Home
ಸುದ್ದಿಜಾಲ

ಶಿಯೋಮಿ ಬ್ಯಾಂಡ್‌ 6 ಡಿವೈಸ್‌ಗೆ ಸಖತ್ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಶಿಯೋಮಿ ಸಂಸ್ಥೆಯ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ ಈಗಾಗಲೇ ಫಿಟ್ನೆಸ್‌ ಪ್ರಿಯರನ್ನು ಆಕರ್ಷಿಸಿದೆ. ಇದೀಗ ಈ ಡಿವೈಸ್‌ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಆಕರ್ಷಕ ಬೆಲೆ ಇಳಿಕೆ ಕಂಡಿದ್ದು, ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ. ಅಂದಹಾಗೆ ಈ ಡಿವೈಸ್‌ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದೆ.

ಹೌದು, ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 6 ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ ಅಮೆಜಾನ್ ಆನ್‌ಲೈನ್‌ ತಾಣದಲ್ಲಿ ಈಗ 25% ನಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಫಿಟ್ನೆಸ್‌ ಬ್ಯಾಂಡ್‌ 7,990ರೂ. ಪ್ರೈಸ್‌ ಟ್ಯಾಗ್‌ ಹೊಂದಿದ್ದು, ರಿಯಾಯಿತಿಯಲ್ಲಿ ಇದು 5,990ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಇದು 24‍x7 ಹಾರ್ಟ್‌ ರೇಟ್ ಮಾನಿಟರಿಂಗ್, 5ATM ವಾಟರ್‌ ರೆಸಿಸ್ಟನ್ಸ್‌ ನಂತಹ ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ.

ಶಿಯೋಮಿ ಬ್ಯಾಂಡ್‌ 6 ಡಿವೈಸ್‌ಗೆ ಸಖತ್ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಮಿ ಸ್ಮಾರ್ಟ್ ಬ್ಯಾಂಡ್ 6 ಫಿಟ್ನೆಸ್‌ ಡಿವೈಸ್‌ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ. ಇನ್ನು ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಬ್ಲ್ಯಾಕ್, ಬ್ಲೂ, ಲೈಟ್‌ ಗ್ರೀನ್‌, ಮರೂನ್ ಮತ್ತು ಆರೆಂಜ್‌ ಬಣ್ಣಗಳ ಆಯ್ಕೆ ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ಇತರೆ ಫೀಚರ್ಸ್‌ ಹೀಗಿವೆ : ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56 ಇಂಚಿನ (152 x 486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಶಿಯೋಮಿ ಬ್ಯಾಂಡ್‌ 6 ಡಿವೈಸ್‌ಗೆ ಸಖತ್ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಪ್ರಮುಖ ಕೀ ಫೀಚರ್ಸ್‌ : ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಬ್ಯಾಂಡ್ 5 ಎಟಿಎಂ ನೀರಿನ ಪ್ರತಿರೋಧಕ್ಕೆ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಕ್ಲಿಪ್ ಆನ್ ಮತ್ತು ಕ್ಲಿಪ್ ಆಫ್ ಚಾರ್ಜಿಂಗ್ಗಾಗಿ ಮ್ಯಾಗ್ನೆಟಿಕ್ ಪೋರ್ಟ್ ಅನ್ನು ಹೊಂದಿದೆ.

ಫಿಟ್ನೆಸ್‌ ಫೀಚರ್ಸ್‌ : ಈ ಡಿವೈಸ್ ಸುಮಾರು 30 ಬಗೆಯ ತಾಲೀಮು/ವರ್ಕ್‌ಔಟ್‌ ಮಾದರಿಗಳನ್ನು ಟ್ರ್ಯಾಕ್ ಮಾಡುವ ಸೌಲಭ್ಯವನ್ನು ಪಡೆದಿದ್ದು, ಫಿಟ್ನೆಸ್ ಪ್ರಿಯರನ್ನು ಹೆಚ್ಚು ಆಕರ್ಷಿಸಿದೆ. ಒಳಾಂಗಣ ಕ್ರೀಡಾ ತರಬೇತಿಗಳು ಸೇರಿದಂತೆ ವೃತ್ತಿಪರ ಕ್ರೀಡೆಗಳಾದ ಕ್ರಿಕೆಟ್ ಮತ್ತು ಜಿಮ್ನಾಸ್ಟಿಕ್ಸ್ ಮತ್ತು ಜುಂಬಾ ಚಟುವಟಿಕೆಗಳು ಸೇರಿವೆ. ಹಾಗೆಯೇ ಈ ಡಿವೈಸ್ SpO2 ಮಾಪನ ಮಾಡುವ ಸೌಲಭ್ಯವನ್ನು ಒಳಗೊಂಡಿದೆ.

ಶಿಯೋಮಿ ಬ್ಯಾಂಡ್‌ 6 ಡಿವೈಸ್‌ಗೆ ಸಖತ್ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಇತರೆ ಫೀಚರ್ಸ್‌ : ಇದು ಆರೋಗ್ಯ ಟ್ರ್ಯಾಕಿಂಗ್ ಜೊತೆಗೆ, ಮಿ ಸ್ಮಾರ್ಟ್ ಬ್ಯಾಂಡ್ 6 ಒತ್ತಡದ ಮೇಲ್ವಿಚಾರಣೆ, ಆಳವಾದ ಉಸಿರಾಟದ ಮಾರ್ಗದರ್ಶನ ಕಾರ್ಯ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಹಾಗೆಯೇ ಮಿ ಸ್ಮಾರ್ಟ್ ಬ್ಯಾಂಡ್ 6 ಬ್ಲೂಟೂತ್ v5.0 (BLE) ಸಂಪರ್ಕದೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಬೆಂಬಲಿಸುತ್ತದೆ. ಇದರ ಜೊತೆಯಲ್ಲಿ, ಬ್ಯಾಂಡ್ 47.4x18.6x12.7 mm ಅಳತೆ ಮತ್ತು 12.8 ಗ್ರಾಂ ತೂಗುತ್ತದೆ.

ಭಾರತದಲ್ಲಿ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಅನ್ನು ಅಮೆಜಾನ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಇನ್ನು ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಬ್ಲ್ಯಾಕ್, ಬ್ಲೂ, ಲೈಟ್‌ ಗ್ರೀನ್‌, ಮರೂನ್ ಮತ್ತು ಆರೆಂಜ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Xiaomi Mi Smart Band 6 available at Huge Discount price on Amazon: check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+