ಗ್ರಾಹಕರಿಗೆ ಶಿಯೋಮಿಯಿಂದ ಬೆಲೆ ಇಳಿಕೆಯ ಗಿಫ್ಟ್!.ಈ ಫೋನಿಗಳಿಗೆ ಬೆಸ್ಟ್ ಡೀಲ್!
ದೀಪಾವಳಿ ಮತ್ತು ದಸರಾ ಹಬ್ಬಗಳಿಗೆ ಇನ್ನೇನು ಕೆಲವೇ ದಿನಗಳು ಭಾಕಿ ಉಳಿದ್ದಿದ್ದು, ಎಲ್ಲೆಡೆ ಹಬ್ಬದ ಸಡಗರ ಗರಿಗೆದರಿದೆ. ಈ ಹಬ್ಬದ ಸಮಯದಲ್ಲಿ ಗ್ರಾಹಕರು ಗ್ಯಾಜೆಟ್ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಾರೆ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಇದೀಗ ಆಫರ್‌ಗಳ ಸುರಿಮಳೆ ಶುರುವಾಗಲಿದೆ. ಜೊತೆಗೆ ಇ ಕಾಮರ್ಸ್ ತಾಣಗಳು ಸಹ ಭರ್ಜರಿ ರಿಯಾಯಿತಿ ಘೋಷಿಸುತ್ತವೆ. ಈ ನಿಟ್ಟಿನಲ್ಲಿ ಶಿಯೋಮಿ ಸಹ ಹಬ್ಬದ ಉಡುಗೊರೆ ತಿಳಿಸಿದೆ.

ಹೌದು, ಶಿಯೋಮಿ ಕಂಪನಿಯು ಹಬ್ಬದ ಪ್ರಯುಕ್ತ 'ದೀಪಾವಳಿ ವಿತ್ ಮಿ' ಸೇಲ್ ಆಯೋಜಿಸಿದ್ದು, ಈ ಮೇಳವು ಇದೇ ಸೆಪ್ಟೆಂಬರ್ 28ರಿಂದ ಶುರುವಾಗಿ ಇದೇ ಅಕ್ಟೋಬರ್ 4ರ ವರೆಗೂ ನಡೆಯಲಿದೆ. ಈ ಮೇಳದಲ್ಲಿ ಕಂಪನಿಯು ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಘೋಷಿಸಿ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಹಾಗಾದರೇ ಶಿಯೋಮಿಯ ಈ ಸೇಲ್ ಮೇಳದಲ್ಲಿ ರಿಯಾಯಿತಿಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಎನ್ನುವುದನ್ನು ಮುಂದೆ ನೋಡೋಣ.

ರೆಡ್ಮಿ ನೋಟ್ 7 ಪ್ರೊ
ಶಿಯೋಮಿ ಕಂಪನಿಯ ಜನಪ್ರಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ 4GB RAM+64GB ವೇರಿಯಂಟ್ 11,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 6GB RAM+128GB ವೇರಿಯಂಟ್ 14,999ರೂ.ಗಳಿಗೆ ಮತ್ತು 6GB RAM+64GB ವೇರಿಯಂಟ್ 13,999ರೂ.ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ.

ರೆಡ್ಮಿ ಕೆ20 ಪ್ರೊ
ಇತ್ತೀಚಿಗೆ ಬಿಡುಗಡೆ ಆಗಿರುವ 'ರೆಡ್ಮಿ ಕೆ20 ಪ್ರೊ' ಸ್ಮಾರ್ಟ್‌ಫೋನ್ 6GB+64GB ವೇರಿಯಂಟ್ 19,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಸಿಗಲಿದೆ. ಹಾಗೆಯೇ 23,999ರೂ.ಗಳಿಗೆ 6GB+128GB ವೇರಿಯಂಟ್ ಲಭ್ಯವಾಗಲಿದ್ದು, 24,999ರೂ.ಗಳಿಗೆ 6GB+128GB ವೇರಿಯಂಟ್ ಸಿಗಲಿದೆ. ಇನ್ನು 8GB+256GB ವೇರಿಯಂಟ್ ಬೆಲೆಯು 30,999ರೂ.ಗಳು ಆಗಿದೆ.

ರೆಡ್ಮಿ 7 ಮತ್ತು ರೆಡ್ಮಿ 7A
ಶಿಯೋಮಿಯ ಹೊಸ 'ರೆಡ್ಮಿ 7' ಸ್ಮಾರ್ಟ್‌ಫೋನಿನ 2GB+32GB ವೇರಿಯಂಟ್ ಬೆಲೆಯು 6,999ರೂ. ಹಾಗೂ 3GB+32GB ವೇರಿಯಂಟ್ 8,499ರೂ.ಗಳಿಗೆ ಲಭ್ಯವಾಗಲಿದೆ. ಇದೇ ಸರಣಿಯ 'ರೆಡ್ಮಿ 7A' ಸ್ಮಾರ್ಟ್‌ಫೋನಿನ 2GB+16GB ವೇರಿಯಂಟ್ ಬೆಲೆಯು 4,999ರೂ. ಆಗಿದೆ ಮತ್ತು 2GB+32GB ವೇರಿಯಂಟ್ 5,799ರೂ.ಗಳಿಗೆ ಗ್ರಾಹಕರಿಗೆ ದೊರೆಯಲಿದೆ.

ರೆಡ್ಮಿ Y3 ಮತ್ತು ರೆಡ್ಮಿ ಗೋ
ಶಿಯೋಮಿಯ ಜನಪ್ರಿಯ 'ರೆಡ್ಮಿ Y3' ಸ್ಮಾರ್ಟ್‌ಫೋನ್ 3GB+32GB ವೇರಿಯಂಟ್ 7,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಹಾಗೆಯೇ 4GB+64GB ವೇರಿಯಂಟ್ ಸ್ಮಾರ್ಟ್‌ಫೋನ್ 11,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಕಂಪನಿಯ ಎಂಟ್ರಿ ಲೆವೆಲ್ 'ರೆಡ್ಮಿ ಗೋ' ಸ್ಮಾರ್ಟ್‌ಫೋನ್ 1GB+8GB 4,299ರೂ.ಗಳಿಗೆ ಲಭ್ಯವಾಗಲಿದೆ.

ಫೊಕೊ ಎಫ್1
ಶಿಯೋಮಿಯ ಫೊಕೊ ಎಫ್1 ಸ್ಮಾರ್ಟ್‌ಫೋನ್ ಈಗಾಗಲೇ ಹಲವು ಬಾರಿ ಬೆಲೆ ಇಳಿಕೆ ಕಂಡಿದ್ದು, ಈ ಭಾರಿ ಹಬ್ಬದ ಪ್ರಯುಕ್ತ ಬೆಲೆ ಇಳಿಕೆ ಕಾಣುತ್ತಿದೆ. ಫೊಕೊ ಸ್ಮಾರ್ಟ್‌ಫೋನಿನ 6GB+64GB ವೇರಿಯಮಟ್ 14,999ರೂ.ಗಳಿಗೆ ಲಭ್ಯ. ಹಾಗೆಯೇ 6GB+128GB ವೇರಿಯಂಟ್ ಫೋನ್ 15,999ರೂ.ಗಳಿಗೆ ದೊರೆಯಲಿದೆ ಮತ್ತು 8GB+256GB ವೇರಿಯಂಟ್ 18,999ರೂ.ಗಳಿಗೆ ಖರೀದಿಸಬಹುದು.


Click it and Unblock the Notifications








