Home
ಸುದ್ದಿಜಾಲ

Xiaomi: ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ ಲಾಂಚ್‌! ಏರ್ ಕಂಡಕ್ಷನ್ ತಂತ್ರಜ್ಞಾನ.. ಬೆಲೆ ಎಷ್ಟು?

ಶಿಯೋಮಿ (Xiaomi) ಆಗಾಗ್ಗೆ ಭಿನ್ನ ಗ್ಯಾಜೆಟ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ವಿಶೇಷವಾದ ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ (Xiaomi Mijia Smart Audio Glasses) ಲಾಂಚ್‌ ಮಾಡಿದ್ದು, ಬಳಕೆದಾರರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಹೌದು, ಈಗಾಗಲೇ ಕೆಲವು ಸ್ಮಾರ್ಟ್‌ಗ್ಲಾಸ್‌ಗಳು (Smart Glasses) ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಬೆಳೆಯುತ್ತಿರುವ ಸ್ಮಾರ್ಟ್‌ಗ್ಲಾಸ್‌ ಮಾರುಕಟ್ಟೆಗೆ ಶಿಯೋಮಿಯ ಈ ಹೊಸ ಗ್ಲಾಸ್‌ ಸೇರ್ಪಡೆಗೊಂಡಿದೆ. ಈ ಗ್ಲಾಸ್‌ ಏರ್ ಕಂಡಕ್ಷನ್ ತಂತ್ರಜ್ಞಾನದೊಂದಿಗೆ ಲಭ್ಯ ಇದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ ಲಾಂಚ್‌! ಏರ್ ಕಂಡಕ್ಷನ್ ತಂತ್ರಜ್ಞಾನ..

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌: ಶಿಯೀಮಿ ಇದೀಗ ಚೀನಾದಲ್ಲಿ ತನ್ನ ಇತ್ತೀಚಿನ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ಗ್ಲಾಸ್ ಸ್ಟೈಲಿಶ್ ಲುಕ್‌ನೊಂದಿಗೆ ಆಡಿಯೊ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಈ ಮೂಲಕ ಈ ಗ್ಲಾಸ್‌ನಲ್ಲಿ ತಂತ್ರಜ್ಞಾನ ಮತ್ತು ಫ್ಯಾಶನ್‌ನ ವಿಶೇಷ ಸಂಯೋಜನೆಯನ್ನು ಕಾಣಬಹುದಾಗಿದೆ .

ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ ಗ್ರಾಹಕೀಯಗೊಳಿಸಬಹುದಾದ ವಿನ್ಯಾಸದೊಂದಿಗೆ ಆರು ಪರಸ್ಪರ ಬದಲಾಯಿಸಬಹುದಾದ ಫ್ರೇಮ್ ಆಯ್ಕೆಯೊಂದಿಗೆ ಲಭ್ಯ ಇದೆ. ಅಂದರೆ ನಿಮಗೆ ಅಗತ್ಯ ಎನಿಸುವ ರೀತಿಯಲ್ಲಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದು. ಅಲ್ಲದೆ ನಿಮ್ಮ ನಿರ್ದಿಷ್ಟ ದೃಷ್ಟಿ ಅವಶ್ಯಕತೆಗಳಿಗೆ ನೀವು ಕನ್ನಡಕವನ್ನು ಸರಿಹೊಂದಿಸಿಕೊಳ್ಳಬಹುದು.

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ ಲಾಂಚ್‌! ಏರ್ ಕಂಡಕ್ಷನ್ ತಂತ್ರಜ್ಞಾನ..

ಅದರಲ್ಲೂ ಈ ಗ್ಲಾಸ್‌ನ ಪ್ರಮುಖ ಫೀಚರ್ಸ್‌ ಎಂದರೆ ಆಡಿಯೋ. ಈ ಗ್ಲಾಸ್‌ ಬಳಕೆದಾರರು ಈ ಗ್ಲಾಸ್‌ ಬಳಕೆ ಮಾಡಿಕೊಂಡು ನೇರವಾಗಿ ಆಡಿಯೋ ಆಲಿಸಬಹುದಾಗಿದೆ. ಆಡಿಯೊವನ್ನು ತಲುಪಿಸಲು ಗಾಳಿಯ ವಹನ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೆ ಗ್ಲಾಸ್‌ಗಳ ಒಳಗೆ ಅಲ್ಟ್ರಾಸಾನಿಕ್ ಸ್ಪೀಕರ್‌ ಆಯ್ಕೆ ನೀಡಲಾಗಿದ್ದು, ಸ್ಪಷ್ಟ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಬಳಕೆದಾರರಿಗೆ ನೀಡುತ್ತವೆ. ಇದಕ್ಕೆಂದೇ ಫ್ಯೂಶನ್ ಸೌಂಡ್ ಕ್ಯಾವಿಟಿ ಸ್ಟ್ರಕ್ಚರ್ ಅಲ್ಗಾರಿದಮ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

ಇಷ್ಟೇ ಎಂದುಕೊಳ್ಳಬೇಡಿ ಕರೆ ಸಮಯದಲ್ಲಿ ಉತ್ತಮ ಸಂವಹನದ ಅನುಭವ ನೀಡಲು ಆಂಟಿ-ಸೌಂಡ್ ಲೀಕೇಜ್ ತಂತ್ರಜ್ಞಾನದ ಆಯ್ಕೆ ನೀಡಲಾಗಿದೆ. ಅಂದರೆ ಇದು ಕರೆ ಶಬ್ದ ಕಡಿತವನ್ನು ಕಡಿಮೆ ಮಾಡಲಿದ್ದು, ಸಂವಹನ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ. ಈ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ 37.7g ತೂಕ ಹೊಂದಿದ್ದು, ಹಗುರವಾಗಿದೆ. ಜೊತೆಗೆ ಸ್ವತಂತ್ರವಾಗಿ ಸರಿಹೊಂದಿಸಬಹುದಾದ ನೋಸ್ ಪ್ಯಾಡ್‌ಗಳು ಮತ್ತು ಡಿಟ್ಯಾಚೇಬಲ್ ಹಿಂಜ್‌ನಂತಹ ಪೀಚರ್ಸ್ ಆಯ್ಕೆ ಪಡೆದುಕೊಂಡಿವೆ.

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್‌ ಲಾಂಚ್‌! ಏರ್ ಕಂಡಕ್ಷನ್ ತಂತ್ರಜ್ಞಾನ..

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಬ್ಯಾಟರಿ ಸಾಮರ್ಥ್ಯ: ಈ ಸ್ಮಾರ್ಟ್‌ ಗ್ಲಾಸ್ ಉತ್ತಮ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 7 ಗಂಟೆಗಳ ಫೋನ್ ಕರೆಗಳು, 24 ಗಂಟೆಗಳ ಸಾಮಾನ್ಯ ಬಳಕೆ ಮತ್ತು 11 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ಅನ್ನು ಬೆಂಬಲಿಸುತ್ತದೆ. ಜೊತೆಗೆ ಈ ಗ್ಲಾಸ್‌ ಅನ್ನು ತೆಗೆದಾಗ ಆಟೋಮ್ಯಾಟಿಕ್‌ ಆಗಿ ಮ್ಯೂಸಿಕ್‌ ಸ್ಟಾಪ್‌ ಆಗಲಿದೆ.

ಹೆಚ್ಚುವರಿಯಾಗಿ, ಗೆಸ್ಚರ್ ಕಂಟ್ರೋಲ್‌ ಅನ್ನೂ ಸಹ ಬೆಂಬಲಿಸುತ್ತದೆ, ಮ್ಯೂಸಿಕ್‌ ಪ್ಲೇ ಮಾಡುವುದು/ವಿರಾಮಗೊಳಿಸುವುದು, ವಾಲ್ಯೂಮ್ ಅನ್ನು ಸರಿಹೊಂದಿಸುವುದು, ಟ್ರ್ಯಾಕ್‌ಗಳನ್ನು ಬದಲಾಯಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಈ ಗ್ಲಾಸ್ ಮೂಲಕ ಮಾಡಬಹುದಾಗಿದೆ. ಅಲ್ಲದೆ ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ಸಹ ಇದ್ದು, ಈ ಮೂಲಕ ಬಳಕೆದಾರರು ಗ್ಲಾಸ್ ನ ಜೊತೆಗೆ ಉತ್ತಮ ಸಂವಹನ ಮಾಡಬಹುದಾಗಿದೆ.

ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್ ಆಡಿಯೊ ಗ್ಲಾಸ್‌ ಮಾರ್ಚ್ 27 ರಿಂದ ಏಪ್ರಿಲ್ 10 ರವರೆಗೆ ಶಿಯೋಮಿ ಯೂಪಿನ್ ಮೂಲಕ ಚೀನಾದಲ್ಲಿ ಕ್ರೌಡ್‌ಫಂಡಿಂಗ್‌ಗೆ ಲಭ್ಯವಿರುತ್ತವೆ. ಕ್ರೌಡ್‌ಫಂಡಿಂಗ್ ಅವಧಿಗೆ ಬೆಲೆಯನ್ನು 459 ಯುವಾನ್‌ಗೆ (ಭಾರತದ ಬೆಲೆಯಲ್ಲಿ ಸುಮಾರು 5,385 ರೂ.ಗಳು $63) ನಿಗದಿಪಡಿಸಲಾಗಿದೆ. ಯಶಸ್ವಿ ಕ್ರೌಡ್‌ಫಂಡಿಂಗ್ ನಂತರ ಶಿಯೋಮಿ ತನ್ನ ಲಭ್ಯತೆಯ ವಿವರವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
Xiaomi has just launched the Xiaomi Mijia Smart Audio Glasses, which takes users to a different world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+