ಶ್ಯೋಮಿ ಮತ್ತು ಅಸೂಸ್ ಕಾದಾಟ ನಿಮ್ಮ ಮತ ಯಾರಿಗೆ?

Written By:

ಮಾರುಕಟ್ಟೆಯಲ್ಲಿ ಪ್ರಸ್ತುತ ರೂ 12,000 ದಿಂದ ರೂ 14,000 ದ ಒಳಗಿನ ಫೋನ್‌ಗಳನ್ನು ಖರೀದಿಸಲು ನೀವು ಉತ್ಸುಕರಾಗಿದ್ದೀರಿ ಎಂದಾದಲ್ಲಿ ನಾವು ನಿಮಗಾಗಿ ಒಳ್ಳೆಯ ಸುದ್ದಿಯನ್ನು ನೀಡುತ್ತಿದ್ದೇವೆ. ಶ್ಯೋಮಿ ಮತ್ತು ಅಸೂಸ್ ಫೋನ್‌ಗಳು ಇದೇ ಬೆಲೆಗೆ ತಮ್ಮ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದ್ದು ಫೋನ್ ಖರೀದಿಸಲು ಇದು ಅತ್ಯುತ್ತಮ ಅವಕಾಶ ಎಂದೆನಿಸಿದೆ.

ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

ಇಂದಿನ ಲೇಖನದಲ್ಲಿ ಶ್ಯೋಮಿ ಎಮ್ಐ 4i ಮತ್ತು ಅಸೂಸ್ ಜೆನ್‌ಫೋನ್ 2 ನಡುವೆ ಉಳ್ಳ ವ್ಯತ್ಯಾಸಗಳನ್ನು ಗಮನಿಸೋಣ. ಬಜೆಟ್ ಶ್ರೇಣಿಯ ಡಿವೈಸ್‌ಗಳು ಇವುಗಳಾಗಿದ್ದು ನಿಮಗೆ ಉತ್ತಮ ಅವಕಾಶ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೆನ್‌ಫೋನ್ 2 ಶ್ಯೋಮಿ 4i

ವಿನ್ಯಾಸ ಮತ್ತು ರಚನೆ

ಜೆನ್‌ಫೋನ್ 2 ಮೂಲ ಜೆನ್‌ಫೋನ್ ಶ್ರೇಣಿಗೆ ಹೋಲುವಂತಿದ್ದು, ಬಾಗಿರುವ ಹಿಂಭಾಗವನ್ನು ಪಡೆದುಕೊಂಡಿದೆ, ಪ್ಲಾಸ್ಟಿಕ್ ರಚನೆಯನ್ನು ಡಿವೈಸ್ ಪಡೆದುಕೊಂಡಿದ್ದು ದೊಡ್ಡದಾದ 5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ. ಹೊರತೆಗೆಯಬಹುದಾದ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಇದ್ದು ಮೆಟಾಲಿಕ್ ಫಿನಿಶ್ ಅನ್ನು ಹೊಂದಿದೆ. ಇನ್ನು ಶ್ಯೋಮಿ 4i ನಲ್ಲಿ 5 ಇಂಚಿನ ಡಿಸ್‌ಪ್ಲೇ ಇದ್ದು ಯೂನಿಬೋಡಿ ಫ್ರೇಮ್ ಅನ್ನು ಹೊಂದಿದೆ.

ಅಸೂಸ್ ಜೆನ್‌ಫೋನ್ 2, ಶ್ಯೋಮಿ ಎಮ್ಐ 4i

ಡಿಸ್‌ಪ್ಲೇ

ಅಸೂಸ್ ಜೆನ್‌ಫೋನ್ 2, 5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಇದ್ದು ಎಮ್ಐ 4i, 5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದೆ. ಅಸೂಸ್ ಫೋನ್‌ನಲ್ಲಿ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಇದ್ದು ಫೋನ್‌ಗೆ ಗೆರೆಗಳು ಉಂಟಾಗದಂತೆ ತಡೆಯುತ್ತದೆ. ಶ್ಯೋಮಿ ಎಮ್ಐ 4i ಕೋರ್ನಿಂಗ್ ಕೋನ್‌ಕೋರ್ ಒನ್ ಗ್ಲಾಸ್ ಸಲ್ಯೂಶನ್‌ನೊಂದಿಗೆ ಬಂದಿದೆ

ಶ್ಯೋಮಿ, ಜೆನ್‌ಫೋನ್ 2

ಹಾರ್ಡ್‌ವೇರ್ ವಿಶೇಷತೆಗಳು

ಶ್ಯೋಮಿ 1.7 GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಅನ್ನು ಪಡೆದುಕೊಂಡಿದ್ದು 64 ಬಿಟ್ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. ಅಡ್ರೆನೊ 405 ಜಿಪಿಯು ಮತ್ತು 2 ಜಿಬಿ RAM ಇದರಲ್ಲಿದೆ. ಇನ್ನು ಜೆನ್‌ಫೋನ್ 2 ಇಂಟೆಲ್‌ನ ಕ್ವಾಡ್ ಕೋರ್ 1.8 GHZ ಆಟಮ್ Z3560 ಪ್ರೊಸೆಸರ್ ಡಿವೈಸ್‌ನಲ್ಲಿದೆ. ಫೋನ್ 2 ಜಿಬಿ RAM ಅನ್ನು ಒಳಗೊಂಡಿದೆ.

ಅಸೂಸ್ ಜೆನ್‌ಫೋನ್ 2, ಶ್ಯೋಮಿ ಎಮ್ಐ 4i

ಕ್ಯಾಮೆರಾ

ಅಸೂಸ್ ಜೆನ್‌ಫೋನ್ 2 ನಲ್ಲಿ 13 ಎಮ್‌ಪಿ ರಿಯರ್ ಕ್ಯಾಮೆರಾ ಇದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಕಾಣಬಹುದಾಗಿದೆ. ಶ್ಯೋಮಿ ಎಮ್ಐ 4i, 13 ಎಮ್‌ಪಿ ಸೋನಿ/ಸ್ಯಾಮ್‌ಸಂಗ್ ಕ್ಯಾಮೆರಾವನ್ನು ಹೊಂದಿದ್ದು, ಎರಡು ಟೋನ್ ಫ್ಲ್ಯಾಶ್, ಅಂತೆಯೇ 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಲಾಲಿಪಪ್

ಸಾಫ್ಟ್‌ವೇರ್ ಮತ್ತು ವಿಶೇಷ ಫೀಚರ್‌ಗಳು

ಅಸೂಸ್ ಜೆನ್‌ಫೋನ್ ಜೆನ್‌ಫೋನ್ 2 ನವೀಕೃತ ಆವೃತ್ತಿಯನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಇದರಲ್ಲಿ ಕಾಣ ಬಹುದು. ಶ್ಯೋಮಿ ಎಮ್ಐ 4i ನಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಇದ್ದು ಕಂಪೆನಿಯ ಅತ್ಯಾಧುನಿಕ ಆಪರೇಟಿಂಗ್ ಸಿಸ್ಟಮ್ ಅನ್ನು ನಮಗೆ ಕಾಣಬಹುದಾಗಿದೆ.

ಉತ್ತಮ ಉತ್ಪನ್ನ

ಕೊನೆಯ ಮಾತು

ರೂ 12,999 ಕ್ಕೆ ಶ್ಯೋಮಿ ಎಮ್ಐ 4i ಮತ್ತು ಅಸೂಸ್ ಜೆನ್‌ಪೋನ್ 2 ನೀವು ಕೊಡುವ ದುಡ್ಡಿಗೆ ಉತ್ತಮ ಉತ್ಪನ್ನ ಇದಾಗಿದೆ. ಈ ಎರಡೂ ಡಿವೈಸ್‌ಗಳು ನಿಮ್ಮ ಬಳಕೆಗೆ ಅತ್ಯುತ್ತಮ ಎಂದೆನಿಸಿದ್ದು ನಿಮ್ಮ ಆಯ್ಕೆಯ ಫೋನ್‌ಗಳು ಇವುಗಳಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you’re in the market for a premium budget smartphone that costs between Rs 12,000 to 14,000, we have some good news. The good news is that there are plenty of options including the two new offerings from Xiaomi and Asus.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot