Subscribe to Gizbot

ಐದರ ಹರೆಯದ ಶ್ಯೋಮಿ ಮಾಡಿದ್ದಾದರೂ ಏನು?

Written By:

ಚೀನಾದ ಆಪಲ್ ಎಂದೇ ಪ್ರಸಿದ್ಧವಾಗಿರುವ ಶ್ಯೋಮಿ, ಬಳಕೆದಾರ ಜಗತ್ತಿಗೆ ಅತಿ ಪ್ರಿಯವಾದ ಫೋನ್ ಆಗಿ ಮಾರ್ಪಟ್ಟಿದೆ. ಇಂದು ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸ್ಮಾರ್ಟ್‌ಫೋನ್ ಕಂಪೆನಿಯನ್ನು ಏಪ್ರಿಲ್ 6, 2010 ರಂದು ಸ್ಥಾಪನೆ ಮಾಡಲಾಯಿತು. ಕಂಪೆನಿಯ ಚೇರ್‌ಮ್ಯಾನ್ ಹಾಗೂ ಸಿಇಒ ಆಗಿರುವ ಲೀನ್ ಜೂನ್ ಈ ಕಂಪೆನಿಯ ಒಟಮಸ್ಥರಾಗಿದ್ದಾರೆ.

ಇದನ್ನೂ ಓದಿ: ಚೀನಾದ ಆಪಲ್ ಶ್ಯೋಮಿಯ ಕಮಾಲಿನ ಟಾಪ್ 20 ಉತ್ಪನ್ನಗಳು

ಐದನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿರುವ ಶ್ಯೋಮಿ ಕುರಿತ ಅತ್ಯಂತ ಆಸಕ್ತಿಕರ ಸಂಗತಿಗಳನ್ನು ನಾವು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಪ್ರಸ್ತುಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಸರು
  

ಚೀನಾದಲ್ಲಿ ಶ್ಯೋಮಿ ಎಂದರೆ ಸಣ್ಣ ಅಕ್ಕಿ ಎಂದಾಗಿದೆ. ಶ್ಯೋ ಅಂದರೆ ಸಣ್ಣದು ಅಂತೆಯೇ ಮಿ ಅಂದರೆ ಅಕ್ಕಿಯಾಗಿದೆ. ಇತರ ಚೀನಾ ಪದಗಳಂತೆ ಇದನ್ನು ಸರಿಯಾಗಿ ಉಚ್ಛರಿಸಿಲ್ಲ.

ಕಂಪೆನಿ ಲಾಂಛನ
  

ಶ್ಯೋಮಿ ಲಾಂಛನ ಮೊಲವಾಗಿದ್ದು ಇದರ ಹೆಸರು ಮಿಟು ಆಗಿದೆ. ಇದರ ಕ್ಯಾಪ್ ರೆಡ್ ಸ್ಟಾರ್ ಹೊಂದಿದ್ದು ಕುತ್ತಿಗೆಗೆ ಕೆಂಪು ಸ್ಕಾರ್ಫ್ ಅನ್ನು ಬಳಸಿದೆ.

ಆಪಲ್ ಹೋಲಿಕೆ
  

ಶ್ಯೋಮಿಯನ್ನು ಚೀನಾದ ಆಪಲ್ ಎಂದು ಕರೆದಿದ್ದು, ಯುಎಸ್‌ನಲ್ಲಿ ಆಪಲ್ ಏನು ಕಮಾಲನ್ನು ಮಾಡಿತ್ತೋ ಅಂತೆಯೇ ಶ್ಯೋಮಿ ಚೀನಾದಲ್ಲೂ ಇಂತಹುದೇ ಸಾಧನೆಯನ್ನು ಸಾಧಿಸಿತ್ತು.

ಗೂಗಲ್ ಸಂಪರ್ಕ
  

ಶ್ಯೋಮಿಯ ಒಂಭತ್ತು ನಾಯಕತ್ವ ಸ್ಥಾನಗಳನ್ನು ಗೂಗಲ್‌ನ ಮಾಜಿ ಉದ್ಯೋಗಿಗಳು ಭರ್ತಿ ಮಾಡಿದ್ದಾರೆ. ಸಹ ಸ್ಥಾಪಕರು ಲಿನ್ ಬಿನ್, ಹೋಂಗ್ ಫೆಂಗ್ ಸಹಸ್ಥಾಪಕರು, ಮತ್ತು ಹೂಗೋ ಬಾರ್ರಾ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ.

ಲಾಭ ವರ್ಸಸ್ ಆದಾಯ
  

ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದರೂ ಶ್ಯೋಮಿ ಕಡಿಮೆ ಲಾಭವನ್ನು ಮಾಡಿಕೊಂಡಿದೆ. 2013 ರಲ್ಲಿ ಕಂಪೆನಿ $56 ಮಿಲಿಯನ್ ಅನ್ನು ಗಳಿಸಿದ್ದರೆ, ಮಾರಾಟದಲ್ಲಿ $4.3 ಯನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಂಡಿದೆ. 2014 ರಲ್ಲಿ ಶ್ಯೋಮಿ ಟೆಕ್ನಾಲಜಿ $11.97 ಬಿಲಿಯನ್ ಅನ್ನು ಮಾರಾಟದಲ್ಲಿ ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi, the Chinese company that has taken the consumer technology world by storm, turns five today. Xiaomi was founded on April 6, 2010 by serial entrepreneur Lei Jun, who is also the company's chairman and CEO.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot