Home
ಸುದ್ದಿಜಾಲ

ಶಿಯೋಮಿಯ ಈ ಡಿವೈಸ್‌ನ ಉಯೋಗವೇನು? ಸಾಮಾಜಿಕ ಜಾಲತಾಣದಲ್ಲಿ ಇದರದೇ ಅಬ್ಬರ!

ಸ್ಮಾರ್ಟ್‌ಡಿವೈಸ್‌ಗಳ ಬಳಕೆಯ ಕ್ರೇಜ್‌ ಹೆಚ್ಚಾಗುತ್ತಿರುವಂತೆ ಹೊಸ ಹೊಸ ಡಿವೈಸ್‌ಗಳು ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಲೇ ಇವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಕಂಪೆನಿಯಾದ ಶಿಯೋಮಿ (Xiaomi) ಹೊಸ ವಾಟರ್‌ ಗನ್‌ ಪರಿಚಯಿಸಿದೆ. ಈ ಬಿಳಿ ಬಣ್ಣದ ಆಕರ್ಷಕ ನೋಟ ಇರುವ ಗನ್‌ ನಿಮ್ಮನ್ನು ಖಂಡಿತಾ ಬೇರೋಂದು ಲೋಕಕ್ಕೆ ಕೊಂಡೊಯ್ಯುತ್ತದೆ.

ಶಿಯೋಮಿಯ ಈ ಡಿವೈಸ್‌ನ ಉಯೋಗವೇನು? ಸಾಮಾಜಿಕ ಜಾಲತಾಣದಲ್ಲಿ ಇದರದೇ ಅಬ್ಬರ!

ಹೌದು, ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೋಲ್ ಮಾಡುವಾಗ, ನೀವು ಒಂದಲ್ಲಾ ಒಂದು ಬಾರಿ ಈ ರೀತಿಯ ವಾಟರ್‌ ಗನ್ ನೋಡಿರಬಹುದು. ಇದನ್ನು ನೋಡಿದಾಕ್ಷಣ ನಿಮಗೆ ಸಿನಿಮಾಗಳ ನೆನಪು ಸಹ ಬರಬಹುದು.ಆದರೆ,ಇದನ್ನು ನೀವು ಸಹ ಬಳಕೆ ಮಾಡಬಹುದು. ಈ ಹೊಸ ಟಾಯ್‌ ಗನ್‌ ಅನ್ನು ಶಿಯೋಮಿ ಲಾಂಚ್‌ ಮಾಡಿದ್ದು, ಇದರ ಹೆಸರು ಮಿಜಿಯಾ ಪ್ಲಸ್ ವಾಟರ್‌ಗನ್ ಎಂದು. ಹಾಗಿದ್ರೆ, ಇದರ ಬಳಕೆ ಹೇಗೆ, ಶಿಯೋಮಿ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಟಿವಿ ಬಿಟ್ಟು ಈ ಡಿವೈಸ್‌ ಅನ್ನು ಯಾಕೆ ತಯಾರಿ ಮಾಡಿದೆ. ಇದರ ಬೆಲೆ ಎಷ್ಟು ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಶಿಯೋಮಿ ಮಿಜಿಯಾ ಪ್ಲಸ್ ವಾಟರ್‌ಗನ್ : ಮೊದಲೇ ತಿಳಿಸಿದಂತೆ ಶೀಯೋಮಿ ಎಂದಾಕ್ಷಣ ಭಾರತದಲ್ಲಿನ ನೆನಪಿಗೆ ಬರುವುದು ಸ್ಮಾರ್ಟ್‌ಫೋನ್‌ಗಳು. ಆದರೆ ಈಗ ಆಟಿಕೆ ವಿಭಾಗಕ್ಕೆ ಕಾಲಿಟ್ಟಿರುವ ಈ ಕಂಪೆನಿ ಅತ್ಯಾಕರ್ಷಕ ಶಿಯೋಮಿ ಮಿಜಿಯಾ ಪ್ಲಸ್ ವಾಟರ್‌ಗನ್ (Mijia Plus Watergun) ಅನ್ನು ಪರಿಚಯಿಸಿದೆ. ಈ ಗನ್‌ ಸಾಮಾನ್ಯ ಡಿವೈಸ್‌ನಂತೆ ಕಾಣುತ್ತದೆಯಾದರೂ ಇದರ ಫೀಚರ್ಸ್‌ ಮಾತ್ರ ಆಕರ್ಷಕ. ಅಕ್ವಾಮನ್‌ನಿಂದ ಬ್ಲ್ಯಾಕ್ ಮಾಂಟಾದ ಹೈಡ್ರೋ-ಪ್ಲಾಸ್ಮಾ ರೈಫಲ್‌ನಂತೆಯೇ, ಈ ವಾಟರ್ ಗನ್ ಮೂರು ವಿಭಿನ್ನ ವಿಧಾನಗಳಲ್ಲಿ ಶೂಟ್ ಮಾಡುತ್ತದೆ.

ಈ ವಾಟರ್‌ ಗನ್ ನಿರಂತರ, ಏಕ ಅಥವಾ ಮಧ್ಯಂತರ ಎಂಬ ಮೂರು ವಿಧಾನಗಳಲ್ಲಿ ನೀರನ್ನು ಬಳಕೆ ಮಾಡಿಕೊಂಡು ಶೂಟ್‌ ಮಾಡಬಹುದು. ಅಂದರೆ ಈ ಟಾಯ್ ಗನ್ ಗರಿಷ್ಠ ವೇಗದಲ್ಲಿ 7 ರಿಂದ 9 ಮೀಟರ್ ದೂರಕ್ಕೆ ಸೆಕೆಂಡಿಗೆ 25 ವಾಟರ್ ಬಾಂಬ್ ಗಳನ್ನು ಹಾರಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ ಯಾವುದೇ ಮೂಲದಿಂದ ನೀರನ್ನು ಸೆಳೆಯಬಲ್ಲ ಶಕ್ತಿ ಪಡೆದಿದೆ.

ಅಂದರೆ 10 ರಿಂದ 15 ಸೆಕೆಂಡುಗಳಲ್ಲಿ ಅದರ ಟ್ಯಾಂಕ್ ಭರ್ತಿ ಆಗುತ್ತದೆ ಅಥವಾ ಹೀರಿಕೊಳ್ಳುತ್ತದೆ. ಇದರೊಂದಿಗೆ ಈ ವಾಟರ್ ಗನ್ ಹೈ-ಡೆಫಿನಿಷನ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಅದು ಗನ್ ಒಳಗೆ ನೀರಿನ ಮಟ್ಟ ಮತ್ತು ಮೋಡ್ ಅನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಹಾಗಿದ್ರೆ ಮತ್ಯಾಕೆ ತಡ ಯಾಕೆ ಬನ್ನಿ ಆಟವನ್ನು ಹೊರತುಪಡಿಸಿ ಉಳಿದ ಯಾವೆಲ್ಲಾ ವಿಚಾರಕ್ಕೆ ಇದನ್ನು ಬಳಕೆ ಮಾಡಲಾಗುತ್ತದೆ ಎಂಬುದನ್ನು ನೋಡೋಣ.

ಈ ಡಿವೈಸ್ ಪ್ರಮುಖವಾಗಿ ಸ್ವಚ್ಛಗೊಳಿಸುವ ಡಿವೈಸ್‌ ಆಗಿ ಪರಿಚಯಿಸಲಾಗಿದೆ. ಬಳಕೆದಾರರು ತಮ್ಮ ಕಾರುಗಳು, ಕಿಟಕಿಗಳು, ಮಹಡಿಗಳನ್ನು ತೊಳೆಯಲು ಮತ್ತು ತಮ್ಮ ಸಾಕುಪ್ರಾಣಿಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಕೆ ಮಾಡಹುದಾಗಿದೆ. ಜೊತೆಗೆ ಮನೆಯ ಹೊರಾಂಗಣದಲ್ಲಿ ನೀರಿನೊಂದಿಗೆ ಆಟ ಆಡಲು ಸಹ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದ್ದು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 40 ನಿಮಿಷಗಳ ಕಾಲ ಬಳಕೆ ಮಾಡಬಹುದಾಗಿದೆ.

ಅಂದರೆ ಈ ಡಿವೈಸ್‌ 1,800 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಮೂಲಕ 10W ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್‌ ಆಗಿದ್ದು, ಸದ್ಯಕ್ಕೆ ಚೀನಾದಲ್ಲಿ ಮಾತ್ರ ಇದನ್ನು ಲಾಂಚ್‌ ಮಾಡಲಾಗಿದೆ. ಅದಾಗ್ಯೂ ಇದು ಕೆಲವು ಅನಧಿಕೃತ ಚಾನೆಲ್‌ಗಳ ಮೂಲಕ ಇತರ ಪ್ರದೇಶಗಳಲ್ಲಿಯೂ ಲಭ್ಯ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಅಲಿ ಎಕ್ಸ್‌ಪ್ರೆಸ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಇದನ್ನು ನೀವು 25,000 ರೂ.ಗಳ ಬೆಲೆಗೆ ಖರೀದಿ ಮಾಡಬಹುದು.

ಶಿಯೋಮಿ ಈಗಾಗಲೇ ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಏರ್ ಪ್ಯೂರಿಫೈಯರ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳಂತಹ ಅನೇಕ ಡಿವೈಸ್‌ಗಳನ್ನು ಲಾಂಚ್‌ ಮಾಡಿದೆ. ಆದರೆ ಈಗ ಮಿಜಿಯಾ ಪ್ಲಸ್‌ನೊಂದಿಗೆ ಕಂಪನಿಯು ಈ ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಶಿಯೋಮಿ ಏಪ್ರಿಲ್ 19 ರಿಂದ 26 ರವರೆಗೆ ನಡೆದ ಕ್ರೌಡ್‌ಫಂಡಿಂಗ್ ಅಭಿಯಾನದಲ್ಲಿ ಈ ಡಿವೈಸ್‌ ಅನ್ನು ಲಾಂಚ್‌ ಮಾಡಿತ್ತು.

Best Mobiles in India

English summary
Xiaomi has launched a new toy gun called the Mijia Plus Watergun. It is currently launched in China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+