ಭಾರತದಲ್ಲಿ 'ಶಿಯೋಮಿ ಬ್ಯಾಂಡ್‌ 4' ಬಿಡುಗಡೆ!..ಬೆಲೆ ಎಷ್ಟು ಅಂತಿರಾ?

|

ಚೀನಾ ಮೂಲದ ಜನಪ್ರಿಯ ಶಿಯೋಮಿ ಕಂಪನಿಯ ಫಿಟ್ನೆಸ್‌ ಬ್ಯಾಂಡ್‌ಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದ್ದು, ಆ ಸಾಲಿಗೆ ಕಂಪನಿಯು ಇತ್ತೀಚಿಗೆ ಹೊಸದಾಗಿ 'ಮಿ ಬ್ಯಾಂಡ್ 4' ಅನ್ನು ಸೇರ್ಪಡೆ ಮಾಡಿದೆ. ಈ 'ಮಿ ಬ್ಯಾಂಡ್‌ 4' ಇಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಬ್ಯಾಂಡ್‌ ಕ್ರೇಜ್‌ ಹೆಚ್ಚಿಸಲಿದೆ. ಬೆಲೆಯು ಗ್ರಾಹಕರ ಕೈಗೆಟುಕುವಂತಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪನಿಯು ಇಂದು (ಸೆ.17) ಬೆಂಗಳೂರಿನಲ್ಲಿ ನಡೆದ 'ಸ್ಮಾರ್ಟ್‌ರ್ ಲಿವಿಂಗ್-2020' ಕಾರ್ಯಕ್ರಮದಲ್ಲಿ ದೇಶಿಯ ಮಾರುಕಟ್ಟೆಗೆ 'ಮಿ ಬ್ಯಾಂಡ್‌ 4' ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಅಪ್‌ಗ್ರೇಡೆ ಫಿಟ್ನೆಸ್‌ ಟ್ರಾಕಿಂಗ್ ಫೀಚರ್ಸ್‌ಗಳು ಮತ್ತು ಕಲರ್‌ ಡಿಸ್‌ಪ್ಲೇಯು ಈ ಡಿವೈಸ್‌ನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಡಿವೈಸ್‌ ಬೆಲೆಯು 2,299 ಆಗಿದ್ದು, ಆರಂಭಿಕ ಕೊಡುಗೆಯಾಗಿ 1999ರೂ.ಗಳಿಗೆ ದೊರೆಯಲಿದೆ. ಹಾಗಾದರೇ ಶಿಯೋಮಿ 'ಮಿ ಬ್ಯಾಂಡ್ 4' ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂದು ತಿಳಿಯಲು ಮುಂದೆ ಓದಿರಿ.

ಫಿಟ್‌ನೆಸ್‌ ಡಿವೈಸ್

ಫಿಟ್‌ನೆಸ್‌ ಡಿವೈಸ್

ಶಿಯೋಮಿಯ ಮಿ ಬ್ಯಾಂಡ್ 4, ಅತ್ಯುತ್ತಮ ಫಿಟ್ನೆಸ್‌ ಡಿವೈಸ್‌ ಆಗಿದ್ದು, 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದೆ. ನಿರಂತರ ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.

ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಈ ಮಿ ಬ್ಯಾಂಡ್‌ 4, ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸಲಿದೆ.

ಸೆನ್ಸಾರ್‌ ಶಕ್ತಿ

ಸೆನ್ಸಾರ್‌ ಶಕ್ತಿ

ಮಿ ಬ್ಯಾಂಡ್ 4 ಸೆನ್ಸಾರ್‌ ಸಾಮರ್ಥ್ಯದ ಗ್ರಹಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡಿವೈಸ್‌ ವಿವಿಧ ಬಗೆಯ ಸ್ವಿಮ್ಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿ-ಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸ್ವಿಮ್ಮಿಂಗ್ ಸ್ಟೈಲ್‌ಗಳು ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್‌ ಮಾಡಲಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಶಿಯೋಮಿ ಮಿ ಬ್ಯಾಂಡ್ 4' ಡಿವೈಸ್‌ 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಶಿಯೋಮಿಯ ಮಿ ಬ್ಯಾಂಡ್ 4 ಬೆಲೆಯು 2,299ರೂ. ಆಗಿದ್ದು, ಆರಂಭಿಕ ಕೊಡುಗೆಯಾಗಿ ಕೇವಲ 1999ರೂ.ಗಳಿಗೆ ದೊರೆಯಲಿದೆ. ಈ ಡಿವೈಸ್‌ ಇದೇ ಸೆಪ್ಟೆಂಬರ್ 19ರಂದು ಸೇಲ್ ಆರಂಭವಾಗಲಿದ್ದು, ಗ್ರಾಹಕರು ಅಮೆಜಾನ್, ಅಧಿಕೃತ ಶಿಯೋಮಿ ವೆಬ್‌ಸೈಟ್‌ ಮತ್ತು ಉಳಿದಂತೆ 'ಮಿ ಹೋಮ್' ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಓದಿರಿ : ಜಿಯೋಗೆ ಅಚ್ಚರಿ ನೀಡಿದ BSNLನ ಹೊಸ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್!ಓದಿರಿ : ಜಿಯೋಗೆ ಅಚ್ಚರಿ ನೀಡಿದ BSNLನ ಹೊಸ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್!

Best Mobiles in India

English summary
Mi Band 4 goes on sale from September 19 via Amazon India and Mi Home stores across the country. priced at Rs 2,299. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X