ಶಿಯೋಮಿಯ 'ಮಿ ಬ್ಯಾಂಡ್ 4' ಬಿಡುಗಡೆ : ಫುಲ್ ಕಲರ್ ಡಿಸ್‌ಪ್ಲೇ!
ಟೆಕ್ ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ, ಶಿಯೋಮಿಯ ಬಹುನಿರೀಕ್ಷಿತ 'ಮಿ ಬ್ಯಾಂಡ್ 4' ಡಿವೈಸ್ ಅನ್ನು ಕಂಪನಿಯು (ಜೂನ್.11) ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಬ್ಯಾಂಡ್‌ನ ಡಿಸ್‌ಪ್ಲೇಯು AMOLED ಮಾದರಿಯ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರಾಚ್ ರೆಸಿಸ್ಟಂಟ್ ರಚನೆಯನ್ನು ಪಡೆದಿದೆ. ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಸಹ ಹೊಂದಿದೆ.

ಹೌದು, ಶಿಯೋಮಿ ಕಂಪನಿಯು 'ಮಿ 4' ಸ್ಮಾರ್ಟ್‌ಬ್ಯಾಂಡ್ ಅನ್ನು ಚೀನಾದಲ್ಲಿ ರಿಲೀಸ್ ಮಾಡಿದ್ದು, ಕಂಪನಿಯ ಮಿ 3 ಸ್ಮಾರ್ಟ್‌ಬ್ಯಾಂಡ್ ಫೀಚರ್ಸ್‌ಗಳಿಗಿಂತ ಅಡ್ವಾನ್ಸ್ ಫೀಚರ್ಸ್‌ಗಳನ್ನು ಅಳವಡಿಸಿದೆ. ಈ ಬ್ಯಾಂಡ್ ನೂತನ ಬ್ಲೂಟೂತ್ ಕನೆಕ್ಟಿವಿಟಿಯ ಸೌಲಭ್ಯವನ್ನು ಪಡೆದುಕೊಂಡಿದ್ದು, ಸಂಸ್ಥೆಯ ವರ್ಚುವಲ್ ಅಸಿಸ್ಟಂಟ್ (Xiao AI) ತಂತ್ರಜ್ಞಾನವನ್ನು ಹೊಂದಿದೆ. ಫಿಟ್‌ನೆಸ್ ಪ್ರಿಯರ ಗಮನ ಸೆಳೆಯಲಿದೆ.

ಕಲರ್ ಡಿಸ್‌ಪ್ಲೇ ಮಿ ಬ್ಯಾಂಡ್ 4 ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದು, ದೊಡ್ಡದಾದ ರಚನೆಯನ್ನು ಹೊಂದಿದೆ. ಅಸಿಸ್ಟಂಟ್ದ ನೆರವಿನಿಂದ ಕಂಪನಿಯ ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಈ ಬ್ಯಾಂಡ್ ಮೂಲಕ ನಿಯಂತ್ರಿಸಬಹುದಾಗಿದೆ. ಹಾಗಾದರೇ ಶಿಯೋಮಿಯ 'ಮಿ ಬ್ಯಾಂಡ್ 4' ಡಿವೈಸ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫಿಟ್‌ನೆಸ್ ಡಿವೈಸ್
ಶಿಯೋಮಿಯ ಮಿ ಬ್ಯಾಂಡ್ 4, 'ಹಾರ್ಟ್‌ರೇಟ್ ಮಾನಿಟರಿಂಗ್' ಆಯ್ಕೆಯನ್ನು ಒಳಗೊಂಡಿದ್ದು, ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.

ಡಿಸ್‌ಪ್ಲೇ ಹೇಗಿದೆ
ಈ ಮಿ ಬ್ಯಾಂಡ್ 4, ಡಿವೈಸ್ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್ ಗ್ಲಾಸ್ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್ ಮುಕ್ತವಾಗಿದೆ.

ಸೆನ್ಸಾರ್ ಶಕ್ತಿ
ಮಿ ಬ್ಯಾಂಡ್ 4 ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದ್ದು, ವಿವಿಧ ಬಗೆಯ ಸ್ವೀಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿಸ್ಟೈಲ್, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್ ಮಾಡಲಿದೆ.

ಎರಡು ವೇರಿಯಂಟ್‌ಗಳು
ಶಿಯೋಮಿ ಬಿಡುಗಡೆ ಮಾಡಿರುವ 'ಮಿ ಬ್ಯಾಂಡ್ 4' 'ಎನ್‌ಎಫ್‌ಸಿ' ಮತ್ತು 'ನಾನ್-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳನ್ನು ಹೊಂದಿದೆ. ಎನ್‌ಎಫ್‌ಸಿ ವರ್ಷನ್ ಮಾದರಿಯ ಸ್ಮಾರ್ಟ್‌ಬ್ಯಾಂಡ್ ಮಾಡೆಲ್ ನಂಬರ್ XMSH08HM ಆಗಿದೆ ಮತ್ತು ನಾನ್-ಎನ್‌ಎಫ್‌ಸಿ ಡಿವೈಸ್ ಮಾಡೆಲ್ ನಂಬರ್ XMSH07HM ಆಗಿದೆ.

ಬ್ಯಾಟರಿ ಲೈಫ್
ಶಿಯೋಮಿ ಮಿ ಬ್ಯಾಂಡ್ 4 135mAh ಸಾಮರ್ಥ್ಯದ ಬಿಗ್ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ಬ್ಯಾಂಡ್ 110mAh ಬ್ಯಾಟರಿ ಪವರ್ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.

ಬೆಲೆ ಎಷ್ಟಿದೆ?
ಶಿಯೋಮಿಯ ಮಿ ಬ್ಯಾಂಡ್ 4, ಎನ್‌ಎಫ್‌ಸಿ ವರ್ಷನ್ ಮಾದರಿಯ ಸ್ಮಾರ್ಟ್‌ಬ್ಯಾಂಡ್ ಬೆಲೆಯು 169 yuan (1700ರೂ ) ಆಗಿರಲಿದೆ. ಹಾಗೆಯೇ ನಾನ್-ಎನ್‌ಎಫ್‌ಸಿ' ವರ್ಷನ್ ಸ್ಮಾರ್ಟ್‌ಬ್ಯಾಂಡ್ ಬೆಲೆಯು 229 yuan (2300ರೂ) ಆಗಿದೆ. ಇದೇ ಜೂನ್ 14ರಂದು ಮೊದಲ ಸೇಲ್ ಆರಂಭಿಸಲಿದೆ ಎನ್ನಲಾಗಿದೆ.


Click it and Unblock the Notifications








