Home
ಸುದ್ದಿಜಾಲ

Xiaomi: ಶಿಯೋಮಿ ಮಿ 10T 5G ಫೋನ್‌ಗೆ 43% ರಿಯಾಯಿತಿ! 64MP ಕ್ಯಾಮೆರಾ..8GB RAM

ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪ್ರೀಮಿಯಂ ಫೀಚರ್ಸ್‌ ಆಯ್ಕೆ ನೀಡುವ ಕಂಪೆನಿ ಎಂದರೆ ಅದು ಶಿಯೋಮಿ(Xiaomi). ಅದರಂತೆ ಈಗ ಶಿಯೋಮಿಯ ಈ ಫೋನ್‌ಗೆ ಆನ್‌ಲೈನ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ಶಿಯೋಮಿ ಮಿ 10T 5G (Xiaomi Mi 10T 5G) ಸ್ಮಾರ್ಟ್‌ಫೋನ್‌ಗೆ ಈಗ ದೊಡ್ಡ ಮಟ್ಟದ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಆಯ್ಕೆ ಹಾಗೂ 64MP ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಮೂಲಕ ಗ್ರಾಹಕರು ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶಿಯೋಮಿ ಮಿ 10T 5G ಫೋನ್‌ಗೆ 43% ರಿಯಾಯಿತಿ! 64MP ಕ್ಯಾಮೆರಾ..8GB RAM

ಶಿಯೋಮಿ ಮಿ 10T 5G ಫೋನ್‌ ಆಫರ್ ವಿವರ: ಈ ಫೋನ್‌ ಸಾಮಾನ್ಯ ದರ 39,999ರೂ.ಗಳಾಗಿದೆ. ಆದರೆ, ನೀವು ಈಗ ಇದನ್ನು ಅಮೆಜಾನ್‌ನಲ್ಲಿ ಅಫರ್ ಬೆಲೆ 22,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇದರೊಂದಿಗೆ ನೀವು ಇನ್ನೂ ಕಡಿಮೆ ಬಲೆಯಲ್ಲಿ ಈ ಫೋನ್‌ ಖರೀದಿ ಮಾಡಬೇಕು ಎಂದರೆ ಬ್ಯಾಂಕ್‌ ಆಫರ್ ಹಾಗೂ ವಿನಿಮಯ ಆಫರ್ ಸಹ ಬಳಕೆ ಮಾಡಬಹುದು. ಇದರಿಂದ 21,100ರೂ. ವರೆಗೆ ಉಳಿತಾಯ ಮಾಡಬಹುದಾಗಿದೆ.

ಇನ್ನು ಗ್ರಾಹಕರಿಗೆ ಬರೀಬ್ಬರಿ 19 ರೀತಿಯ ಬ್ಯಾಂಕ್‌ ಆಫರ್‌ ಅನ್ನು ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಕ್ರೆಡಿಟ್ ಇಎಮ್‌ಐ ವ್ಯವಹಾರದ ಮೇಲೆ ಮೇಲೆ ಫ್ಲಾಟ್ 500 ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನಲ್ಲಿ 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ದಿನಗಳಿಗೆ 500ರೂ. ವರೆಗಿನ ತ್ವರಿತ ರಿಯಾಯಿತಿ, ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಫ್ಲಾಟ್ 1000ರೂ.ತ್ವರಿತ ರಿಯಾಯಿತಿ ಸಿಗಲಿದೆ.

ಶಿಯೋಮಿ ಮಿ 10T 5G ಫೋನ್‌ಗೆ 43% ರಿಯಾಯಿತಿ! 64MP ಕ್ಯಾಮೆರಾ..8GB RAM

ಶಿಯೋಮಿ ಮಿ 10T 5G ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.67 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್‌ ಹಾಗೂ 20:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಈ ಡಿಸ್ಪ್ಲೇ ಪಂಚ್-ಹೋಲ್ ಆಕಾರ ಪಡೆದಿದ್ದು, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಉತ್ತಮ ಎನಿಸಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ರಕ್ಷಣೆಯನ್ನು ಈ ಫೋನ್‌ ಪಡೆದಿದೆ.

ಶಿಯೋಮಿ ಮಿ 10T 5G ಫೋನ್‌ ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಆಕ್ಟಾ-ಕೋರ್ 2.84GHz ಕ್ರಿಯೋ 585, 2.42GHz ಕ್ರಿಯೋ 585 ಮತ್ತು 1.8GHz ಕ್ರಿಯೋ 585 ನಿಂದ ಚಾಲಿತವಾಗಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 CPU ಗೆ ಬಲದೊಂದಿಗೆ ಕೆಲಸ ಮಾಡಲಿದೆ. ಜೊತೆಗೆ ಅಡ್ರಿನೋ 650 GPU ಮತ್ತು 8GB RAM ಈ ಫೋನ್‌ ಅನ್ನು ಇನ್ನಷ್ಟು ವೇಗವಾಗಿ ಕೆಲಸ ಮಾಡುವಂತೆ ಸಹಕಾರ ನೀಡಲಿವೆ.

ಶಿಯೋಮಿ ಮಿ 10T 5G ಫೋನ್‌ಗೆ 43% ರಿಯಾಯಿತಿ! 64MP ಕ್ಯಾಮೆರಾ..8GB RAM

ಶಿಯೋಮಿ ಮಿ 10T 5G ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬಂದರೆ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಸೆನ್ಸರ್‌ ಮತ್ತು 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಈ ಫೋನ್‌ ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 20 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಶಿಯೋಮಿ ಮಿ 10T 5G ಫೋನ್‌ ಬ್ಯಾಟರಿ ಸಾಮರ್ಥ್ಯ: ಇನ್ನು ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಕೇವಲ 59 ನಿಮಿಷಗಳಲ್ಲಿ ಈ ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಜೊತೆಗೆ ದೀರ್ಘಾವಧಿಯ ಬ್ಯಾಕಪ್‌ ಸಹ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Xiaomi Mi 10T 5G smartphone is now on a huge offer. This smartphone has got 8GB RAM option and triple rear camera option with 64MP main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+