ಶಿಯೋಮಿಯ 'ಮಿ ಬ್ಯಾಂಡ್ 5' ಬಿಡುಗಡೆಗೆ ದಿನಾಂಕ ಫಿಕ್ಸ್!..ಬೆಲೆ ಎಷ್ಟು?
ಚೀನಾ ಮೂಲದ ಟೆಕ್ ಕಂಪನಿ ಶಿಯೋಮಿ ಈಗಾಗಲೇ ಹತ್ತು ಹಲವು ಸ್ಮಾರ್ಟ್ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿಗಿನ ಕಂಪನಿಯ ಹೊಸ ಉತ್ಪನ್ನಗಳಲ್ಲಿ ಸ್ಮಾರ್ಟ್ ಬ್ಯಾಂಡ್ ಡಿವೈಸ್ ಫಿಟ್ನೆಸ್ ಪ್ರಿಯರನ್ನು ಹೆಚ್ಚು ಆಕರ್ಷಿಸಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಮುಂದುವರಿದು ಇದೀಗ 'ಮಿ ಬ್ಯಾಂಡ್ 5' ಡಿವೈಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೆ ಮಿ ಬ್ಯಾಂಡ್ 4 ಡಿವೈಸ್ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ.

ಹೌದು, ಜನಪ್ರಿಯ ಶಿಯೋಮಿ ಸಂಸ್ಥೆಯ ಹೊಸ 'ಮಿ ಬ್ಯಾಂಡ್ 5' ಡಿವೈಸ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೇ ಜೂನ್ 11ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದೆ ಎಂದು Weibo ತಾಣದಲ್ಲಿ ತಿಳಿಸಲಾಗಿದೆ. ಈ ಹೊಸ ಮಿ ಬ್ಯಾಂಡ್ 5 ಡಿವೈಸ್, ಮಿ ಬ್ಯಾಂಡ್ 4 ಡಿವೈಸ್‌ಗಿಂತ ಹೆಚ್ಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿರಲಿದೆ. ಇದರೊಂದಿಗೆ ಹಲವು ಅಗತ್ಯ ಅಪ್ಲಿಕೇಶನ್‌ಗಳ ಸಫೊರ್ಟ್ ಸಹ ಇರಲಿವೆ. ಇನ್ನು ಈ ಡಿವೈಸ್ ಬೆಲೆ ಹಾಗೂ ಫೀಚರ್ಸ್‌ಗಳ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಹಾಗಾದರೇ ಮಿ ಬ್ಯಾಂಡ್ 5 ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಶಿಯೋಮಿಯು ಮಿ ಬ್ಯಾಂಡ್ 5 ನಲ್ಲಿ NFC ಜೊತೆಗೆ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗೆ ಅನುಕೂಲ ನೀಡಲು ಗೂಗಲ್ ಪೇ ಹಾಗೂ ಮಿ ಪೇ ಆಪ್ ಬೆಂಬಲ ನೀಡಲಿದೆ. ಹಾಗೆಯೇ 1.2 ಇಂಚಿನ ಡಿಸ್‌ಪ್ಲೇ ನೀಡುವ ಸಾಧ್ಯತೆಗಳಿವೆ. ಸಂಸ್ಥೆಯ 'ಮಿ ಬ್ಯಾಂಡ್ 4' ಡಿವೈಸ್ ಭಾರತದಲ್ಲಿ ದಾಖಲೆಯ ಮಾರಾಟ ಕಂಡಿತ್ತು. ಅದೇ ರೀತಿ ಹೊಸ ಮಿ ಬ್ಯಾಂಡ್ 5 ಡಿವೈಸ್ ಸಹ ಅಧಿಕ ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗಿದೆ.

ಶಿಯೋಮಿಯ ಮಿ ಬ್ಯಾಂಡ್ 4 ನಂತೆ ಹಾರ್ಟ್‌ರೇಟ್ ಮಾನಿಟರಿಂಗ್' ಆಯ್ಕೆ, ನಿರಂತರ ಹೃದಯ ಬಡಿತದ ಕುರಿತು ಮಾಹಿತಿ, ಫೋಟೊಥೆಸ್ಮೊಗ್ರಾಫಿ (PPG) ಆಯ್ಕೆ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರಲಿದೆ. ಇನ್ನು ಮಿ ಬ್ಯಾಂಡ್ 5 ಡಿವೈಸ್ ಬೆಲೆಯು ಚೀನಾದಲ್ಲಿ 179 yuan ಆಗಿರಲಿದೆ, ಭಾರತದಲ್ಲಿ ಸುಮಾರು 1,800ರೂ.ಗಳ ಆಸುಪಾಸಿನಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಕಂಪನಿಯ 'ಮಿ ಬ್ಯಾಂಡ್ 4', ಡಿವೈಸ್ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್ ಗ್ಲಾಸ್ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುವ ಸೌಲಭ್ಯ ಪಡೆದಿದೆ.


Click it and Unblock the Notifications




