ಶಿಯೋಮಿಯಿಂದ ಹೊಸ ಇಯರ್‌ಫೋನ್ ಲಾಂಚ್!..ಬೆಲೆ ಜಸ್ಟ್ 799ರೂ!

|

ಚೀನಾ ಮೂಲದ ಜನಪ್ರಿಯ ಶಿಯೋಮಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಟೆಕ್ ಉತ್ಪನ್ನಗಳನ್ನು ಪರಿಚಯಿಸಿ ಗಟ್ಟಿ ಸ್ಥಾನ ಪಡೆದಿದೆ. ಶಿಯೋಮಿಯು ಇದೀಗ ಭಾರತದಲ್ಲಿ ಹೊಸದಾಗಿ ಇಯರ್‌ಫೋನ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆ ಮಾಡಿದೆ. ಈ ಇಯರ್‌ಫೋನ್ ಸಹ ಅಗ್ಗದ ಬೆಲೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಅಬ್ಬರಿಸುವ ಸೂಚನೆ ಹೊರಹಾಕಿದೆ.

ಶಿಯೋಮಿಯು ಸಂಸ್ಥೆ

ಹೌದು, ಶಿಯೋಮಿಯು ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿಗ ಮಿ ಡ್ಯುಯಲ್ ಡ್ರೈವರ್ ಇಯರ್‌ಫೋನ್ ಉತ್ಪನ್ನವನ್ನು ಲಾಂಚ್ ಮಾಡಿದೆ. ಈ ಇಯರ್‌ಫೋನ್ 10mm ಮತ್ತು 8mm ಸಾಮರ್ಥ್ಯದ ಎರಡು ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿರುವುದು ಪ್ರಮುಖ ಅಟ್ರ್ಯಾಕ್ಷನ್ ಆಗಿದೆ. ಇದರೊಂದಿಗೆ ಹಗುರವಾದ ರಚನೆ, ಸ್ಕ್ರಾಚ್‌ಗಳಿಂದ ರಕ್ಷಣೆವುಳ್ಳ ರಚನೆ ಹಾಗೂ ವಾಟರ್‌ಪ್ರೂಫ್‌ ಸೌಲಭ್ಯವನ್ನು ಪಡೆದಿದೆ.

ಫಿಂಗರ್‌ಪ್ರಿಂಟ್ ರೆಸಿಸ್ಟಂಟ್

ಮಿ ಇಯರ್‌ಫೋನ್ ಫಿಂಗರ್‌ಪ್ರಿಂಟ್ ರೆಸಿಸ್ಟಂಟ್ ರಚನೆಯನ್ನು ಹೊಂದಿದ್ದು, ವ್ಯಾಲ್ಯೂಮ್, ಕರೆ ಸ್ವೀಕರಿಸಲು ಅಗತ್ಯ ಮೂರು ಬಟನ್‌ಗಳನ್ನು ಹೊಂದಿದೆ. ಹಾಗೆಯೆ ಡಿಜಿಟಲ್ ವಾಯಿಸ್ ಅಸಿಸ್ಟಂಟ್ ಸೌಲಭ್ಯ ಇದ್ದು, ಗೂಗಲ್ ಅಸಿಸ್ಟಂಟ್, ಆಪಲ್ ಸಿರಿ ಮತ್ತು ಅಮೆಜಾನ್ ಅಲೆಕ್ಸಾ ಸಫೋರ್ಟ್‌ ಅನ್ನು ಪಡೆದಿದೆ. ಹೀಗಾಗಿ ಬಳಕೆದಾರರು ವಾಯಿಸ್‌ ಮೂಲಕವೇ ಆಡಿಯೊ ನಿಯಂತ್ರಣ ಮಾಡಬಹುದಾಗಿದೆ.

 ಜಾರದಂತಹ ಡಿಸೈನ್

ಇಯರ್‌ಫೋನ್ ಬಡ್ಸ್‌ ಕಿವಿಯಿಂದ ಜಾರದಂತಹ ಡಿಸೈನ್ ಹೊಂದಿದ್ದು, ಕನೆಕ್ಟಿವಿಟಿ ಸೌಲಭ್ಯಗಳು ಸಹ ಉತ್ತಮವಾಗಿವೆ. ನಾಯಿಸ್‌ ಕ್ಯಾನ್ಸ್‌ಲೇಶನ್ ಬೆಂಬಲ ಸಹ ಒಳಗೊಂಡಿದೆ. 10mm ಮತ್ತು 8mm ಆಡಿಯೊ ಡ್ರೈವರ್ಸ್‌ಗಳು ಇಯರ್‌ಫೋನಿನ ಸೌಂಡ್ ಬೂಸ್ಟ್ ಮಾಡಲು ನೆರವಾಗಲಿವೆ. ಇಯರ್‌ಬಡ್ಸ್‌ಗಳು ಮ್ಯಾಗ್ನೇಟಿಕ್ ರಚನೆ ಹೊಂದಿದ್ದು, ಹೀಗಾಗಿ ಬಡ್ಸ್‌ಗಳು ತೊಡಕಾಗುವ ಸಾಧ್ಯತೆಗಳು ಕಡಿಮೆ.

ಮಿ ಇಯರ್‌ಫೋನ್

ಮಾರುಕಟ್ಟೆಯಲ್ಲಿ ಮಿ ಇಯರ್‌ಫೋನ್ ಡಿವೈಸ್ ಬೆಲೆಯು 799ರೂ. ಆಗಿದ್ದು, ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ ಅಮೆಜಾನ್ ತಾಣ, Mi.Com ಮತ್ತು Mi ಹೋಮ್ಸ್‌ ತಾಣಗಳಲ್ಲಿ ಖರೀದಿಗೆ ಲಭ್ಯ ವಿದೆ. ಹಾಗೆಯೇ ಮಿ ಸ್ಟೋರ್ಟ್ಸ್ ಇಯರ್‌ಬಡ್ಸ್ ಬೆಲೆಯು 1,499ರೂ ಆಗಿದೆ. ಮಿ ಸ್ಟೋರ್ಟ್ಸ್ ಇಯರ್‌ಬಡ್ಸ್ ಬೇಸಿಕ್ ವೇರಿಯಂಟ್ ಬೆಲೆಯು 1299ರೂ. ಆಗಿದೆ. ಅಮೆಜಾನ್ ಇ-ಕಾಮರ್ಸ್ ತಾಣಸಲ್ಲಿ ಲಭ್ಯ.

Most Read Articles
Best Mobiles in India

English summary
Mi Dual Driver in-ear earphones come with 10mm and 8mm dual drivers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X