ಭಾರತದಲ್ಲಿ 'ಶಿಯೋಮಿ ಕ್ರೆಡಿಟ್‌' ಸೇವೆ ಆರಂಭ!..ತಕ್ಷಣಕ್ಕೆ ಸಾಲ ಲಭ್ಯ!

|

ಚೀನಾ ಮೂಲದ ಶಿಯೋಮಿ ಕಂಪನಿಯು ಗ್ಯಾಡ್ಜೆಟ್ಸ್‌ ಉತ್ಪನ್ನಗಳು ಸೇರಿದಂತೆ ಈಗಾಗಲೇ ಹಲವು ಇತರೆ ಅನುಕೂಲಕರ ಉತ್ಪನ್ನಗಳಿಂದ ಗ್ರಾಹಕರ ಮೆಚ್ಚುಗೆಯನ್ನು ಪಡೆದಿದೆ. ಇತ್ತೀಚಿಗಷ್ಟೆ ಸ್ಮಾರ್ಟ್‌ ಬೆಡ್‌, ವಾಟರ್ ಫ್ಯೂರಿಫೈರ್, ಟಿ-ಶರ್ಟ್‌, ಸನ್‌ಗ್ಲಾಸ್‌ ಹೀಗೆ ವಿವಿಧ ಉತ್ಪನ್ನಗಳಿಂದ ಗುರುತಿಸಿಕೊಂಡಿರೊ ಶಿಯೋಮಿ ಇದೀಗ ಭಾರತದಲ್ಲಿ ಡಿಜಿಟಲ್ ಕೆವೈಸಿ ಮೂಲಕವೇ ಪರ್ಸನಲ್ ಲೋನ್ ನೀಡಲು ಮುಂದಾಗಿದೆ.

ಶಿಯೋಮಿ ಸಂಸ್ಥೆ

ಹೌದು, ಜನಪ್ರಿಯ ಶಿಯೋಮಿ ಸಂಸ್ಥೆಯು ದೇಶದಲ್ಲಿ ಈಗ ಹೊಸದಾಗಿ 'ಮಿ ಕ್ರೆಡಿಟ್' ಸೇವೆಯನ್ನು ಆರಂಭಿಸಿದ್ದು, ಇದು ಪರ್ಸನಲ್ ಲೋನ್ ನೀಡುವ ಡಿಜಿಟಲ್ ಯೋಜನೆಯಾಗಿದೆ. ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಡಿಜಿಟಲ್ ಕೆವೈಸಿ ದಾಖಲಾತಿಗಳ ಮೂಲಕ ತ್ವರಿತವಾಗಿ ಲೋನ್ ನೀಡುವುದಾಗಿ ಶಿಯೋಮಿ ಹೇಳಿಕೊಂಡಿದೆ. ಶಿಯೋಮಿಯ ಈ ಸೇವೆಯಲ್ಲಿ ಸುಮಾರು 1,00,000ರೂ.ಗಳ ವರೆಗೆ ಲೋನ್ ಲಭ್ಯವಾಗಲಿದೆ.

ಫೈನಾನ್ಸ್‌

ಅಂದಹಾಗೇ ಗ್ರಾಹಕರಿಗೆ ಶಿಯೋಮಿಯೇ ನೇರವಾಗಿ ಲೋನ್ ನೀಡುವುದಿಲ್ಲ. ಬದಲಿಗೆ ಶಿಯೋಮಿಯು ಆದಿತ್ಯ ಬಿರ್ಲಾ ಫೈನಾನ್ಸ್‌ ಮಿಲಿಟೆಡ್, ಮನಿ ವ್ಯೂವ್, ಅರ್ಲಿ ಸ್ಯಾಲರಿ, ಕ್ರೆಡಿಟ್ ವಿದ್ಯಾ ಮತ್ತು ಜಸ್ಟ್‌ಮನಿ ಹಣಕಾಸು ಸಂಸ್ಥೆಗಳೊಂದಿಗೆ ಕನೆಕ್ಟ್ ಆಗಿದ್ದು, ಗ್ರಾಹಕರಿಗೆ ಈ ಹಣಕಾಸು ಸಂಸ್ಥೆಗಳ ಮೂಲಕ ಲೋನ್ ಲಭ್ಯವಾಗಿಸುತ್ತದೆ. ಹಾಗೆಯೇ ಗ್ರಾಹಕರ ಕ್ರೆಡಿಟ್ ಸ್ಕೋರ್‌ ರೇಟಿಂಗ್‌ನಲ್ಲಿಯೂ ಸಹಕಾರಿಯಾಗಲಿದೆ ಎಂದಿದೆ.

ಮಿ ಕ್ರೆಡಿಟ್

ಇನ್ನು ಲೋನ್ ಪಡೆಯುವ ಆಸಕ್ತ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ 'ಮಿ ಕ್ರೆಡಿಟ್' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಲೋನ್ ಪಡೆಯಲು ಮುಂದಾಗಬಹುದು. ಮಾಹಿತಿ ಗೌಪ್ಯತೆಗೆ ಸಂಬಂಧಿಸಿದಂತೆ, ಶಿಯೋಮಿ ತನ್ನ ಎಲ್ಲ ಸಾಲದಾತರೊಂದಿಗೆ ಡೇಟಾ ಸಂರಕ್ಷಣಾ ಒಪ್ಪಂದವನ್ನು ಹೊಂದಿದೆ ಎಂದು ಹೇಳಿದೆ. ಹಾಗೂ ಡೇಟಾವನ್ನು ಭಾರತೀಯ ದತ್ತಾಂಶ ಕೇಂದ್ರಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಸ್ವರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಶಿಯೋಮಿ ತಿಳಿಸಿದೆ.

ಇಂಟರ್ನೆಟ್ ಆಧಾರಿತ

ಭಾರತದಲ್ಲಿ ಶಿಯೋಮಿ ಸಂಸ್ಥೆಯು ಇಂಟರ್ನೆಟ್ ಆಧಾರಿತ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸುವ ತಯಾರಿಯಲ್ಲಿದೆ. ಕಂಟೆಂಟ್, ಮನರಂಜನೆ, ಫೈನಾನ್ಶಿಯಲ್ ಸರ್ವೀಸ್‌, ಮತ್ತು ಪ್ರೊಡಕ್ಟಿವಿಟಿ ಟೂಲ್‌ ಸೇರಿದಂತೆ ಅಗತ್ಯ ಸೇವೆಗಳನ್ನು ಸ್ಮಾರ್ಟ್‌ಫೋನಿನಲ್ಲಯೇ ಲಭ್ಯವಾಗುವಂತೆ ಮಾಡುವ ಯೋಜನೆಗಳು ಇವೆ ಎಂದು ಭಾರತೀಯ ಶಿಯೋಮಿಯ ಮುಖ್ಯಸ್ಥ ಮನು ಜೈನ್ ಹೇಳಿದ್ದಾರೆ.

Best Mobiles in India

English summary
Xiaomi says its Mi Credit digital lending platform will help offer personal loans within 5 minutes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X