಟ್‌ಬುಕ್ ಲ್ಯಾಪ್‌ಟಾಪ್‌ಗಳು, ಮಿ ನೋಟ್‌ಬುಕ್ ಏರ್ (12 ಮತ್ತು 13-ಇಂಚಿನ ಮಾದರಿಗಳು) ಮತ್ತು ಮಿ ನೋಟ್‌ಬುಕ್ ಪ್ರೊ 15.6-ಇಂಚಿನ ಲ್ಯಾಪ್‌ಟಾಪ್‌ಗಳಿಗೂ ಸಹ 65W ಪಿಡಿ ಫಾಸ್ಟ್ ಚಾರ್ಜರ್ ಬೆಂಬಲವನ್ನು ನೀಡುತ್ತದೆ.

ವೋಲ್ಟೇಜ್ ಡಿಟೆಕ್ಷನ್ ಫೀಚರ್

ಈ ಫಾಸ್ಟ್‌ ಚಾರ್ಜರ್ ಸ್ಮಾರ್ಟ್‌ ವೋಲ್ಟೇಜ್ ಡಿಟೆಕ್ಷನ್ ಫೀಚರ್‌ ಅನ್ನು ಹೊಂದಿದ್ದು, ವಿದ್ಯುತ್ ವೋಲ್ಟೇಜ್ ಮಟ್ಟವನ್ನು ಗ್ರಹಿಸಬಲ್ಲ ಸಾಮರ್ಥ್ಯ ಪಡೆದಿದೆ. ಹಾಗೆಯೇ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ಗಳಿಂದ ರಕ್ಷಣೆಗಾಗಿ ಈ ಚಾರ್ಕರ್ ಚಾರ್ಜ್ ಬಿಲ್ಟ್‌ ಇನ್ ಸೇಫ್ಟಿ ಸೌಲಭ್ಯವನ್ನು ಒಳಗೊಂಡಿದೆ. ಶಿಯೋಮಿ ಹೊಸ 65W PD ಫಾಸ್ಟ್‌ ಚಾರ್ಜರ್ ಬೆಲೆಯು ಚೀನಾದಲ್ಲಿ RMB 99 ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಭಾರತದಲ್ಲಿ ಅಂದಾಜು 1,050ರೂ. ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ.

Most Read Articles
Best Mobiles in India

English summary
Xiaomi offers a single USB Type-C port and a foldable pin, which makes it portable.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X