Subscribe to Gizbot

12ಗಂಟೆಗೆ Mi 4A ಸ್ಮಾರ್ಟ್‌ ಟಿವಿ ಫಸ್ಟ್ ಸೇಲ್‌: ರೂ.13,999ರ TV ಮೇಲೆ ರೂ. 2200 ಕ್ಯಾಷ್ ಬ್ಯಾಕ್ ಆಫರ್.!

Written By:

ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿಯೋಮಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ Mi LED 4A ಟಿವಿ, ಫ್ಲಿಪ್‌ಕಾರ್ಟ್‌ ಮತ್ತು Mi.comನಲ್ಲಿ ಮಾರಾಟವಾಗುತ್ತಿದೆ. ಇಂದು 12 ಗಂಟೆಗೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳುವ ಸ್ಮಾರ್ಟ್‌ Mi LED 4A ಟಿವಿ ಮೊದಲು ಬುಕ್ ಮಾಡಿದವರಿಗೆ ಮಾತ್ರವೇ ದೊರೆಯಲಿದೆ.

12ಗಂಟೆಗೆ Mi 4A ಸ್ಮಾರ್ಟ್‌ ಟಿವಿ ಫಸ್ಟ್ ಸೇಲ್‌:

ಒಟ್ಟು ಎರಡು ಮಾದರಿಯ ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ಸೇಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, 32 ಇಂಚಿನ ಸ್ಮಾರ್ಟ್‌ Mi LED 4A ಟಿವಿ ಮತ್ತು 43 ಇಂಚಿನ ಸ್ಮಾರ್ಟ್‌ Mi LED 4A ಟಿವಿ ಗ್ರಾಹಕರಿಗೆ ಲಭ್ಯವಿರಲಿದೆ. ಈ ಎರಡು ಸ್ಮಾರ್ಟ್‌ ಟಿವಿಗಳಲ್ಲಿ 32 ಇಂಚಿನ ಸ್ಮಾರ್ಟ್‌ Mi LED 4A ಟಿವಿ ರೂ.13,999ಕ್ಕೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ Mi LED 4A ಟಿವಿ ಲಾಂಚಿಂಗ್ ಆಫರ್:

ಸ್ಮಾರ್ಟ್‌ Mi LED 4A ಟಿವಿ ಲಾಂಚಿಂಗ್ ಆಫರ್:

ಮಾರ್ಚ್ 7 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆದ 32 ಇಂಚಿನ ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ರೂ.13,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 43 ಇಂಚಿನ ಸ್ಮಾರ್ಟ್‌ Mi LED 4A ಟಿವಿ ರೂ.22,999ಕ್ಕೆ ಲಭ್ಯವಿರಲಿದ್ದು, ಎರಡರ ಮೇಲೆಯೂ ಲಾಂಚಿಂಗ್ ಆಫರ್ ಕಾಣಬಹುದಾಗಿದೆ. ಈ ಟಿವಿಯೊಂದಿಗೆ ಜಿಯೋ-ಫೈ ಹಾಟ್ ಸ್ಪಾಟ್ ಖರೀದಿ ಮಾಡಿದರೆ ರೂ.2200 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

32 ಇಂಚಿನ ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ವಿಶೇಷತೆಗಳು:

32 ಇಂಚಿನ ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ವಿಶೇಷತೆಗಳು:

32 ಇಂಚಿನ Mi TV 4A ಟಿವಿಯಲ್ಲಿ HD ರೆಡಿ ಡಿಸ್‌ಪ್ಲೇ ಇದ್ದು, ಈ ಸ್ಮಾರ್ಟ್ ಟಿವಿಯಲ್ಲಿ ನೀವು 1.5GHz ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ ಮಾಲಿ T450 GPU ಸಹ ಅಳವಡಿಸಲಾಗಿದೆ. ಇದಲ್ಲದೇ ಟಿವಿಯಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಾಗಿದೆ.

43 ಇಂಚಿನ Mi TV 4 ಟಿವಿಯಲ್ಲಿ FHD ಡಿಸ್‌ಪ್ಲೇ:

43 ಇಂಚಿನ Mi TV 4 ಟಿವಿಯಲ್ಲಿ FHD ಡಿಸ್‌ಪ್ಲೇ:

43 ಇಂಚಿನ Mi TV 4A ಟಿವಿಯಲ್ಲಿ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಕ್ಕಾಗಿಯೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಈ ಸ್ಮಾರ್ಟ್ ಟಿವಿಯಲ್ಲಿ ನೀವು 1.5GHz ವೇಗದ ಪ್ರೋಸೆಸರ್ ಜೊತೆಗೆ ಮಾಲಿ T450 GPU ಸಹ ಅಳವಡಿಸಲಾಗಿದೆ. ಇದಲ್ಲದೇ ಆಂಡ್ರಾಯ್ಡ್ ಕಾರ್ಯಚರಣೆ ವ್ಯವಸ್ಥೆಯೊಂದಿಗೆ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಾಗಿದೆ.

ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ಬ್ಲೂಟೂತ್ ವೈ-ಫೈ:

ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ಬ್ಲೂಟೂತ್ ವೈ-ಫೈ:

ಇದಲ್ಲದೇ ಶಿಯೋಮಿ ಸ್ಮಾರ್ಟ್‌ Mi LED 4A ಟಿವಿಯಲ್ಲಿ ಬ್ಲೂಟೂತ್ ಕನೆಕ್ಟ್ ಮತ್ತು Wi-Fi ಸೌಲಭ್ಯವನ್ನು ಕಾಣಬಹುದಾಗಿದ್ದು, ಇದು ಟಿವಿಯಲ್ಲಿ ಇಂಟರ್ನೆಟ್ ಕೆನೆಕ್ಷನ್ ಪಡೆದು ಬ್ರೌಸ್ ಮಾಡಲು ಸಹಾಯಕಾರಿಯಾಗಲಿದೆ. ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದಾಗಿದೆ.

ಉಚಿತ ಟಿವಿ ಸೇವೆ:

ಉಚಿತ ಟಿವಿ ಸೇವೆ:

ಶಿಯೋಮಿ ಸ್ಮಾರ್ಟ್‌ Mi LED 4A ಟಿವಿ ಯಲ್ಲಿ ನೀವು ಉಚಿತವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ. ಇದಕ್ಕಾಗಿಯೆ ಹಾಟ್್ಸ್ಟಾರ್, ವೂಟ್, ಸೋನಿ ಲಿವ್, ಹಂಗಮ ಪ್ಲೇ, ಮತ್ತು ಎಎಲ್‌ಟಿ ಬಾಲಾಜಿ ಸೇರಿದಂತೆ ಹಲವು ವಿಡಿಯೋ ಸೇವೆಯನ್ನು ನೀಡುವ ಆಪ್ ಗಳೊಂದಿಗೆ ಶಿಯೋಮಿ ಒಪ್ಪಂದವನ್ನು ಮಾಡಿಕೊಂಡಿದೆ. 80% ರಷ್ಟು ಉಚಿತವಾಗಿ ಈ ಸೇವೆಯನ್ನು ಪಡೆಯಬಹುದಾಗಿದ್ದು, ಅಲ್ಲದೇ ಪ್ರಾದೇಶಿಕ ಭಾಷೆಗಳಲ್ಲಿ ವಿಡಿಯೋಗಳು ಲಭ್ಯವಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಓದಿರಿ: ವೈದ್ಯ ಲೋಕದ ಸಾಧನೆ: ಆಪ್‌ನಲ್ಲಿಯೇ BP (ಬ್ಲಡ್ ಪ್ರಷರ್) ಚೆಕ್ ಮಾಡಬಹುದು..!

English summary
Xiaomi Mi LED Smart TV 4A first sale in India today at 12 PM. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot