ಅಗ್ಗದ ಬೆಲೆಗೆ ಶಿಯೋಮಿ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಬಿಡುಗಡೆ!

|

ಶಿಯೋಮಿ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಅಷ್ಟೇ ಅಲ್ಲದೇ, ಅಗತ್ಯ ಎಲೆಕ್ಟ್ರಾನಿಕ್ಸ್‍ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಹಾಗೆಯೇ ಈಗಾಗಲೇ ಹಲವು ವೇರಿಯಂಟ್‌ಗಳಲ್ಲಿ ಆಡಿಯೊ ಸ್ವೀಕರ್ಸ್‌ಗಳನ್ನು ಪರಿಚಯಿಸಿರುವ ಶಿಯೋಮಿಯು, ಇದೀಗ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಮತ್ತೊಂದು ಹೊಸ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಅನ್ನು ಬಿಡುಗಡೆ ಮಾಡಿದೆ.

ದೇಶಿಯ ಮಾರುಕಟ್ಟೆಗೆ

ಹೌದು, ಶಿಯೋಮಿಯು ಇದೀಗ ದೇಶಿಯ ಮಾರುಕಟ್ಟೆಗೆ ನೂತನವಾಗ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಅನ್ನು ಲಾಂಚ್ ಮಾಡಿದೆ. ಈ ಬ್ಲೂಟೂತ್ ಸ್ವೀಕರ್ IPX5 ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯವನ್ನು ಪಡೆದಿದ್ದು, ಕಂಫರ್ಟ್‌ ಮತ್ತು ಸ್ಮಾರ್ಟ್‌ ರಚನೆಯನ್ನು ಒಳಗೊಂಡಿದೆ. ಇನ್ನು ಈ ಬ್ಲೂಟೂತ್ ಸ್ವೀಕರ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪಡೆದಿದ್ದು, ಈ ಡಿವೈಸ್ ಬೆಲೆಯು ಕೇವಲ 1,399ರೂ.ಗಳು ಆಗಿದೆ. ಈ ಡಿವೈಸ್‌ ಫೀಚರ್ಸ್‌ಗಳು ಹೇಗಿವೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್ ಮತ್ತು ರಚನೆ

ಡಿಸೈನ್ ಮತ್ತು ರಚನೆ

ಶಿಯೋಮಿಯ ಬ್ಲೂಟೂತ್ ಸ್ವೀಕರ್ ಚಿಕ್ಕದಾದ ಲುಕ್ ಪಡೆದಿದೆ ಆದರೆ ಸೌಲಭ್ಯಗಳು ಭಿನ್ನವಾಗಿವೆ. ಈ ಡಿವೈಸ್ ಒಂದು ಬದಿಯಲ್ಲಿ ಪ್ಲೇ/ಪಾಸ್‌(play/pause) ಹಾಗೂ ಪವರ್‌ ಬಟನ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇನ್ನೊಂದು ಬದಿಯಲ್ಲಿ ಚಾರ್ಜಿಂಗ್ ಅನುಕೂಲ ಒದಗಿಸಿದೆ ಜೊತೆಗೆ aux ಫೋರ್ಟ್‌ ನೀಡಿದ್ದು, ಅಲ್ಲಿಯೇ ಮೈಕ್ರೋಫೋನ್ ರಚನೆಯನ್ನು ಪಡೆದಿದೆ. ಜೊತೆಗೆ ಆಯಂಟಿ ಸ್ಕಿಡ್‌(ಜಾರದಂತಹ) ರಚನೆ ಪಡೆದಿದೆ.

ಫೀಚರ್ಸ್‌ಗಳೆನು

ಫೀಚರ್ಸ್‌ಗಳೆನು

ಈ ಸ್ಪೀಕರ್ IPX5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯವನ್ನು ಪಡೆದಿದ್ದು, ಹೀಗಾಗಿ ನೀರಿನಲ್ಲಿ ಬಿದ್ದಾಗ ಹಾನಿ ಆಗುವ ಸಾಧ್ಯತೆಗಳು ಕಡಿಮೆ. ಇದರೊಂದಿಗೆ ಇತ್ತೀಚಿನ ಜನಪ್ರಿಯ ಫೀಚರ್ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಸಹ ಪಡೆದಿದೆ. ಗೂಗಲ್ ಅಸಿಸ್ಟಂಟ್, ಅಲೆಕ್ಸಾ ಮತ್ತು ಸಿರಿ ಸೌಲಭ್ಯಗಳನ್ನು ಬೆಂಬಲಿಸುತ್ತದೆ. ಕರೆಗಳನ್ನು ಸ್ವೀಕರಿಸಲು ಮತ್ತು ಕರೆ ಕಟ್ ಮಾಡಲು ಅನುವು ಮಾಡುತ್ತದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಶಿಯೋಮಿಯ ಬ್ಲೂಟೂತ್ ಸ್ವೀಕರ್ 2000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದೆ. ಸುಮಾರು 20 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಒಳಗೊಂಡಿದೆ. ಬ್ಯಾಟರಿಯು 5W ಔಟ್‌ಪುಟ್ ಪವರ್ ಸಾಮ ಇದರೊಂದಿಗೆ ಬ್ಲೂಟೂತ್ 5.0 ಸಾಮರ್ಥ್ಯ ಬ್ಲೂಟೂತ್ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಔಟ್‌ಪುಟ್ ಸೌಂಡ್ ಹೊರಹಾಕಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ಬ್ಲೂಟತ್ ಸ್ವೀಕರ್ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಗೆ ಲಭ್ಯವಿದ್ದು, ಬೆಲೆಯು 1,399ರೂ.ಗಳು ಆಗಿದೆ. ಇನ್ನು ಈ ಡಿವೈಸ್‌ ಅನ್ನು ಗ್ರಾಹಕರು Mi.com ಮತ್ತು ಮಿ ಹೋಮ್ಸ್ ತಾಣಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಈ ಡಿವೈಸ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ.

Most Read Articles
Best Mobiles in India

English summary
Xiaomi has launched a new Mi Outdoor Bluetooth speaker in India. price tag of Rs 1,399.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X