ಶಿಯೋಮಿ ಸಂಸ್ಥೆಯಿಂದ 30000mAh ಸಾಮರ್ಥ್ಯದ Mi ಪವರ್ ಬ್ಯಾಂಕ್ 3 ಬಿಡುಗಡೆ!
ಇದು ಸ್ಮಾರ್ಟ್‌ಫೋನ್ ಜಗತ್ತು. ಪ್ರಸ್ತುತ ಜಮಾನದಲ್ಲಿ ಎಲ್ಲರ ಕೈನಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಲೇ ಇವೆ. ಅಲ್ಲದೆ ಇಂದಿನ ಯುವಜನತೆ ಸ್ಮಾರ್ಟ್‌ಫೋನ್ ಇಲ್ಲದೆ ಮನೆಯಿಂದ ಹೊರಗಡೆ ಹೋಗುವುದು ಕೂಡ ಕಷ್ಟ ಎನಿಸುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಇನ್ನು ಸ್ಮಾರ್ಟ್‌ಫೋನ್ ಗಳಲ್ಲಿ ಎಷ್ಟೇ ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ನೀಡಿದ್ದರೂ , ಸ್ಮಾರ್ಟ್‌ಫೋನ್ ಗಳಿಗೆ ಆಗಾಗ ಪವರ್ ದಾಹವನ್ನ ನೀಗಿಸಲೇ ಬೇಕಿರುತ್ತದೆ. ಸದ್ಯ ಇದಕ್ಕಾಗಿಯೇ ಟೆಕ್ ವಲಯದಲ್ಲಿ ಪವರ್‌ಬ್ಯಾಂಕ್‌ಗಳು ಲಭ್ಯವಿವೆ. ಇದರಲ್ಲಿ ಶಿಯೋಮಿ ಕಂಪೆನಿ ಕೂಡ ಪವರ್‌ಬ್ಯಾಂಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ತನ್ನದೇ ಆದ ಪ್ರಾಬಲ್ಯವನ್ನ ವಿಸ್ತರಿಸಿಕೊಂಡಿದೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿದ್ಯುತ್ ದಾಹ ನೀಭಾಯಿಸುವ ಪವರ್‌ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯಲ್ಲಿ ಲಬ್ಯವಿವೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಕೂಡ ತನ್ನ ಮತ್ತೊಂದು ಹೊಸ ಮಾದರಿಯ ಪವರ್‌ಬ್ಯಾಂಕ್ ಅನ್ನು ಪರಿಚಯಿಸಿದೆ. ಈಗಾಗಲೇ ಶಿಯೋಮಿ ಕಂಪೆನಿ ಹಲವು ಪವರ್‌ಬ್ಯಾಂಕ್‌ಗಳನ್ನ ಪರಿಚಯಿಸಿದ್ದು, ಇದೀಗ ಶಿಯೋಮಿ 30000mAh ಸಾಮರ್ಥ್ಯದ ಮಿ ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಪವರ್‌ಬ್ಯಾಂಕ್‌ನ ವಿಶೇಷತೆ ಹಾಗೂ ವಿನ್ಯಾಸಹ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸದ್ಯ ಶಿಯೋಮಿ 30000mAh Mi ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಆವೃತ್ತಿಯನ್ನು ವಿನ್ಯಾಸಗೊಳಿಸಿದ್ದು, 10 ಕ್ಕೂ ಹೆಚ್ಚು ಬಾರಿ ಫೋನ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಪವರ್ ಬ್ಯಾಂಕ್ ಮಿ 10 ಅಥವಾ ರೆಡ್ಮಿ K30 ಪ್ರೊ ಅನ್ನು 4.5 ಬಾರಿ ಚಾರ್ಜ್ ಮಾಡಬಹುದೆಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ ಐಫೋನ್ SE(2020) ಅನ್ನು 10.5 ಬಾರಿ ಚಾರ್ಜ್ ಮಾಡಬಹುದು ಎನ್ನಲಾಗ್ತಿದೆ. ಇದಲ್ಲದೆ ಈ ಪವರ್ ಬ್ಯಾಂಕ್ ತನ್ನ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಇದಲ್ಲದೆ ಐಫೋನ್ 11 ಅನ್ನು ಕೇವಲ 1.45 ಗಂಟೆಗಳಲ್ಲಿ ಚಾರ್ಜ್ ಮಾಡಲು ಇದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಸಾಂಪ್ರದಾಯಿಕ 5W ಟ್ರಾವೆಲ್ ಚಾರ್ಜರ್‌ನಿಂದ ಪಡೆಯಬಹುದಾದ ಸಮಯಕ್ಕಿಂತ 54% ವೇಗವಾಗಿ ಚಾರ್ಜಿಂಗ್ ಟೈಂ ಅನ್ನು ಹೊಂದಿದೆ. 30000mAh Mi ಪವರ್ ಬ್ಯಾಂಕ್ 3 ಯುಎಸ್‌ಬಿ ಟೈಪ್-ಸಿ ಪೋರ್ಟ್ ಜೊತೆಗೆ ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನ ಹೊಂದಿದೆ. ಅಲ್ಲದೆ ಇದರಲ್ಲಿ ಮೂರು ಡಿವೈಸ್‌ಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಲಭ್ಯವಿರುವ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡಲು ಸಹ ಬಳಸಬಹುದು.

ಅಲ್ಲದೆ ಯುಎಸ್‌ಬಿ ಟೈಪ್-ಸಿ ಕೇಬಲ್ ಜೊತೆಗೆ ತನ್ನ 30W ಸ್ವಾಮ್ಯದ ವೇಗದ ಚಾರ್ಜರ್ ಅನ್ನು ಬಳಸುವಾಗ, ಮಿ ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಆವೃತ್ತಿಯನ್ನು 7.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಶಿಯೋಮಿ ಹೇಳಿಕೊಂಡಿದೆ. ಕಂಪನಿಯು ವೇಗದ ಚಾರ್ಜಿಂಗ್ ಅನುಭವವನ್ನು ಯುಎಸ್‌ಬಿ-ಸಿ 24W ಮ್ಯಾಕ್ಸ್ ಹೈ-ಪವರ್ ಇನ್‌ಪುಟ್ ಬೆಂಬಲ ನೀಡಲಿದೆ. ಸ್ಮಾರ್ಟ್ ಬ್ಯಾಂಡ್‌ಗಳು ಮತ್ತು ಇಯರ್‌ಬಡ್‌ಗಳಂತಹ ಡಿವೈಸ್‌ಗಳಲ್ಲಿ 30000mAh Mi ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಆವೃತ್ತಿಯು ಮೀಸಲಾದ ಕಡಿಮೆ-ಪ್ರಸ್ತುತ ಮೋಡ್ ಅನ್ನು ಹೊಂದಿದ್ದು, ಇದನ್ನು ಪವರ್ ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಆಕ್ಟಿವ್ ಗೊಳಿಸಬಹುದಾಗಿದೆ.

ಇನ್ನು ಈ ಹೊಸ ಮಾದರಿಯ ಪವರ್‌ಬ್ಯಾಂಕ್ ಏಕಕಾಲದಲ್ಲಿ ಮೂರು ಡಿವೈಸ್‌ಗಳನ್ನ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಜೊತೆಗೆ ಯುಎಸ್ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್ ರಿಸ್ಟ್‌ಬ್ಯಾಂಡ್‌ಗಳು ಮತ್ತು ಬ್ಲೂಟೂತ್ ವೈರ್‌ಲೆಸ್ ಇಯರ್‌ಬಡ್‌ಗಳಂತಹ ಕಡಿಮೆ ಶಕ್ತಿಯ ಅಗತ್ಯವಿರುವ ಸಾಧನಗಳನ್ನು ಚಾರ್ಜ್ ಮಾಡಲು ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುವ ಕಡಿಮೆ-ಪ್ರಸ್ತುತ ಮೋಡ್ ಅನ್ನು ಶಿಯೋಮಿ ಒದಗಿಸಿದೆ. 30000mAh ಮಿ ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಆವೃತ್ತಿಯು ಯುಎಸ್ಬಿ ಟೈಪ್-ಸಿ 24 ಡಬ್ಲ್ಯೂ ಮ್ಯಾಕ್ಸ್ ಹೈ-ಪವರ್ ಇನ್‌ಪುಟ್ ಬೆಂಬಲವನ್ನು ಒಳಗೊಂಡಿದೆ, ಇದು ವೇಗದ ಚಾರ್ಜಿಂಗ್ ಅನುಭವವನ್ನು ನೀಡುತ್ತದೆ.

ಇದಲ್ಲದೆ 30000mAh Mi ಪವರ್ ಬ್ಯಾಂಕ್ 3 ಕ್ವಿಕ್ ಚಾರ್ಜ್ ಬೆಲೆ CNY169 (ಸುಮಾರು 1,800 ರೂ.) ಎಂದು ನಿಗದಿಪಡಿಸಲಾಗಿದೆ. ಅಲ್ಲದೆ ಈ ಪವರ್ ಬ್ಯಾಂಕ್ ಆರಂಭದಲ್ಲಿ ಚೀನಾದಲ್ಲಿ ಜೆಡಿ.ಕಾಮ್ ಮತ್ತು ಶಿಯೋಮಿಯ ಮಿ.ಕಾಮ್ ಮೂಲಕ ಪೂರ್ವ-ಬುಕಿಂಗ್ಗಾಗಿ ಲಭ್ಯವಿದ್ದು, ಇದೇ ಜೂನ್ 18 ರಿಂದ ಮಾರಾಟವಾಗಲಿದೆ ಎನ್ನಲಾಗಿದೆ.


Click it and Unblock the Notifications




