ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಯ್ತು ಶಿಯೋಮಿಯ 'ಮಿ ಟಿವಿ 4X' ಸರಣಿ!

|

ಶಿಯೋಮಿಯ ಕಂಪನಿಯ ಈಗಾಗಲೇ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ ಕಂಪನಿಯು ಮತ್ತೊಂದು ಅಗ್ಗದ ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿ ಸಂಚಲಯ ಮೂಡಿಸಿದೆ. ಅದುವೇ ಬಹುನಿರೀಕ್ಷಿತ 'ಮಿ ಟಿವಿ 4X' ಟಿವಿ ಸರಣಿ ಆಗಿದ್ದು, ಈ ಸರಣಿಯ ಟಿವಿಗಳು ಆಂಡ್ರಾಯ್ಡ್‌ ಓಎಸ್‌ ಬೆಂಬಲವನ್ನು ಪಡೆದಿವೆ. ಹಾಗೂ 4K UHD ಸೌಲಭ್ಯಗಳನ್ನು ಪಡೆದಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪನಿಯು ಇಂದು (ಸೆ.17) ಬೆಂಗಳೂರಿನಲ್ಲಿ ನಡೆದ 'ಸ್ಮಾರ್ಟ್‌ರ್ ಲಿವಿಂಗ್-2020' ಕಾರ್ಯಕ್ರಮದಲ್ಲಿ ದೇಶಿಯ ಮಾರುಕಟ್ಟೆಗೆ 'ಮಿ ಟಿವಿ 4X' ಟಿವಿ ಸರಣಿ ಬಿಡುಗಡೆ ಮಾಡಿದೆ. ಈ ಟಿವಿ ಸರಣಿಯು 65 ಇಂಚಿನ, 50ಇಂಚಿನ ಮತ್ತು 43ಇಂಚಿನ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಜೊತೆಗೆ ಪಾಚ್‌ವಾಲ್‌ 2.0, ಡಾಲ್ಬಿ ಮತ್ತು ಡಿಟಿಎಸ್‌ ಸೌಂಡ್‌ ಔಟ್‌ಪುಟ್‌ ಆಯ್ಕೆಗಳನ್ನು ಪಡೆದಿವೆ. ಹಾಗಾದರೇ ಶಿಯೋಮಿ 'ಮಿ ಟಿವಿ 4X' ಟಿವಿ ಸರಣಿಯು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಶಿಯೋಮಿಯ ಮಿ ಟಿವಿ 4X ಟಿವಿ ಸರಣಿಯಲ್ಲಿ ದೊಡ್ಡ ಸ್ಕ್ರೀನ್‌ ವೇರಿಯಂಟ್‌ನ ಡಿಸ್‌ಪ್ಲೇಯು 65 ಇಂಚಿನ LED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 3840 x 2160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. HDR ಮತ್ತು 4K ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಜೊತೆಗೆ ಎಚ್‌ಆರ್‌ಡಿ ವಿಡಿಯೊಗಳನ್ನು ಸಹ ಸಪೋರ್ಟ್‌ ಮಾಡುತ್ತದೆ. ನೋಡಲು ಆಕರ್ಷಕವಾಗಿದ್ದು, ಸುತ್ತಲೂ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗೆಯೇ 50ಇಂಚಿನ ಮತ್ತು 43ಇಂಚಿನ ವೇರಿಯಂಟ್‌ ಆಯ್ಕೆ ಸಹ ಇದೆ.

ಫೀಚರ್ಸ್‌ಗಳೇನು

ಫೀಚರ್ಸ್‌ಗಳೇನು

ಮಿ ಟಿವಿ 4X ಟಿವಿ ಸರಣಿಯು 1.5GHz ಕ್ವಾಡ್‌ಕೋರ್ ಪ್ರೊಸೆಸರ್‌ ಜೊತೆಗೆ 750MHz Mali-450 GPU ಅನ್ನು ಒಳಗೊಂಡಿದೆ. ಇದರೊಂದಿಗೆ 2GB RAM ಮತ್ತು 8GB ಸ್ಟೋರೇಜ್ ಆಯ್ಕೆಯನ್ನು ಹೊಂದಿದ್ದು, ವೈಫೈ, ಬ್ಲೂಟೂತ್, ಮೂರು ಎಚ್‌ಡಿಎಮ್‌ಐ ಫೋರ್ಟ್‌ಗಳು, ಎರಡು ಯುಎಸ್‌ಬಿ ಫೋರ್ಟ್‌ಗಳು ಮತ್ತು ಐದರನೆಟ್‌ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ನೆಟ್‌ಫ್ಲಿಕ್ಸ್‌ ಮತ್ತು ಸೌಂಡ್

ನೆಟ್‌ಫ್ಲಿಕ್ಸ್‌ ಮತ್ತು ಸೌಂಡ್

ಮಿ ಟಿವಿ 4X ಟಿವಿ ಸರಣಿಯು ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್‌ ನೆಟ್‌ಫ್ಲಿಕ್ಸ್‌ ಇನ್‌ಬಿಲ್ಟ್‌ ಹೊಂದಿರಲಿದೆ. ಹಾಗೂ ಡಾಲ್ಬಿ ಸೌಂಡ್‌ ಮತ್ತು ಡಿಟಿಎಸ್‌ ಸೌಂಡ್‌ನ ಬೆಂಬಲ ಪಡೆದಿದ್ದು, ಅತ್ಯುತ್ತಮ ಸೌಂಡ್‌ ಔಟ್‌ಪುಟ್‌ ಹೊರಹಾಕಲಿದೆ. ಆಂಡ್ರಾಯ್ಡ್‌ ಆಧಾರಿತ PatchWall ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಬ್ಲೂಟೂತ್ ವಾಯಿಸ್‌ ಕಂಟ್ರೂಲ್ ಸೌಲಭ್ಯವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಿ ಟಿವಿ 4X 65 ಟಿವಿಯು ಇಂದು (ಸೆಪ್ಟೆಂಬರ್ 17) ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದ್ದು, ಈ ಮೊದಲು ಈ ಟಿವಿಯು ಚೀನಾದಲ್ಲಿ ಬಿಡುಗಡೆ ಆಗಿತ್ತು. ಸದ್ಯ ಭಾರತದಲ್ಲಿ ಮಿ ಟಿವಿ 4X 65 ಟಿವಿ ಬೆಲೆಯು 54,999ರೂ.ಗಳಾಗಿದೆ. ಹಾಗೆಯೇ 'ಮಿ ಟಿವಿ 4X- 50' ಇಂಚಿನ ಟಿವಿಯ ಬೆಲೆಯು 29,999ರೂ.ಗಳಾಗಿದೆ. ಹಾಗೂ 'ಮಿ ಟಿವಿ 4X- 43' ಇಂಚಿನ ಟಿವಿಯು 24,999ರೂ. ಪ್ರೈಸ್‌ಟ್ಯಾಗ್‌ ಹೊಂದಿದೆ. ಇದರೊಂದಿಗೆ ಶಿಯೋಮಿ 'ಮಿ ಬ್ಯಾಂಡ್‌ 4' ಡಿವೈಸ್‌ ಸಹ ರಿಲೀಸ್‌ ಮಾಡಿದ್ದು, ಅದು 2,299ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
Xiaomi has launched its 65-inch Mi TV 4X in India. This is the biggest TV yet from the Chinese smartphone maker in the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X