ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

|

ಅಗ್ಗದ ಉತ್ಪನ್ನಗಳ ಪರಿಚಯಿಸುವ ಮೂಲಕ ಭಾರತದಲ್ಲಿ ಜನಪ್ರಿಯವಾಗಿರುವ ಶಿಯೋಮಿ ಕಂಪನಿಯು ಇದೇ ಜುಲೈ 17ರಂದು ಬಹುನಿರೀಕ್ಷಿತ 'ರೆಡ್ಮಿ ಕೆ20' ಮತ್ತು 'ಕೆ20 ಪ್ರೊ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ದೇಶಿಯ ಮಾರುಕಟ್ಟೆಗೆ ಶಿಯೋಮಿಯು ಹೊಸ 'ಮಿ ನೆಕ್‌ಬ್ಯಾಂಡ್‌ ಬ್ಲೂಟೂತ್ ಇಯರ್‌ಫೋನ್‌' ಅನ್ನು ಸಹ ಲಾಂಚ್‌ ಮಾಡಿದ್ದು, ಇದು ಮ್ಯೂಸಿಕ್ ಪ್ರಿಯರಿಗೆ ಭಾರಿ ಖುಷಿ ನೀಡಿದೆ.

ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಹೌದು, ಶಿಯೋಮಿ ಕಂಪನಿಯು ಇದೀಗ ಹೊಸದಾಗಿ 'ಮಿ ನೆಕ್‌ಬ್ಯಾಂಡ್‌ ಬ್ಲೂಟೂತ್ ಇಯರ್‌ಫೋನ್‌' ಲಾಂಚ್ ಮಾಡಿದ್ದು, ಮೊದಲ ಸೇಲ್ ಇದೇ ಜುಲೈ 23ರಂದು ನಡೆಯಲಿದೆ. ಸ್ಕೀನ್ ಫ್ರೆಂಡ್ಲಿ ಮೆಟಿರಿಯಲ್‌ನ ರಚನೆಯಲ್ಲಿರುವ ಈ ಇಯರ್‌ಫೋನ್‌ ಡೈನಾಮಿಕ್ ಬಾಸ್‌ ಔಟ್‌ಪುಟ್‌ ಮತ್ತು ಟ್ರೈ ಬ್ಯಾಂಡ್‌ ಇಕ್ವಾಲಿಜೆಶನ್ ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ವಾಯಿಸ್‌ ಕಮಾಂಡ್‌ ಮೂಲಕ ನಿಯಂತ್ರಿಸಬಹುದಾಗಿದೆ.

ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಸುಮಾರು 8 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಬ್ಲೂಟೂತ್‌ ಕನೆಲ್ಟಿವಿಟಿಗಾಗಿ 10 ಮೀಟರ್‌ ವ್ಯಾಪ್ತಿಯನ್ನು ಕವರೇಜ್ ಮಾಡಲಿದೆ. ಬ್ಲೂಟೂತ್ 5.0 ಸಾಮರ್ಥ್ಯದಲ್ಲಿದ್ದು, ಹಾಗೆಯೇ HFP, A2DP, HSP ಮತ್ತು AVRCP ಪ್ರೊಟೊಕಾಲ್‌ ಸೌಲಭ್ಯದ ಬೆಂಬಲ ಪಡೆದಿದೆ. ಹಾಗಾದರೇ ಶಿಯೋಮಿ ಮಿ ನೆಕ್‌ಬ್ಯಾಂಡ್‌ ಬ್ಲೂಟೂತ್ ಇಯರ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

ಡಿಸೈನ್‌ ಹೇಗಿದೆ

ಡಿಸೈನ್‌ ಹೇಗಿದೆ

ಶಿಯೋಮಿಯ 'ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್' ಆಕರ್ಷಕ ರಚನೆಯನ್ನು ಹೊಂದಿದೆ. ಅತೀ ಹಗುರವಾಗಿದ್ದು, ಕೇವಲ 13.6ಗ್ರಾಂ ತೂಕವನ್ನು ಪಡೆದಿದೆ. ಮೈಕ್ರೋ-Arc ಕಾಲರ್ ಡಿಸೈನ್‌ ಹೊಂದಿದ್ದು, ಸ್ಕೀನ್ ಫ್ರೆಂಡ್ಲಿ ಮೆಟಿರಿಯಲ್‌ನಿಂದ ರಚಿತವಾಗಿರುವುದರಿಂದ ಅತ್ಯುತ್ತಮ ಕಂಫರ್ಟ್‌ ಒದಗಿಸಲಿದೆ. ಮ್ಯಾಗ್ನೇಟಿಕ್‌ ಬಡ್ಸ್‌ಗಳನ್ನು ನೀಡಿದ್ದು, ಒಂದಕ್ಕೊಂದು ಜಾಯಿಂಟ್ ಆಗುತ್ತವೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಶಿಯೋಮಿಯ 'ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್' 120mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 8 ಗಂಟೆಗಳ ಕಾಲ ಬಾಳಿಕೆ ಒದಗಿಸಲಿದೆ. ಹಾಗೆಯೇ ಈ ಬ್ಯಾಟರಿಯು 260 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒಳಗೊಂಡಿದ್ದು, ನಿರಂತರ 8 ಗಂಟೆಗಳ ಪ್ಲೇಬ್ಯಾಕ್ ಪವರ್‌ ಪಡೆದಿದೆ.

ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ 'ಪಬ್ಲಿಕ್ ಟಾಯ್ಲೆಟ್‌' ಲೊಕೇಶನ್! ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ 'ಪಬ್ಲಿಕ್ ಟಾಯ್ಲೆಟ್‌' ಲೊಕೇಶನ್!

ವಾಯಿಸ್‌ ಕಮಾಂಡ್

ವಾಯಿಸ್‌ ಕಮಾಂಡ್

ಶಿಯೋಮಿಯ ಈ ಇಯರ್‌ಫೋನ್ ಬ್ಲೂಟೂತ್ ಆಧಾರಿತವಾಗಿ ಕನೆಕ್ಟ್‌ ಆಗಲಿದ್ದು, ಹಾಗೆಯೇ ಬಿಲ್ಟ್‌ಇನ್‌ ವಾಯಿಸ್‌ ಕಮಾಂಡ್ ಫೀಚರ್‌ ಹೊಂದಿದೆ. ಈ ಆಯ್ಕೆಯು ನೆರವಿನಿಂದ ವಾಯಿಸ್‌ ಮೂಲಕವೇ ಹಾಡುಗಳನ್ನು ಬದಲಾಯಿಸಲು, ಸೌಂಡ್‌ ಏರಿಳಿತ, ಕರೆಗಳನ್ನು ಸ್ವೀಕರಿಸಲು ಸೇರಿದಂತೆ ಇಯರ್‌ಫೋನ್‌ ನಿಯಂತ್ರಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ಗೆ ಉತ್ತಮ ಬೆಂಬಲ ನೀಡಲಿದೆ.

ಕನೆಕ್ಟಿವಿಟಿ ಫೀಚರ್ಸ್

ಕನೆಕ್ಟಿವಿಟಿ ಫೀಚರ್ಸ್

ಶಿಯೋಮಿಯ ಹೊಸ 'ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್' ಬ್ಲೂಟೂತ್ 5.0 ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ HFP, A2DP, HSP ಮತ್ತು AVRCP ಪ್ರೊಟೊಕಾಲ್‌ ಆಯ್ಕೆಗಳನ್ನು ಸಹ ಒದಗಿಸಲಾಗಿದೆ. ಸುಮಾರು 10 ಮೀಟರ್‌ ವ್ಯಾಪ್ತಿಯ ಬ್ಲೂಟೂತ್ ಕವರೇಜ್ ಸಾಮರ್ಥ್ಯವನ್ನು ಈ ಇಯರ್‌ಫೋನ್ ಒಳಗೊಂಡಿದೆ.

ಓದಿರಿ : ವಾಟ್ಸಪ್‌ನಲ್ಲಿ 'ಡಿಜಿಟಲ್ ಪೇಮೆಂಟ್' ಸೇವೆ!ಓದಿರಿ : ವಾಟ್ಸಪ್‌ನಲ್ಲಿ 'ಡಿಜಿಟಲ್ ಪೇಮೆಂಟ್' ಸೇವೆ!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿಯ ಹೊಸದಾಗಿ 'ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್' ಇದೇ ಜುಲೈ 17ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಡಿವೈಸ್ ಇದೇ ಜುಲೈ 23ರಂದು ಫ್ಲಿಪ್‌ಕಾರ್ಟ್‌ ಮತ್ತು ಕಂಪನಿಯ ಅಧಿಕೃತ Mi.com ತಾಣಗಳ ಮೊದಲ ಸೇಲ್ ಆರಂಭಿಸಲಿದೆ. ಈ ಇಯರ್‌ಫೋನ್‌ 1,599ರೂ,ಗಳ ಪ್ರೈಸ್‌ಟ್ಯಾಗ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ! ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ!

Best Mobiles in India

English summary
Xiaomi has launched the Mi Neckband Bluetooth Earphones alongside the Redmi K20 Pro and Redmi K20 smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X