Just In
Don't Miss
- News
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಶಿಯೋಮಿಯಿಂದ 'ಮಿ ಸ್ಮಾರ್ಟ್ ಬ್ಯಾಂಡ್ 3i' ಲಾಂಚ್!..ಬೆಲೆ ಜಸ್ಟ್ 1299ರೂ.!
ಶಿಯೋಮಿ ಕಂಪನಿಯು ಹಲವು ಸ್ಮಾರ್ಟ್ ಉತ್ಪನ್ನಗಳಿಂದ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದ್ದು, ಅವುಗಳಲ್ಲಿ ಮುಖ್ಯವಾಗಿ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಬ್ಯಾಂಡ್‌ಗಳು ಹೆಚ್ಚು ಮಾರಾಟ ಕಂಡಿವೆ. ಇತ್ತೀಚಿಗೆ 'ಮಿ ಬ್ಯಾಂಡ್ 4' ಡಿವೈಸ್ ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿದ್ದ ಶಿಯೋಮಿ ಸಂಸ್ಥೆಯು ಈಗ ಮತ್ತೆ ಹೊಸದಾಗಿ 'ಶಿಯೋಮಿ ಬ್ಯಾಂಡ್ 3i' ಡಿವೈಸ್ ಅನ್ನು ಪರಿಚಯಿಸಿದೆ. ಈ ಡಿವೈಸ್ ಫಿಟ್ನೆಸ್ ವಲಯದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುವ ಲಕ್ಷಣಗಳನ್ನು ಹೊರಹಾಕಿದೆ.

ಹೌದು, ಶಿಯೋಮಿ ಸಂಸ್ಥೆಯು ಇದೀಗ ಹೊಸದಾಗಿ 'ಮಿ ಸ್ಮಾರ್ಟ್ ಬ್ಯಾಂಡ್ 3i' ಫಿಟ್ನೆಸ್ ಡಿವೈಸ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬ್ಯಾಂಡ್ ನೋಡಲು ಮಿ ಸ್ಮಾರ್ಟ್ ಬ್ಯಾಂಡ್ 3 ಡಿವೈಸ್‌ನಂತಿದ್ದು, ಅಗತ್ಯ ಫಿಟ್ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬೆಲೆಯು ಕೇವಲ 1,299ರೂ.ಗಳಾಗಿದ್ದು, ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿ ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಸದ್ಯದಲ್ಲಿಯೇ ಖರೀದಿಗೆ ಸಿಗಲಿದೆ. ಹಾಗಾದರೇ ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ 0.78(1.9cm) ಇಂಚಿನ ಟಚ್‌ಸ್ಕ್ರೀನ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಬ್ಲ್ಯಾಕ್ ಮತ್ತು ವೈಟ್ ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 128 x 80 ಆಗಿದೆ. ಡಿಸ್‌ಪ್ಲೇಯು ನೋಡಲು ಆಕರ್ಷಕ ಲುಕ್‌ನಲ್ಲಿದ್ದು, ನೋಟಿಫಿಕೇಶನ್‌ಗಳನ್ನು ವೀಕ್ಷಿಸಲು ಬೆಂಬಲಿಸುತ್ತದೆ.

ಸ್ಪೆಷಲ್ ಫೀಚರ್ಸ್
ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ 5ATM ಸಾಮರ್ಥ್ಯದ ವಾಟರ್ ರೆಸಿಸ್ಟೆನ್ಸ್ ಸೌಲಭ್ಯವನ್ನು ಪಡೆದಿದ್ದು, ಡಿವೈಸ್ ಧರಿಸಿ ಸ್ವಿಮ್ಮ ಮಾಡಬಹುದಾಗಿದೆ. ರಿಯಲ್ ಟೈಮ್ ಆಕ್ಟಿವಿಟಿ ಟ್ರಾಕರ್, ಆಪ್ ನೋಟಿಫಿಕೇಶನ್, ಸ್ಲಿಪ್ ಮಾನಿಟರ್, ಇವೆಂಟ್ ರಿಮೈಂಡರ್, ಸೇರಿದಂತೆ ಅಗತ್ಯ ಫಿಟ್ನೆಸ್ ಸೌಲಭ್ಯಗಳನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಆಪ್
ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ 110mAh ಸಾಮರ್ಥ್ಯ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಸುಮಾರು 20 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒದಗಿಸಲಿದೆ. ಕಂಪನಿಯ 'ಮಿ ಫಿಟ್'(Mi Fit ) ಆಪ್ ಬೆಂಬಲವನ್ನು ಪಡೆದಿದ್ದು, ಫೋನ್ ಅನ್‌ಲಾಕ್, ಫೋನ್ ಲೊಕೇಶನ್, ಫೋನ್ ಕರೆಗಳು, ಮೆಸೆಜ್ ಆಯ್ಕೆಗಳಿಗೂ ಸಹ ಸಪೋರ್ಟ್ ಮಾಡಲಿದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ ಬ್ಲ್ಯಾಕ್ ಬಣ್ಣದ ಕಲರ್ ವೇರಿಯಂಟ್ ಆಯ್ಕೆ ಪಡೆದಿದ್ದು, 1,299ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ಶಿಯೋಮಿ ವೆಬ್‌ಸೈಟ್‌ನಲ್ಲಿ ಈ ಡಿವೈಸ್ ಅನ್ನು ಖರೀದಿಸಬಹುದಾಗಿದ್ದು, ಪ್ರಿ ಆರ್ಡರ್ ಶುರುವಾಗಿದೆ. ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ಬೆಂಬಲ ನೀಡುತ್ತದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090