ಬೆಂಗಳೂರಿಗರಿಗೆ ಶಿಯೋಮಿ ಯಿಂದ ಆಚ್ಚರಿ ಕೊಡುಗೆ: ಮತ್ತೇರಡು ಮಿ ಹೋಮ್ ಗಳು..!! ಎಲ್ಲೆಲ್ಲಿ..?

ಶಿಯೋಮಿ ಇದೇ ಕೆಲವು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೊದಲ ಆಫ್‌ಲೈನ್ ಮಳಿಗೆಯನ್ನು ತೆರೆದಿದ್ದು, ಅಂದು ಗ್ರಾಹಕರಿಂದ ದೊರೆತ ಅದ್ದೂರಿ ಸ್ವಾಗತದ ಸಲುವಾಗಿ ಶಿಯೋಮಿ ಮತ್ತೇ ಬೆಂಗಳೂರಿನಲ್ಲಿ ಮತ್ತೇರಡು ಮಳಿಗೆಗಳನ್ನು ತೆರೆಯಲು ಮುಂದಾ

|

ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಾಕ ಕಂಪನಿ ಶಿಯೋಮಿ, ಮೊದಲಿಗೆ ಆನ್‌ಲೈನ್ ಮಾರುಕಟ್ಟೆಯ ಮೂಲಕವೇ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿತು. ಆದರೆ ಬೇರೆ ಕಂಪನಿಗಳು ಆಫ್‌ಲೈನ್ ಮಾರುಕಟ್ಟೆಯ ಮೂಲಕ ಹೆಚ್ಚಿನ ಜನರನ್ನು ತಲುಪುತಿವೆ. ಇದಕ್ಕಾಗಿ ಶಿಯೋಮಿ ಸಹ ಆಫ್ ಲೈನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ.

ಬೆಂಗಳೂರಿಗರಿಗೆ ಶಿಯೋಮಿ ಯಿಂದ ಆಚ್ಚರಿ ಕೊಡುಗೆ: ಮತ್ತೇರಡು ಮಿ ಹೋಮ್ ಗಳು..!!

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಮತ್ತೊಂದು ಮೋಸ ಬಯಲು..!! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..!!

ದೇಶದಲ್ಲಿ ತನ್ನದೇ ಆಫ್‌ಲೈನ್ ಮಳಿಗೆಗಳನ್ನು ತೆರೆಯಲು ಮುಂದಾಗಿರುವ ಶಿಯೋಮಿ ಇದೇ ಕೆಲವು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೊದಲ ಆಫ್‌ಲೈನ್ ಮಳಿಗೆಯನ್ನು ತೆರೆದಿದ್ದು, ಅಂದು ಗ್ರಾಹಕರಿಂದ ದೊರೆತ ಅದ್ದೂರಿ ಸ್ವಾಗತದ ಸಲುವಾಗಿ ಶಿಯೋಮಿ ಮತ್ತೇ ಬೆಂಗಳೂರಿನಲ್ಲಿ ಮತ್ತೇರಡು ಮಳಿಗೆಗಳನ್ನು ತೆರೆಯಲು ಮುಂದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಮತ್ತೇರಡು ಮಿ ಹೋಮ್ ಗಳು:

ಬೆಂಗಳೂರಿನಲ್ಲಿ ಮತ್ತೇರಡು ಮಿ ಹೋಮ್ ಗಳು:

ಶಿಯೋಮಿ ಭಾರತದಲ್ಲಿ ಮಿ ಮಾಕ್ಸ್ ಲಾಂಚ್ ಮಾಡಿದ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಮತ್ತೇರಡು ಮಿ ಹೋಮ್ ಗಳನ್ನು ತೆರಯುವ ಮಾಹಿತಿಯನ್ನು ಹೊರ ಹಾಕಿದೆ. ಈ ಮೂಲಕ ಆನ್‌ಲೈನನಲ್ಲಿ ಖರೀದಸಲು ಶಕ್ತವಾಗದವರಿಗೆ ಆಫ್‌ಲೈನ್ ಅಂಗಡಿಯಲ್ಲಿ ಖರೀದಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಲಿಡೋ ಮಾಲ್ ನಲ್ಲಿ ಜುಲೈ 22 ರಂದು:

ಲಿಡೋ ಮಾಲ್ ನಲ್ಲಿ ಜುಲೈ 22 ರಂದು:

ಬೆಂಗಳೂರಿನ ಲಿಡೋ ಮಾಲ್ ನಲ್ಲಿ ಇದೇ ತಿಂಗಳು, ಅಂದರೇ ಜುಲೈ 22 ರಂದು ಎರಡನೇ ಮಿ ಹೋಮ್ ಅನ್ನು ಶಿಯೋಮಿ ತೆರೆಯಲಿದೆ ಎನ್ನಲಾಗಿದೆ.

ಓರಿಯನ್ ಮಾಲ್ ನಲ್ಲಿ ಜುಲೈ 29 ರಂದು:

ಓರಿಯನ್ ಮಾಲ್ ನಲ್ಲಿ ಜುಲೈ 29 ರಂದು:

ಶಿಯೋಮಿ ತನ್ನ ಮೂರನೇ ಮಿ ಹೋಮ್ ಅನ್ನು ಜುಲೈ 29 ರಂದು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ತೆರಲು ಮುಂದಾಗಿದೆ. ಇಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಗಳು ಮತ್ತು ಆಕ್ಸಿಕಸಿರೀಸ್ ಗಳು ದೊರೆಯಲಿದೆ.

ಬೆಂಗಳೂರಿನಲ್ಲಿ ಮೊದಲನೇ ದಿನೇ ದಾಖಲೆ ವಹಿವಾಟು:

ಬೆಂಗಳೂರಿನಲ್ಲಿ ಮೊದಲನೇ ದಿನೇ ದಾಖಲೆ ವಹಿವಾಟು:

ಬೆಂಗಳೂರಿನಲ್ಲಿ ತನ್ನ ಮೇ ತಿಂಗಳಿನಲ್ಲಿ ಮೊದಲ ಮಿ ಹೋಮ್ ಓಪನ್ ಮಾಡಿದ್ದ ಶಿಯೋಮಿ ಮೊದಲ ದಿನವೇ 5 ಕೋಟಿ ವ್ಯವಹಾರವನ್ನು ಮಾಡುವ ಮೂಲಕ ದಾಖಲೆಯ ವಹಿವಾಟಿಗೆ ಸಾಕ್ಷಿಯಾಗಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲೇ ಮತ್ತೇರಡು ಔಟ್ ಲೈಟ್ ತೆರೆಯಲು ಮುಂದಾಗಿದೆ.

ಭಾರತದಲ್ಲಿ 100 ಮಿ ಹೋಮ್ ಗಳು:

ಭಾರತದಲ್ಲಿ 100 ಮಿ ಹೋಮ್ ಗಳು:

ಶಿಯೋಮಿ ಭಾರತದಲ್ಲಿ ಒಟ್ಟು 100 ಮಿ ಹೋಮ್ ಗಳನ್ನು ಸ್ಥಾಪಿಸುವ ಗುರಿಯನ್ನು ಇಟ್ಟುಕೊಂಡಿದೆ ಎನ್ನಲಾಗಿದೆ. ಈ ಮೂಲಕ ಆಫ್ ಲೈನ್ ಮತ್ತು ಆನ್‌ ಲೈನ್ ಗ್ರಾಹಕರನ್ನ ಒಟ್ಟಾಗಿ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

ಮುಂದಿನ ಮಿ ಹೋಮ್ ದೆಹಲಿಯಲ್ಲಿ:

ಮುಂದಿನ ಮಿ ಹೋಮ್ ದೆಹಲಿಯಲ್ಲಿ:

ಶೀಘ್ರವೇ ಶಿಯೋಮಿ ರಾಜಧಾನಿ ದೆಹಲಿಯಲ್ಲಿ ಮಿ ಹೋಮ್ ಅನ್ನು ತೆರೆಯಲಿದೆ ಎನ್ನಲಾಗಿದೆ. ಎಲ್ಲಾ ಕಂಪನಿಗಳು ಉತ್ತರ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಶಿಯೋಮಿ ಮಾತ್ರವೇ ದಕ್ಷಿಣದ ಗ್ರಾಹಕರನ್ನು ಟಾರ್ಗೆಟ್ ಮಾಡಿದೆ ಎನ್ನಲಾಗಿದೆ.

Best Mobiles in India

Read more about:
English summary
Mi Home outlets in LIDO Mall and Orion Mall in Bengaluru on July 22 and July 29 respectively. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X