ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

|

ಚೀನಾ ಮೂಲದ ಶಿಯೋಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸ್ಮಾರ್ಟ್‌ಫೋನ್‌, ಫ್ಯಾಶನ್‌ ಸೇರಿದಂತೆ ಹಲವು ವಲಯಗಳಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಜನಪ್ರಿಯತೆ ಗಳಿಸಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಇದೀಗ ಕೇಶಾಲಂಕಾರ ವಲಯಕ್ಕೂ ದಾಪುಗಾಲಿಟ್ಟಿದ್ದು, ಪುರುಷರಿಗಾಗಿ ಹೊಸ ಬಿಯರ್ಡ್‌(ಗಡ್ಡ) ಟ್ರಿಮ್ಮರ್‌ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

ಹೌದು, ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ ಮಿ ಬಿಯರ್ಡ್‌ ಟ್ರಿಮ್ಮರ್‌ ಉತ್ಪನ್ನವನ್ನು ಲಾಂಚ್‌ ಮಾಡಿದ್ದು, ಇಂದಿನಿಂದ (ಜೂನ್‌ 27) ಈ ಉತ್ಪನ್ನದ ಓಪೆನ್‌ ಸೇಲ್‌ ಮಾರಾಟವನ್ನು ಆರಂಭಿಸಿದೆ. ಮಿ ಬಿಯರ್ಡ್‌ ಟ್ರಿಮ್ಮರ್‌ ಭಾರತೀಯ ಗ್ರಾಹಕರಿಗಾಗಿ ತಯಾರಿಸಲಾಗಿದ್ದು, ಈ ಉತ್ಪನ್ನವು ದೇಶಿಯ ಮಾರುಕಟ್ಟೆ ಹೊರತುಪಡಿಸಿ ಬೇರೆ ಯಾವುದೇ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎಂದು ಕಂಪನಿಯ ಭಾರತೀಯ ಮ್ಯಾನೇಜಿಂಗ ಡೈರೆಕ್ಟರ್‌ ಮನು ಜೈನ್‌ ತಿಳಿಸಿದ್ದಾರೆ.

ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

ಈ ಉತ್ಪನ್ನವು ಬ್ಲ್ಯಾಕ್‌ ಕಲರ್‌ ವೇರಿಯಂಟ್‌ನಲ್ಲಿದ್ದು, ಇದರೊಂದಿಗೆ 40 ಲೆಂತ್‌ ಸೆಟ್ಟಿಂಗ್, ಸ್ಟೈಲ್‌ನೆಸ್‌ ಸ್ಟೀಲ್‌ ಬಾಡಿಯ ರಚನೆ, ಪವರ್‌ಫುಲ್‌ ಬ್ಯಾಟರಿ, IPX7 ವಾಟರ್‌ಪ್ರೂಫ್‌, ಟ್ರಾವೆಲ್‌ ಲಾಕ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗೆಯೇ ಕ್ವಾರ್ಡೆಡ್‌ ಮತ್ತು ಕ್ವಾರ್ಡ್‌ಲೆಸ್‌ (corded/cordless)ನಲ್ಲಿಯೂ ಉಪಯೋಗಿಸಬಹುದಾಗಿದ್ದು, ಈ ಸಾಧನವು ಅಲ್ಟ್ರಾ ಸ್ಪೆಶಿಯಸ್‌ ಸೆಲ್ಫ ಶಾರ್ಪಿಂಗ್ ಬ್ಲೆಡ್‌ ಒಳಗೊಂಡಿದೆ. ಇದರ ಬೆಲೆಯು 1199ರೂ.ಗಳು ಆಗಿದೆ.

ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

ಈ ಡಿವೈಸ್‌ನೊಂದಿಗೆ ಅತ್ಯುತ್ತಮ ಬ್ಯಾಟರಿ ಒದಗಿಸಲಾಗಿದ್ದು, ಚಾರ್ಜಿಂಗ್‌ 5V ಅಡಾಪ್ಟರ್‌ಗೆ ಬೆಂಬಲ ನೀಡುತ್ತದೆ. 2 ಗಂಟೆ ಚಾರ್ಜ್‌ ಮಾಡಿದರೇ ಸುಮಾರು 90 ನಿಮಿಷ ಬಾಳಿಕೆ ಒದಗಿಸಲಿದೆ. ಇನ್‌ಸ್ಟಟ್‌ ಬಳಕೆಗೆ ಕ್ಲಿಕ್‌ ಚಾರ್ಜ್‌ ಸೌಲಭ್ಯ ನೀಡಲಾಗಿದ್ದು, 5 ನಿಮಿಷ ಚಾರ್ಜ್‌ ಮಾಡಿದರೇ 10 ನಿಮಿಷದ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ಎಲ್‌ಇಡಿ ಬ್ಯಾಟರಿ ಇಂಡಿಕೇಟರ್‌ ಇದ್ದು, USB ಮೂಲಕವು ಚಾರ್ಜ್‌ ಮಾಡಬಹುದು.

ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!

ಕ್ವಾಡ್‌ ಎಡ್ಜ್‌ ಡಿಸೈನ್‌ ಹೊಂದಿರುವ ಈ ಡಿವೈಸ್‌ IPX7 ವಾಟರ್‌ಪ್ರೂಫ್‌ ಸೌಲಭ್ಯ ಪಡೆದಿದೆ ಹಾಗೂ ಟ್ರಾವೆಲ್‌ ಮೋಡ್‌ ಫೀಚರ್‌ ನೀಡಲಾಗಿದ್ದು, ಇದು ಟ್ರಾವಲಿಂಗ್‌ ಸಮಯದಲ್ಲಿ ಡಿವೈಸ್‌ನ ಬ್ಯಾಟರಿ ಶಕ್ತಿಯನ್ನು ಉಳಿಸಲು ನೆರವಾಗಲಿದೆ. 1199ರೂ.ಗಳು ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಕಂಪನಿಯ ಅಧಿಕೃತ ವೆಬ್‌ತಾಣ(Mi.com) ಅಥವಾ ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಮೂಲಕ ಗ್ರಾಹಕರು ಖರೀದಿಸಬಹುದಾಗಿದೆ.

ಓದಿರಿ ; ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!ಓದಿರಿ ; ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

Best Mobiles in India

English summary
Mi Beard Trimmer looks like a good option for men looking to buy a trimmer. The Mi Beard Trimmer comes in only one colour variant black. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X