ಹೊಸ ವರ್ಷಕ್ಕೆ ಲಾಂಚ್ ಆಗಲಿದೆ 108MP ಕ್ಯಾಮೆರಾದ 'ರೆಡ್ಮಿ ನೋಟ್ 10' ಫೋನ್!

|

ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ ಯುರೋಪ್‌ನಲ್ಲಿ ''ಮಿ CC9 ಪ್ರೊ'' ಹೆಸರಿನಲ್ಲಿ ವಿಶ್ವದ ಮೊದಲ 108ಎಂಪಿ ಸೆನ್ಸಾರ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ದೈತ್ಯ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ''ರೆಡ್ಮಿ ನೋಟ್ 10'' ಹೆಸರಿನಲ್ಲಿ ಪರಿಚಯಿಸಲು ಶಿಯೋಮಿ ಸಜ್ಜಾಗಿದೆ. ಈ ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌ ದೇಶದಲ್ಲಿಯು 108ಎಂಪಿ ಸೆನ್ಸಾರ್ ಕ್ಯಾಮೆರಾ ವಿಶೇಷದೊಂದಿಗೆ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

ರೆಡ್ಮಿ ನೋಟ್ 10

ಹೌದು, ಶಿಯೋಯು ಭಾರತದಲ್ಲಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದ್ದು, ಇದೇ ಜನವರಿ 2020ರಲ್ಲಿ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಪೆಂಟಾ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, 5,260mAh ಬ್ಯಾಟರಿ ಲೈಫ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯು ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ''ಮಿ ನೋಟ್ 10'' ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಮಿ ನೋಟ್ 10 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.47 ಇಂಚಿನ ಪೂರ್ಣ ಹೆಚ್‌ಡಿಯ AMOLED ಡಿಸ್‌ಪ್ಲೇ ಒಳಗೊಂಡಿರಲಿದ್ದು, ವಾಟರ್‌ ಡ್ರಾಪ್ ನಾಚ್ ಡಿಸೈನ್ ಇರಲಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು ಫಿಂಗರ್‌ಪ್ರಿಂಟ್ ಸೆನ್ಸಾರ್ ರಚನೆಯನ್ನು ಪಡೆದಿರಲಿದೆ. ವಿಡಿಯೊ ಮತ್ತು ಗೇಮ್ಸ್‌ಗೆ ಪೂರಕ ಅನಿಸಲಿದೆ.

ಪ್ರೊಸೆಸರ ಮತ್ತು ಮೆಮೊರಿ

ಪ್ರೊಸೆಸರ ಮತ್ತು ಮೆಮೊರಿ

ಮಿ ನೋಟ್ 10 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಚಿಪ್‌ಸೆಟ್ ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್‌ ಇರುವ ಸಾಧ್ಯತೆಗಳಿವೆ. ಇದರೊಂದಿಗೆ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿರುವ ನಿರೀಕ್ಷೆಗಳಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಲಭ್ಯ ಇರಲಿದೆ.

ಪೆಂಟಾ ಕ್ಯಾಮೆರಾ ಸ್ಪೆಷಲ್

ಪೆಂಟಾ ಕ್ಯಾಮೆರಾ ಸ್ಪೆಷಲ್

ಮಿ ನೋಟ್ 10 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಪೆಂಟಾ ಕ್ಯಾಮೆರಾ ರಚನೆಯನ್ನು ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಉಳಿದಂತೆ 20ಎಂಪಿ ಅಲ್ಟ್ರಾ ವೈಲ್ಡ್‌ ಆಂಗಲ್ ಕ್ಯಾಮೆರಾ, 12ಎಂಪಿಯ + 5ಎಂಪಿಯ ಟೆಲಿಫೋಟೊ ಸೆನ್ಸಾರ್ ಕ್ಯಾಮೆರಾ ಹಾಗೂ 2ಎಂಪಿಯ ಮೈಕ್ರೊ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಇನ್ನು ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಮಿ ನೋಟ್ 10 ಸ್ಮಾರ್ಟ್‌ಫೋನ್ 5,260mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಪಡೆದಿರಲಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಸಹ ಇರಲಿದೆ. ಇದರೊಂದಿಗೆ ವೈಫೈ, ಜಿಪಿಎಸ್, ಬ್ಲೂಟೂತ್, ಕ್ಯಾಮೆರಾ ಜೂಮ್ ಆಯ್ಕೆಗಳು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.

Best Mobiles in India

English summary
Xiaomi Mi Note 10 smartphone is powered by Qualcomm Snapdragon 730G chipset and comes with up to 8GB of RAM and 256GB internal storage. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X