ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?

|

ಭಾರತೀಯ ಮಾರುಕಟ್ಟೆಯನ್ನು ಮುಖ್ಯವಾಗಿ ನೆಚ್ಚಿಕೊಂಡಿರುವ, ಚೀನಾ ಮೂಲದ ಶಿಯೋಮಿ ಕಂಪನಿಯ ಬರೀ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಈಗ ಸಿಮೀತವಾಗಿಲ್ಲ. ಬದಲಾಗಿ ಕಂಪನಿಯು ಹಲವು ಫ್ಯಾಶನ್, ಎಲೆಕ್ಟ್ರಾನಿಕ್ಸ್ ಮತ್ತು ಕೇಶವಿನ್ಯಾಸ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾಗಿರುವ ಕಂಪನಿಯು ರೀಚಾರ್ಜೆಬಲ್ ಎಲ್‌ಇಡಿ ಲ್ಯಾಂಪ್ ಅನ್ನು ಘೋಷಿಸಿ ಗ್ರಾಹಕರನ್ನು ಸೆಳೆದಿದೆ.

ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?

ಹೌದು, ಶಿಯೋಮಿ ಕಂಪನಿಯು ಹೊಸದಾಗಿ 'ರೀಚಾರ್ಜೆಬಲ್ LED ಲ್ಯಾಂಪ್‌' ಡಿವೈಸ್‌ ಅನ್ನು ಘೋಷಿಸಿದ್ದು, ಈ ಲ್ಯಾಂಪ್ ಬರೊಬ್ಬರಿ 5 ದಿನಗಳ ಬಾಳಿಕೆ ಬರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಪೋರ್ಟೆಬಲ್ ಮಾದರಿಯಲ್ಲಿರುವ ಈ ಲ್ಯಾಂಪ್‌ನಲ್ಲಿ ಬೆಳಕಿನ ಪ್ರಖರತೆಯ ಹೆಚ್ಚಳಕ್ಕೆ 3 ಲೆವೆಲ್‌ಗಳನ್ನು ನೀಡಲಾಗಿದ್ದು, ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಬೆಳಕಿನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬಹುದಾದ ಸೌಲಭ್ಯವನ್ನು ಒಳಗೊಂಡಿದೆ.

ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?

ಬಿಳಿ ಬಣ್ಣದಲ್ಲಿರುವ ಮಿ ರೀಚಾರ್ಜೆಬಲ್ LED ಲ್ಯಾಂಪ್ ಕನಿಷ್ಠ ಪೋರ್ಟೆಬಲ್ ಡಿಸೈನ್‌ ಲುಕ್‌ನಲ್ಲಿದ್ದು, ಹೆಚ್ಚು ಆಕರ್ಷಕವಾಗಿ ಕಾಣಲಿದೆ. ಹಾಗೆಯೇ ಈ ಡಿವೈಸ್‌ ವೈಟ್‌, ವಾರ್ಮ್‌ ವೈಟ್‌ ಮತ್ತು ಯಲ್ಲೊ ಬಣ್ಣಗಳ ಮೂರು ವೇರೈಟಿ ಲೈಟಿಂಗ್ ಲೆವೆಲ್ ಆಯ್ಕೆಯನ್ನು ಹೊಂದಿದ್ದು, ಬೆಸ್ಟ್‌ ಎಮರ್ಜನ್ಸಿ ಲ್ಯಾಂಪ್‌ ಎನಿಸಿಕೊಂಡಿದೆ. ಗ್ರಾಹಕರು ಲ್ಯಾಂಪ್‌ನ ಬ್ರೈಟ್ನೆಸ್‌ ಲೆವೆಲ್‌ ಅನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?

ಮಿ ರೀಚಾರ್ಜೆಬಲ್ LED ಲ್ಯಾಂಪ್ ಹಗುರವಾಗಿದ್ದು, ಸುಲಭವಾಗಿ ಜೊತೆಗೆ ಕೊಂಡೊಯ್ಯಬಹುದಾಗಿದೆ. ಹಾಗೆಯೇ ರೀಚಾರ್ಜೆಬಲ್ ಆಯ್ಕೆ ಹೊಂದಿರುವ ಜೊತೆಗೆ ಐದು ದಿನಗಳವರೆಗೂ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುವ ಸಾಮರ್ಥ್ಯವನ್ನು ಹೊಂದಿರುವುದು ಪ್ರಮುಖ ಕೀ ಫೀಚರ್ಸ್‌ಗಳಾಗಿವೆ. ಕಂಪನಿಯ ಈ ಡಿವೈಸ್‌ ಇದೇ ಜುಲೈ 18ರಂದು ಮಧ್ಯಾಹ್ನ 12ಗಂಟೆಗೆ ಆನ್‌ಲೈನ್‌ ತಾಣದಲ್ಲಿ ಲಭ್ಯವಾಗಲಿದೆ.

ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ!ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ!

ಶಿಯೋಮಿ ಕಂಪನಿಯು ಯಶಸ್ವಿ ಐದು ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿ ಹಲವು ನೂತನ ಉತ್ಪನ್ನಗಳನ್ನು ಪರಿಚಯಿಸುತ್ತಲೇ ಸಾಗಿದೆ. ಇತ್ತೀಚಿಗೆ ಶಿಯೋಮಿ ಮೆನ್‌ ಟ್ರಿಮ್ಮರ್‌ ಬಿಡುಗಡೆ ಮಾಡಿದ್ದು, ಹಾಗೆಯೇ ಮಿ ಸೂಪರ್‌ಬಾಸ್‌ ವಾಯರ್‌ಲೆಸ್‌ ಹೆಡ್‌ಫೋನ್‌ ಡಿವೈಸ್‌ ಅನ್ನು ಸಹ ರಿಲೀಸ್‌ ಮಾಡಿದೆ. ಇದರೊಂದಿಗೆ ಕಂಪನಿಯ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಸಹ ಸದ್ದು ಮಾಡಲಿವೆ.

ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರವಹಿಸಿ! ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರವಹಿಸಿ!

Best Mobiles in India

English summary
The Mi Rechargeable LED lamp comes packed with three brightness levels. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X