Home
ಸುದ್ದಿಜಾಲ

ಶಿಯೋಮಿಯಿಂದ ಸ್ಮಾರ್ಟ್ ಬ್ಲಾಂಕೆಟ್... ಚಳಿ ಓಡಿಸಲು ಅತ್ಯುತ್ತಮ ಆಯ್ಕೆ! ಬೆಲೆ ಎಷ್ಟು?

ಶಿಯೋಮಿ ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲದೆ ಇತರೆ ಸ್ಮಾರ್ಟ್‌ಡಿವೈಸ್‌ಗಳನ್ನೂ ಸಹ ಅನಾವರಣ ಮಾಡುತ್ತದೆ. ಅದರಂತೆ ಈಗ ಶಿಯೋಮಿ ಮಿಜಿಯಾ ಸ್ಮಾರ್ಟ್ ಎಲೆಕ್ಟ್ರಿಕ್ ಬ್ಲಾಂಕೆಟ್ (Xiaomi Xiaomi Mijia Smart Electric Blanket ) ಅನ್ನು ಅನಾವರಣ ಮಾಡಿದೆ. ಈ ಬ್ಲಾಂಕೆಟ್ ಡ್ಯುಯಲ್-ಝೋನ್ ಹೀಟಿಂಗ್ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ.

ಹೌದು, ಈಗಾಗಲೇ ಚಳಿ ಆರಂಭ ಆಗಿದ್ದು, ರೂಂ ಹೀಟರ್‌ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಅದರಲ್ಲೂ ನಿದ್ದೆ ಅತ್ಯಂತ ಮುಖ್ಯವಾಗಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಉತ್ತಮ ನಿದ್ದೆಗೆ ಸುತ್ತಮುತ್ತಲಿನ ಮತ್ತು ತಾಪಮಾನ ಹಾಗೂ ನೀವು ಮಲಗುವ ಸ್ಥಳ ಮುಖ್ಯ ಅಂಶವಾಗಿದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಶಿಯೋಮಿ ಈ ಬ್ಲಾಂಕೆಟ್‌ ಅನ್ನು ಅನಾವರಣ ಮಾಡಿದೆ. ಹಾಗಿದ್ರೆ, ಇದರ ಬೆಲೆ ಹಾಗೂ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿಯಿಂದ ಸ್ಮಾರ್ಟ್ ಬ್ಲಾಂಕೆಟ್... ಚಳಿ ಓಡಿಸಲು ಅತ್ಯುತ್ತಮ ಆಯ್ಕೆ!

ಶಿಯೋಮಿ ಮಿಜಿಯಾ ಸ್ಮಾರ್ಟ್ ಎಲೆಕ್ಟ್ರಿಕ್ ಬ್ಲಾಂಕೆಟ್: ತಂತ್ರಜ್ಞಾನದ ಅಭಿವೃದ್ಧಿ ಆದಂತೆ ಫ್ಯಾನ್, ಏರ್ ಕಂಡಿಷನರ್ ಮತ್ತು ಎಸಿಯಂತಹ ಡಿವೈಸ್‌ಗಳು ನಮ್ಮೆಲ್ಲರಿಗೂ ಅಗತ್ಯ ಡಿವೈಸ್‌ಗಳಾಗಿವೆ. ಈ ಮೂಲಕ ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅದರಂತೆ ಈಗ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಹೊಸ ಆವಿಷ್ಕಾರ ಮಾಡಿದೆ. ಅದುವೇ ಈ ಸ್ಮಾರ್ಟ್‌ ಬ್ಲಾಂಕೆಟ್.

ಯಾಕಾಗಿ ಈ ಬ್ಲಾಂಕೆಟ್‌?: ಪ್ರಪಂಚದ ಅನೇಕ ಭಾಗದಲ್ಲಿ ಚಳಿಗಾಲ ಶೂನ್ಯ ತಾಪಮಾನವನ್ನು ತಲುಪುತ್ತದೆ. ಈ ವೇಳೆ ಜನರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ರೂಂ ಹೀಟರ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಈಗ ಶಿಯೋಮಿ ಹೀಟಿಂಗ್ ಸ್ಮಾರ್ಟ್ ಬ್ಲಾಂಕೆಟ್ ಅನ್ನು ತಯಾರು ಮಾಡಿದ್ದು, ಇದು ಎಲ್ಲಾ ರೀತಿಯ ಇತರೆ ಡಿವೈಸ್‌ಗಳಿಗೆ ಗುಡ್‌ ಬೈ ಹೇಳುವಂತೆ ಮಾಡಿದೆ.

ಶಿಯೋಮಿಯಿಂದ ಸ್ಮಾರ್ಟ್ ಬ್ಲಾಂಕೆಟ್... ಚಳಿ ಓಡಿಸಲು ಅತ್ಯುತ್ತಮ ಆಯ್ಕೆ!

ಇದು 140W ಶಕ್ತಿಯಿಂದ ನಡೆಸಲ್ಪಡುವ ಈ ಬ್ಲಾಂಕೆಟ್‌ ಆಗಿದ್ದು, ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಎರಡು ವಲಯಗಳಲ್ಲಿ ತಾಪಮಾನವನ್ನು ಪ್ರತ್ಯೇಕವಾಗಿ ಹೊಂದಿಸಬಹುದಾಗಿದೆ. ಅಂದರೆ ಎರಡು ವಿಭಿನ್ನ ಆದ್ಯತೆಗಳನ್ನು ಹೊಂದಿರುವ ಜನರು ಸಹ ಬಳಸಲು ಸುಲಭವಾಗುವಂತೆ ವಿನ್ಯಾಸಗೊಳಿಸಿರುವುದು ಈ ಬ್ಲಾಂಕೆಟ್‌ನ ವಿಶೇಷತೆಯಾಗಿದೆ.

ಇನ್ನು ಈ ಎಲೆಕ್ಟ್ರಾನಿಕ್‌ ಬ್ಲಾಂಕೆಟ್‌ ಅನ್ನು ಹೊದ್ದು ಮಲಗಿದ್ರೆ ಏನು ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆ ಉತ್ತರ ಏನೆಂದರೆ ಯಾವುದೇ ಸಮಸ್ಯೆ ಇಲ್ಲ ಎಂದು ಶಿಯೋಮಿ ಹೇಳಿದೆ. ಈ ಬ್ಲಾಂಕೆಟ್‌ನಲ್ಲಿ ಪ್ರಮುಖವಾಗಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೂರು ಲೆಯರ್‌ಗಳ ನಿರೋಧನವನ್ನು ಹೊಂದಿದೆ. ಅಲ್ಲದೆ, ಹೆಚ್ಚಿನ ತಾಪಮಾನ, ಶಾರ್ಟ್ ಸರ್ಕ್ಯೂಟ್, ಓವರ್‌ಲೋಡ್, ಓವರ್‌ಕರೆಂಟ್, ಮಿಂಚಿನ ಹೊಡೆತ, ಚೈಲ್ಡ್ ಲಾಕ್ ರಕ್ಷಣೆಯಂತಹ ಸುರಕ್ಷತಾ ಫೀಚರ್ಸ್‌ ಆಯ್ಕೆಯನ್ನೂ ಸಹ ಇದರಲ್ಲಿ ನೀಡಲಾಗಿದೆ.

ಈ ಬ್ಲಾಂಕೆಟ್‌ ಆಟೋಮ್ಯಾಟಿಕ್‌ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಸುಮಾರು 15 ಗಂಟೆಗಳ ಕಾಲ ಕೆಲಸ ಮಾಡಲಿದೆ. ಮತ್ತೊಂದು ಫೀಚರ್ಸ್‌ ಏನೆಂದರೆ ಅದರ ತಾಪನ ತಂತಿಯನ್ನು 25000 ಬಾರಿ ಬಾಗುವ ಸಾಮರ್ಥ್ಯದೊಂದಿಗೆ ತಯಾರಿಸಲಾಗಿದೆ. ಈ ಕಾರಣದಿಂದಾಗಿ, ಈ ಹೊದಿಕೆಯನ್ನು ವಾಷಿಂಗ್ ಮೆಷಿನ್‌ನಲ್ಲೂ ಸಹ ತೊಳೆಯಬಹುದು.

ಇನ್ನು ಈ ಸ್ಮಾರ್ಟ್ ಬ್ಲಾಂಕೆಟ್ ಅನ್ನು ಶಿಯೋಮಿ ಸ್ಮಾರ್ಟ್ ಡಿವೈಸ್‌ಗಳಿಗೆ ಸಂಪರ್ಕಿಸಬಹುದಾಗಿದ್ದು, ಮಿಜಿಯಾ ಎಂದ ಆಪ್‌ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲ ವಾಯ್ಸ್ ಕಂಟ್ರೋಲ್ ಫೀಚರ್ ಕೂಡ ಇದರಲ್ಲಿದೆ. ಈ ಬ್ಲಾಂಕೆಟ್‌ ಆರು ಹಂತದ ತಾಪಮಾನ ಸೆಟ್ಟಿಂಗ್ ಅನ್ನು ಹೊಂದಿದೆ. ಇದರಲ್ಲಿ ಡ್ರೈ ಮೋಡ್, ಡಿಜಿಟಲ್ ಹೀಟ್‌ ಕಂಟ್ರೋಲ್‌ನಂತಹ ಫೀಚರ್ಸ್ ಮುಖ್ಯವಾಗಿವೆ.

ಶಿಯೋಮಿಯಿಂದ ಸ್ಮಾರ್ಟ್ ಬ್ಲಾಂಕೆಟ್... ಚಳಿ ಓಡಿಸಲು ಅತ್ಯುತ್ತಮ ಆಯ್ಕೆ!

ಶಿಯೋಮಿ ಮಿಜಿಯಾ ಸ್ಮಾರ್ಟ್ ಎಲೆಕ್ಟ್ರಿಕ್ ಬ್ಲಾಂಕೆಟ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್ ಬ್ಲಾಂಕೆಟ್‌ಗೆ $32 (ಭಾರತದಲ್ಲಿ ಅಂದಾಜು 2600ರೂ.) ಬೆಲೆ ನಿಗದಿ ಮಾಡಲಾಗಿದೆ. ಆದರೆ ನೀವು ಈ ಬ್ಲಾಂಕೆಟ್‌ ಅನ್ನು ಡಿಸೆಂಬರ್ 20 ರಿಂದ 27 ರವರೆಗೆ 27 ಡಾಲರ್‌ಗಳಿಗೆ (ಅಂದಾಜು 2200ರೂ.ಗಳು) ಬೆಲೆಗೆ ಖರೀದಿ ಮಾಡಬಹುದಾಗಿದೆ. ಸಂತಸದ ವಿಚಾರ ಏನೆಂದರೆ ಈ ಬ್ಲಾಂಕೆಟ್‌ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.

Best Mobiles in India

English summary
Xiaomi Mijia Smart Electric Blanket unveiled. This blanket is featured with dual-zone heating technology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+