ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿಯ 'ಮಿ ಬ್ಯಾಂಡ್‌ 6'!

|

ಜನಪ್ರಿಯ ಟೆಕ್ ಕಂಪನಿ ಶಿಯೋಮಿ ಈಗಾಗಲೇ ಹತ್ತು ಹಲವು ಸ್ಮಾರ್ಟ್‌ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ ಸಹ ಒಂದಾಗಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮಿ ಬ್ಯಾಂಡ್ 4 ಮತ್ತು ಮಿ ಬ್ಯಾಂಡ್ 5 ಡಿವೈಸ್‌ಗಳು ಫಿಟ್ನೆಸ್‌ ಪ್ರಿಯರನ್ನು ಆಕರ್ಷಿಸಿವೆ. ಅದರ ಮುಂದುವರಿದ ಭಾಗವಾಗಿ ಶಿಯೋಮಿಯು ಈಗ ಮಿ ಬ್ಯಾಂಡ್ 6 ಅನಾವರಣ ಮಾಡಲು ಸಜ್ಜಾಗಿದೆ.

ಬ್ಯಾಂಡ್

ಹೌದು, ಶಿಯೋಮಿ ಸಂಸ್ಥೆಯ ಹೊಸ 'ಮಿ ಬ್ಯಾಂಡ್ 6' ಡಿವೈಸ್‌ ಅನ್ನು ಬಿಡುಗಡೆ ಮಾಡಲಿದೆ. ಹಿಂದಿನ ಮಿ ಬ್ಯಾಂಡ್ 5 ಡಿವೈಸ್‌ಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಹೊಸ ಮಿ ಬ್ಯಾಂಡ್ 6 ಹೊಂದಿರಲಿದೆ ಎನ್ನಲಾಗಿದೆ. ಈ ಡಿವೈಸ್‌ ಬಿಲ್ಟ್‌-ಇನ್ GPS ಹಾಗೂ Sp02 ಮಾನೀಟರಿಂಗ್ ಫೀಚರ್ಸ್‌ ಒಳಗೊಂಡಿರಲಿದೆ. ಇನ್ನು ಈ ಡಿವೈಸ್‌ ಮುಂದಿನ ಎರಡು ತಿಂಗಳುಗಳಲ್ಲಿ ಅಥವಾ 2021 ರ ಅಂತ್ಯದ ವೇಳೆಗೆ ಅನಾವರಣ ಆಗುವ ನಿರೀಕ್ಷೆಗಳಿವೆ.

ಶಿಯೋಮಿಯ

ಶಿಯೋಮಿಯ ಬರಲಿರುವ ಮಿ ಬ್ಯಾಂಡ್‌ 6 ಡಿವೈಸ್‌ 1.2 ಅಥವಾ 1.3-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಬಿಲ್ಟ್‌-ಇನ್ ಜಿಪಿಎಸ್‌ ಫೀಚರ್‌ ಇರಲಿದ್ದು, ಹಾಗೆಯೇ ಅಲೆಕ್ಸಾ ಸೌಲಭ್ಯ ಹೊಂದಿರಲಿದೆ. ಇನ್ನು ಈ ಡಿವೈಸ್‌ ಸುಮಾರು ಫಿಟ್ನೆಸ್‌ಗೆ ಸಂಬಂಧಿತ 30 ಆಕ್ಟಿವಿಟಿ ಮೋಡ್‌ಗಳ ಆಯ್ಕೆಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಮಿ ಬ್ಯಾಂಡ್‌ 5 ಡಿವೈಸ್‌ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಮಿ ಸ್ಮಾರ್ಟ್ ಬ್ಯಾಂಡ್ 5 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಮಿ ಸ್ಮಾರ್ಟ್ ಬ್ಯಾಂಡ್ 4 ಗಿಂತ ಸುಮಾರು 20% ಹೆಚ್ಚಿನ ಡಿಸ್‌ಪ್ಲೇ ಭಾಗವನ್ನು ಹೊಂದಿದೆ. ಇನ್ನು ಈ ಹೊಸ ಫಿಟ್‌ನೆಸ್ ಬ್ಯಾಂಡ್ ನಿಯಮಿತ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಎರಡು ಗಂಟೆಗಳಿಂತ ಕಡಿಮೆ ಅವಧಿಯ ಫುಲ್‌ ಚಾರ್ಜಿಂಗ್ ಟೈಂ ಅನ್ನು ಹೊಂದಿದೆ.

ಹೆಲ್ತ್‌

ಮಿ ಸ್ಮಾರ್ಟ್ ಬ್ಯಾಂಡ್ 5 ನಲ್ಲಿ ಔಟ್‌ಡೋರ್‌ ರೇಸ್‌, ವಾಕಿಂಗ್‌, ರೈಡಿಂಗ್‌ ಇನ್‌ಡೋರ್‌ ರನ್ನಿಂಗ್‌, ಇನ್‌ಡೋರ್‌ ಸ್ವಿಮ್ಮಿಂಗ್‌, free exercise, ಯೋಗ, rowing machine, ಇನ್‌ಡೋರ್‌ ರೈಡಿಂಗ್‌, elliptical machine, ಮತ್ತು ರೂಪ್‌ ಸ್ಕಿಪ್ಪಿಂಗ್‌, ಸೇರಿದಂತೆ ಸುಮಾರು 11 ವೃತ್ತಿಪರ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಅಲ್ಲದೆ ಹೆಲ್ತ್‌ ಮತ್ತು ಫಿಟ್ನೆಸ್ ಫೀಚರ್ಸ್‌ಗಳಿಗೆ ಸಂಬಂಧಿಸಿದಂತೆ 24x7 ಹೃದಯ ಬಡಿತ ಮೇಲ್ವಿಚಾರಣೆ, ವಿಶ್ರಾಂತಿ ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಗಾಡ ನಿದ್ರೆ, ಲಘು ನಿದ್ರೆ, ಒತ್ತಡ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಮತ್ತು ಗುರಿ ನಿರ್ಧಾರದಂತಹ ಫಿಚರ್ಸ್‌ಗಳನ್ನ ಹೊಂದಿದೆ. ಅಲ್ಲದೆ ಇದು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ.

Best Mobiles in India

English summary
The Mi Smart Band 6/Mi Band 6 is rumoured to offer Sp02 monitoring and built-in GPS support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X