ಶಿಯೋಮಿ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2 ಡಿವೈಸ್‌ ಬೆಲೆ ಇಳಿಕೆ!

|

ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್ ಜೊತೆಗೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಂದಲೂ ಗಮನ ಸೆಳೆದಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಡಿವೈಸ್‌ ಅನ್ನು ಪರಿಚಯಿಸಿದ್ದು, ಈ ಸಾಧನವು ವಿಶೇಷ ಫೀಚರ್ಸ್‌ಗಳಿಂದ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದೆ. ಇದೀಗ ಈ ವಾಯರ್‌ಲೆಸ್‌ ಡಿವೈಸ್‌ ಬೆಲೆಯಲ್ಲಿ ಕಡಿತವಾಗಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ.

ವಾಯರ್‌ಲೆಸ್

ಹೌದು, ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್‌ 2 ಡಿವೈಸ್‌ನ ಬೆಲೆಯಲ್ಲಿ ಇಳಿಕೆಯಾಗಿದೆ. ಅಮೆಜಾನ್ ಮತ್ತು ಮಿ ಅಧಿಕೃತ ತಾಣದಲ್ಲಿ 4,999ರೂ. ಪ್ರೈಸ್‌ಟ್ಯಾಗ್ ಹೊಂದಿದ್ದ ಈ ಡಿವೈಸ್‌ ದರ ಕಡಿತದಿಂದಾಗಿ ಈಗ 3,999ರೂ. ದರದಲ್ಲಿ ಕಾಣಿಸಿಕೊಂಡಿದೆ. ಈ ಟ್ರೂಲಿ ವಾಯರ್‌ ಲೆಸ್ ಇಯರ್‌ಬಡ್‌ ಧ್ವನಿ ಗುಣಮಟ್ಟ, ಕರೆ ಸ್ಪಷ್ಟತೆ ಮತ್ತು ಬ್ಯಾಟರಿ ದೀರ್ಘ ಬಾಳಿಕೆಯನ್ನು ಒಳಗೊಂಡಿದೆ. ಇನ್ನು ಈ ಇಯರ್‌ಫೋನ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೈನಾಮಿಕ್

ಶಿಯೋಮಿ ಇದೀಗ ಬಿಡುಗಡೆ ಮಾಡಿರುವ ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2 ಇಯರ್‌ಬಡ್‌ಗಳು 14.2mm ಡೈನಾಮಿಕ್ ಆಡಿಯೋ ಡ್ರೈವರ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್ ಅನ್ನು ಸಹ ಒಳಗೊಂಡಿರುತ್ತವೆ. ಇನ್ನು ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್‌ಗಳಂತಹ ವಿನ್ಯಾಸದೊಳಗೆ ಕೇವಲ 15mm ಆಡಿಯೋ ಡ್ರೈವರ್ ಮಾತ್ರ ಹೊಂದಿಕೊಳ್ಳಬಹುದು ಎಂದು ಶಿಯೋಮಿ ಹೇಳಿದೆ. ಇದಲ್ಲದೆ ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2 ಅರ್ಧದಷ್ಟು ಕಿವಿಯ ವಿನ್ಯಾಸವನ್ನು ಹೊಂದಿದೆ.

ಗುಣಮಟ್ಟ

ಅಲ್ಲದೆ ಈ ಟ್ರೂಲಿ ವಾಯರ್‌ ಲೆಸ್ ಇಯರ್‌ಬಡ್‌ ಧ್ವನಿ ಗುಣಮಟ್ಟ, ಕರೆ ಸ್ಪಷ್ಟತೆ ಮತ್ತು ಬ್ಯಾಟರಿ ದೀರ್ಘ ಬಾಳಿಕೆಯನ್ನು ಇನ್ನಷ್ಟು ಸುಧಾರಿಸಲಾಗಿದೆ. ಅಲ್ಲದೆ ಇದು 14 ಗಂಟೆಗಳ ರೇಟಿಂಗ್ ಬ್ಯಾಟರಿ ಹೊಂದಿದೆ. ಜೊತೆಗೆ ಈ ಇಯರ್‌ಬಡ್ಸ್‌ನ ಮೊಗ್ಗುಗಳು ಒಂದೇ ಚಾರ್ಜ್‌ನಲ್ಲಿ ನಾಲ್ಕು ಗಂಟೆಗಳವರೆಗೆ ಇರುತ್ತದೆ ಎನ್ನಲಾಗ್ತಿದೆ. ಇನ್ನು ಈ ಬ್ಯಾಟರಿ ಜೀವಿತಾವಧಿಯು 80 ಪ್ರತಿಶತ ಪರಿಮಾಣವನ್ನು ಆಧರಿಸಿದೆ ಎಂದು ಹೇಳಲಾಗಿದೆ. ಅಲ್ಲದೆ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ಸ್ 2 ಬ್ಲೂಟೂತ್ 5.0 ಮತ್ತು ಡ್ಯುಯಲ್ ನಾಯ್ಸ್‌ ಕ್ಯಾನ್ಸೆಲೇಶನ್‌ ಮೈಕ್ರೊಫೋನ್‌ಗಳನ್ನು ಬೆಂಬಲಿಸುತ್ತದೆ.

ಯುಎಸ್‌ಬಿ

ಇನ್ನು ಈ ಇಯರ್‌ಬಡ್ಸ್‌ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಇದೆ ಮತ್ತು ಫುಲ್‌ ಚಾರ್ಜ್‌ಗೆ ಸುಮಾರು ಒಂದು ಗಂಟೆ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಇದಲ್ಲದೆ ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಎಲ್‌ಎಚ್‌ಡಿಸಿ ಕೋಡೆಕ್‌ಗೆ ಬೆಂಬಲಿಸಲಿದೆ. ಇನ್ನು ಇದು ಡ್ಯುಯಲ್ ನಾಯ್ಸ್‌ ಕ್ಯಾನ್ಸೆಲೇಶನ್‌ ಮೈಕ್ರೊಫೋನ್ಗಳನ್ನು ಹೊಂದಿದ್ದು ಅದು ಎಕೋ ಸೌಂಡ್‌ ಅನ್ನು 30 ಡೆಸಿಬಲ್‌ಗೆ ಇಳಿಸುತ್ತದೆ. ಜೊತೆಗೆ ತ್ವರಿತ ಜೋಡಣೆಯ ಮೂಲಕ ಮಿ ಸ್ಮಾರ್ಟ್‌ಫೋನ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಇದು ಬೆಂಬಲಿಸುತ್ತದೆ.

ಬೆಲೆಯಲ್ಲಿ

ಅಲ್ಲದೆ ಶಿಯೋಮಿ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2 ಭಾರತದಲ್ಲಿ ಈಗ 1000ರೂ. ಬೆಲೆ ಇಳಿಕೆ ಕಂಡಿದ್ದು, ಈಗ 3,999ರೂ.ಬೆಲೆಯಲ್ಲಿ ಲಭ್ಯವಾಗುತ್ತದೆ.

Most Read Articles
Best Mobiles in India

English summary
Consumers looking to purchase the Mi True Wireless Earphones 2 can head over to mi.com and Amazon India website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X