ಶಿಯೋಮಿ LED ಸ್ಮಾರ್ಟ್ ಬಲ್ಬ್ ಖರೀದಿಗೆ ಲಭ್ಯ!..ಬೆಲೆ ಎಷ್ಟು ಗೊತ್ತಾ?
ಚೀನಾ ಮೂಲದ ಶಿಯೋಮಿ ಕಂಪನಿ ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಶನ್ ಉತ್ಪನ್ನಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಕಂಪನಿ ಎನಿಸಿಕೊಂಡಿದೆ. ಕಳೆದ ಏಪ್ರಿಲ್‌ನಲ್ಲಿ ಕಂಪನಿ ಪರಿಚಯಿಸಿದ್ದ LED ಸ್ಮಾರ್ಟ್ ಬಲ್ಬ್ ಮಾರುಕಟ್ಟೆಯಲ್ಲಿ ಭಾರಿ ಸದ್ಧು ಮಾಡಿದ್ದು, ಗ್ರಾಹಕರು ಕುತೂಹಲವನ್ನು ಹೆಚ್ಚಿತ್ತು. ಇದೀಗ ಕಂಪನಿಯ LED ಸ್ಮಾರ್ಟ್ ಬಲ್ಬ್ ಗ್ರಾಹಕರ ಖರೀದಿಗೆ ಲಭ್ಯ ಇವೆ.

ಹೌದು, ಶಿಯೋಮಿ ಕಂಪನಿಯ LED ಸ್ಮಾರ್ಟ್ ಬಲ್ಬ್ ಓಪೆನ್ ಸೇಲ್ ಆರಂಭಿಸಿದ್ದು, ಹೀಗಾಗಿ ಇನ್ನು ಬಲ್ಬ್ ಖರೀದಿಸಲು ಗ್ರಾಹಕರು ಕಾಯಬೇಕಿಲ್ಲ. ಕಂಪನಿಯ ಅಧಿಕೃತ ವೆಬ್‌ತಾಣದಲ್ಲಿ ಮತ್ತು ಪ್ರಮುಖ ಇ ಕಾಮರ್ಸ್ ಜಾಲತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಈ LED ಸ್ಮಾರ್ಟ್ ಬಲ್ಬ್ ಬೆಲೆಯು 1,299ರೂ.ಗಳು ಆಗಿದೆ.

ಸದ್ಯ ದೇಶಿಯ ಮಾರುಕಟ್ಟೆಯ ಸ್ಪರ್ಧಾತ್ಮಕ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ ಈ LED ಸ್ಮಾರ್ಟ್ ಬಲ್ಬ್‌ನ ಪ್ರಮುಖ ವಿಶೇಷತೆಯೆಂದರೇ, ಇದು ಸುಮಾರು 11 ವರ್ಷಗಳವರೆಗೆ ಬಾಳಿಕೆ ಬರುವ ಸಾಮರ್ಥ್ಯ ಪಡೆದಿದೆ ಎನ್ನುವುದು. ಹಾಗಾದರೇ ಶಿಯೋಮಿ LED ಸ್ಮಾರ್ಟ್ ಬಲ್ಬ್‌ಗಳು ಇತರೆ ಏನೆಲ್ಲಾ ವಿಶೇಷತೆಗಳನ್ನು ಮತ್ತು ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

800 ಲುಮಿನಸ್ ಶಕ್ತಿ
ಶಿಯೋಮಿ ಕಂಪನಿಯ ಈ ಸ್ಮಾರ್ಟ್ ಬಲ್ಬ್ 800 ಲುಮಿನಸ್ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಹೆಚ್ಚು ಪ್ರಕಾಶಮಾನವಾಗಿ ಬೆಳಕನ್ನು ಒದಗಿಸುತ್ತವೆ. 10W ವ್ಯಾಟ್ಸ್ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಲಿದ್ದು, ಇದರಿಂದ ವಿದ್ಯುತ್ ಉಳಿತಾಯವಾಗಲಿದೆ. ಹಾಗೂ ಸಾಮಾನ್ಯ ಎಲ್‌ಇಡಿ ಬಲ್ಬ್‌ಗಳಿಂಗಿಂತ ಹೆಚ್ಚು ಪ್ರಖರತೆಯ ಬೆಳಕನ್ನು ಪೊರೈಸಲಿದೆ.

ಸ್ಮಾರ್ಟ್‌ಫೋನ್ ಕಂಟ್ರೋಲ್
ಕಂಪನಿಯ LED ಸ್ಮಾರ್ಟ್ ಬಲ್ಬ್‌ಗಳಿಗೆ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿಕೊಳ್ಳುವುದರ ಮೂಲಕ ಸ್ಮಾರ್ಟ್‌ಫೋನ್ ಅನ್ನು ಬಲ್ಬ್‌ನ ರಿಮೋಟ್ ತರಹ ಬಳಸಿಕೊಳ್ಳ ಸೌಲಭ್ಯವನ್ನು ನೀಡಲಾಗಿದೆ. ಬಲ್ಬ್‌ನ ಬಣ್ಣ ಬದಲಿಸುವುದು, ಆನ್ ಮತ್ತು ಆಫ್ ಟೈಮ್ ಸೆಡ್ಯುಲ್ ಮಾಡುವುದು ಮತ್ತು ಬ್ರೈಟ್‌ನೆಸ್ ಏರಿಳಿತ ಮಾಡಿಕೊಳ್ಳಬಹುದಾದ ಆಯ್ಕೆಗಳು ಲಭ್ಯವಾಗುತ್ತವೆ.

ವಾಯಿಸ್ ಕಂಟ್ರೋಲ್
ಶಿಯೋಮಿ ಕಂಪನಿಯು ಈ ಸ್ಮಾರ್ಟ್ ಎಲ್‌ಇಡಿ ಬಲ್ಬ್‌ನ ವಿಶೇಷವೆಂದರೇ ಈ ಬಲ್ಬ್‌ಗಳನ್ನು ವಾಯಿಸ್ ಮೂಲಕ ನಿಯಂತ್ರಿಸಬಹುದಾದ ಸೌಲಭ್ಯವನ್ನು ಪಡೆದುಕೊಂಡಿದೆ. ಗೂಗಲ್ ಅಸಿಸ್ಟಂಟ್ ಮತ್ತು ಅಮೆಜಾನ್ ಅಲೆಕ್ಸಾ ವಾಯಿಸ್ ಆಯ್ಕೆ ಮೂಲಕ ವಾಯಿಸ್ ಕಂಟ್ರೋಲ್ ಮಾಡಬಹುದಾಗಿದೆ. ಹಾಗೂ ಕಂಪನಿಯ ಆಪ್ ಮೂಲಕವು ಸಹ ನಿಯಂತ್ರಿಸಲೂಬಹುದು.

ಪೈಪೋಟಿ
ಸದ್ಯ ಮಾರುಕಟ್ಟೆಯಲ್ಲಿ ವಿಪ್ರೊ, ಸಿಸ್ಕಾ, ಟಿಪಿ-ಲಿಂಕ್, ಹಾಲೊನಿಕ್ಸ್ ಮತ್ತು ಪಿಲಿಪ್ಸ್ ಕಂಪನಿಗಳ ಸ್ಮಾರ್ಟ್ ಎಲ್‌ಇಡಿ ಬಲ್ಬ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಬೆಲೆಗಳು ಸುಮಾರು 750ರೂ.ಗಳಿಂದ 2,500ರೂ.ಗಳ ವರೆಗೆ ಇವೆ. ಈಗ ಶಿಯೋಮಿ ಸಹ ಸ್ಪರ್ಧಾತ್ಮಕ ಬೆಲೆಯಲ್ಲಿ ಸ್ಮಾರ್ಟ್ ಎಲ್‌ಇಡಿ ಬಲ್ಬ್ ಅನ್ನು ಬಿಡುಗಡೆ ಮಾಡಿದ್ದು, ಪ್ರಬಲ ಪೈಪೋಟಿ ನೀಡುವ ಸಾಧ್ಯತೆಗಳಿವೆ.

ಲಭ್ಯತೆ ಮತ್ತು ಬೆಲೆ
ಶಿಯೋಮಿ LED ಸ್ಮಾರ್ಟ್ ಬಲ್ಬ್ ಇದೀಗ ಭಾರತೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಮುಕ್ತವಾಗಿ ಖರೀದಿಗೆ ಲಭ್ಯವಿದ್ದು, ಬಲ್ಬ್‌ನ ಬೆಲೆಯು 1,299ರೂ.ಗಳು. ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ತಾಣದಲ್ಲಿ ಮತ್ತು ಪ್ರಮುಖ ಇ ಕಾಮರ್ಸ್ ಜಾಲತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.


Click it and Unblock the Notifications








