Subscribe to Gizbot

ಶ್ಯೋಮಿ ಎಮ್ಐ ನೋಟ್ ಸೊಗಸಾದ ಕಪ್ಪು ಬಣ್ಣದಲ್ಲಿ

Written By:

ಎಮ್ಐ ನೋಟ್‌ನ ಎರಡು ಆವೃತ್ತಿಗಳು, ಎಮ್ಐ ನೋಟ್‌ನ ಬ್ಯಾಂಬೂ ಆವೃತ್ತಿ ಮತ್ತು ಎಮ್ಐ ನೋಟ್ (ಪಿಂಕ್ ಆವೃತ್ತಿ) ಅನ್ನು ಲಾಂಚ್ ಮಾಡಿದ ನಂತರ, ಚೀನಾದ ಕಂಪೆನಿ ಸ್ಮಾರ್ಟ್‌ಫೋನ್‌ನ ಮೂರನೆಯ ಆವೃತ್ತಿ ಹೆಸರಾದ ಎಮ್ಐ ನೋಟ್ ಕಪ್ಪು ಆವೃತ್ತಿಯನ್ನು ಲಾಂಚ್ ಮಾಡಿದೆ.

[ಓದಿರಿ: ಯುಎಸ್ ತಿಜೋರಿಯನ್ನೇ ಮೀರಿಸಿದ ಆಪಲ್ ಗಳಿಕೆ]

ಶ್ಯೋಮಿ ಎಮ್ಐ ನೋಟ್ ಸೊಗಸಾದ ಕಪ್ಪು ಬಣ್ಣದಲ್ಲಿ

ಜನವರಿಯಲ್ಲಿ ಎಮ್ಐ ನೋಟ್‌ನೊಂದಿಗೆ ಬಿಡುಗಡೆ ಹೊಂದಿದ ಶ್ಯೋಮಿ ಎಮ್ಐ ನೋಟ್ ಪ್ರೊನ ಪ್ರಥಮ ಲಭ್ಯತಾ ಮಾಹಿತಿಗಳನ್ನು ಕೂಡ ಕಂಪೆನಿ ಘೋಷಿಸಿದೆ. ಎಮ್ಐ ನೋಟ್‌ನ ಕಪ್ಪು ಬಣ್ಣದ ಆವೃತ್ತಿ CNY 2499 (ಸರಿಸುಮಾರು ಬೆಲೆ ರೂ 25,000) ತನ್ನ ಪ್ರಥಮ ಫ್ಲ್ಯಾಶ್ ಸೇಲ್‌ನಲ್ಲಿ ಸೀಮಿತ ಸಂಖ್ಯೆಯಲ್ಲಿ ಇದು ಲಭ್ಯವಿದೆ.

[ಓದಿರಿ: ಐದರ ಹರೆಯದ ಶ್ಯೋಮಿ ಮಾಡಿದ್ದಾದರೂ ಏನು?]

ಇನ್ನು ಎಮ್ಐ ನೋಟ್‌ನ ವಿಶೇಷತೆ ಎಂದರೆ ಇದು ಕಪ್ಪು ಬಣ್ಣದಲ್ಲಿ ಬರುತ್ತಿರುವುದು, ಮತ್ತು ಚೀನಾದ ಹಾಡುಗಾರ ಜೇಸನ್ ಜಾಂಗ್‌ನ ಆಲ್ಬಮ್ ಇದರಲ್ಲಿರುವುದು ಪ್ರಧಾನವಾಗಿದೆ.

ಶ್ಯೋಮಿ ಎಮ್ಐ ನೋಟ್ ಸೊಗಸಾದ ಕಪ್ಪು ಬಣ್ಣದಲ್ಲಿ

ಇನ್ನು ಶ್ಯೋಮಿ ಎಮ್ಐ ನೋಟ್‌ನ ಕಪ್ಪು ಆವೃತ್ತಿ ಎಮ್ಐ ನೋಟ್‌ನ ಅದೇ ವಿಶೇಷತೆಗಳನ್ನು ಒಳಗೊಂಡಿದೆ. ಜನವರಿಯಲ್ಲಿ ಲಾಂಚ್ ಆದ ಈ ಡಿವೈಸ್, ರೂ 23,000 ಬೆಲೆಯನ್ನು ಹೊಂದಿದೆ. ಇದು 16 ಜಿಬಿ ಮಾಡೆಲ್ ಆಗಿದ್ದು, 64 ಜಿಬಿ ಮಾಡೆಲ್ ರೂ 27,900 ಕ್ಕೆ ದೊರೆಯುತ್ತಿದೆ.

ಶ್ಯೋಮಿ ಎಮ್ಐ ನೋಟ್ ಸೊಗಸಾದ ಕಪ್ಪು ಬಣ್ಣದಲ್ಲಿ

ಎಮ್ಐ ನೋಟ್ ಪ್ರೊ ಮೇ 6 ರಿಂದ ಲಭ್ಯವಾಗುತ್ತಿದ್ದು ಹ್ಯಾಂಡ್‌ಸೆಟ್‌ನ ಪ್ರಥಮ ಫ್ಲ್ಯಾಶ್ ಮಾರಾಟವೇ ಮೇ 6 ರಿಂದಲೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶ್ಯೋಮಿ ಎಮ್ಐ ನೋಟ್ ಪ್ರೊ ರೂ 32,900 ಕ್ಕೆ ದೊರೆಯುತ್ತಿದ್ದು ಮಾರ್ಚ್ ಅಂತ್ಯಕ್ಕೆ ಸಮೂಹ ಉತ್ಪನ್ನವನ್ನು ಪ್ರವೇಶಿಸಲಿದೆ ಎಂದು ಘೋಷಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot