ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

|

ಧರಿಸಬಹುದಾದ ಸ್ಮಾರ್ಟ್‌ ಡಿವೈಸ್‌ಗಳ ತಯಾರಿಕೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನ ಪಡೆದಿರುವ ಚೀನಾ ಮೂಲದ ಶಿಯೋಮಿ ಕಂಪನಿಯು ಇತ್ತೀಚಿಗೆ 'ಮಿ 3 ಸ್ಮಾರ್ಟ್‌ಬ್ಯಾಂಡ್‌' ಅನ್ನು ಪರಿಚಯಿಸಿತ್ತು. ಈ ಸ್ಮಾರ್ಟ್‌ಬ್ಯಾಂಡ್‌ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 10ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಂಡಿದೆ. ಇದೀಗ ಕಂಪನಿಯು ಮತ್ತೆ ಹೊಸ ಸ್ಮಾರ್ಟ್‌ಬ್ಯಾಂಡ್‌ ಉತ್ಪನ್ನವನ್ನು ಮಾರುಕಟ್ಟೆಗೆ ರಿಲೀಸ್‌ ಮಾಡಲು ಸಜ್ಜಾಗಿದೆ.

ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

ಹೌದು, ಶಿಯೋಮಿ ಕಂಪನಿಯ ಬುನಿರೀಕ್ಷಿತ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಶೀಘ್ರದಲ್ಲೆ ಬಿಡುಗಡೆ ಕಾಣಲಿದ್ದು, ಈ ಸ್ಮಾರ್ಟ್‌ ಬ್ಯಾಂಡ್‌ ಕಲರ್‌ ಮತ್ತು ಮೊನೊಕ್ರೋಮ್‌ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಹಾಗೆಯೇ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಹೊಂದಿರಲಿದ್ದು, ಇತ್ತೀಚಿನ ನೂತನ ಬ್ಲೂಟೂತ್‌ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿರಲಿದೆ ಎನ್ನುವ ಮಾಹಿತಿಗಳಿವೆ.

ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

ಈಗಾಗಲೇ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿರುವ ಮಿ 4 ಸ್ಮಾರ್ಟ್‌ಬ್ಯಾಂಡ್ ಡಿವೈಸ್‌ ಎರಡು ವರ್ಷನ್‌ಗಳಲ್ಲಿ ಲಾಂಚ್‌ ಆಗಲಿದೆ. ಸಂಸ್ಥೆಯ ವರ್ಚುವಲ್ ಅಸಿಸ್ಟಂಟ್‌ Xiao AI ತಂತ್ರಜ್ಞಾನವನ್ನು ಹೊಂದಿದ್ದು, ಫಿಟ್‌ನೆಸ್‌ ಪ್ರಿಯರಿಗೆ ಅತ್ಯುತ್ತಮ ಡಿವೈಸ್‌ ಎನಿಸಿಕೊಳ್ಳಲಿದೆ. ಹಾಗಾದರೇ ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಒಳಗೊಂಡಿರಬಹುದಾದ ವಿಶೇಷ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಓದಿರಿ : ಏರ್‌ಟೆಲ್ ಕೊಡುಗೆ : ಬಳಕೆದಾರರಿಗೆ ಲಭ್ಯವಾಗಲಿದೆ 400MB ಉಚಿತ ಹೆಚ್ಚುವರಿ ಡೇಟಾ!ಓದಿರಿ : ಏರ್‌ಟೆಲ್ ಕೊಡುಗೆ : ಬಳಕೆದಾರರಿಗೆ ಲಭ್ಯವಾಗಲಿದೆ 400MB ಉಚಿತ ಹೆಚ್ಚುವರಿ ಡೇಟಾ!

ಫಿಟ್‌ನೆಸ್‌ ಡಿವೈಸ್

ಫಿಟ್‌ನೆಸ್‌ ಡಿವೈಸ್

ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದ್ದು, ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ(PPG) ಎಂಬ ಹೊಸ ಆಯ್ಕೆಯನ್ನು ಹೊಂದಿದೆ. ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸುವ ಮಾಹಿತಿಯನ್ನು ನೀಡಲಿದೆ.

ಡಿಸ್‌ಪ್ಲೇ ಮತ್ತು ಬ್ಲೂಟೂತ್‌

ಡಿಸ್‌ಪ್ಲೇ ಮತ್ತು ಬ್ಲೂಟೂತ್‌

ಸದ್ಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಡಿಸ್‌ಪ್ಲೇಯು ಪೂರ್ಣ ಕಲರ್‌ ಮಾದರಿಯಲ್ಲಿರಲಿದೆ. ಇನ್ನು ಬ್ಲೂಟೂತ್‌ ಸಂಪರ್ಕವು ಲೆಟೆಸ್ಟ್‌ ವರ್ಷನ್‌ನಲ್ಲಿರಲಿದ್ದು, ಬ್ಲೂಟೂತ್ 5 ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ.

ಎರಡು ವೇರಿಯಂಟ್‌ಗಳು

ಎರಡು ವೇರಿಯಂಟ್‌ಗಳು

ಶಿಯೋಮಿ ಬಿಟುಗಡೆ ಮಾಡಲಿರುವ ಮಿ 4 ಸ್ಮಾರ್ಟ್‌ಬ್ಯಾಂಡ್‌ 'ಎನ್‌ಎಫ್‌ಸಿ' ಮತ್ತು 'ನಾನ್‌-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳನ್ನು ಹೊಂದಿರಲಿದೆ. ಎನ್‌ಎಫ್‌ಸಿ ವರ್ಷನ್‌ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ ಮಾಡೆಲ್‌ ನಂಬರ್‌ XMSH08HM ಆಗಿರಲಿದೆ ಮತ್ತು ನಾನ್‌-ಎನ್‌ಎಫ್‌ಸಿ ಡಿವೈಸ್‌ ಮಾಡೆಲ್‌ ನಂಬರ್ XMSH07HM ಆಗಿರಲಿದೆ.

ಬ್ಯಾಟರಿ

ಬ್ಯಾಟರಿ

135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸಾಧ್ಯತೆಗಳಿವೆ. ಸಂಸ್ಥೆಯ ಈ ಹಿಂದಿನ 'ಮಿ 3' ಸ್ಮಾರ್ಟ್‌ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ಹೊಂದಿತ್ತು. ಈಗ ಹೊಸ 'ಮಿ 4' ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಹೆಚ್ಚಿನ ಬ್ಯಾಟರಿ ಶಕ್ತಿ ಒದಗಿಸುವ ನಿರೀಕ್ಷೆಗಳಿವೆ. ಉತ್ತಮ ಚಾರ್ಜರ್‌ ಸೌಲಭ್ಯ ಇರಲಿದೆ.

ಬೆಲೆ

ಬೆಲೆ

ಶಿಯೋಮಿಯ ಮಿ 4 ಸ್ಮಾರ್ಟ್‌ಬ್ಯಾಂಡ್‌ ಎನ್‌ಎಫ್‌ಸಿ ವರ್ಷನ್‌ ಮಾದರಿಯ ಬೆಲೆಯು 5,040ರೂ.ಗಳು ನಾನ್‌-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ ಬೆಲೆಯು 2,000 - Rs 3,000ರೂ.ಗಳ ಅಂತರದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

Best Mobiles in India

English summary
Xiaomi Mi Band 4 leaked; may offer bigger battery, Bluetooth 5.0 and colored display.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X