ಶಿಯೋಮಿ MIUI 12 ಅಪ್‌ಡೇಟ್ ಲಾಂಚ್: ಏನೆಲ್ಲಾ ಹೊಸತನ ಇವೆ ಗೊತ್ತಾ?

|

ಚೀನಾ ಮೂಲದ ಟೆಕ್ ದೈತ್ಯ ಶಿಯೋಮಿ ಕಂಪನಿಯು ನೆನ್ನೆಯಷ್ಟೆ ಚೀನಾದಲ್ಲಿ ತನ್ನ ಹೊಸ 'ಮಿ 10 ಯೂತ್ ಎಡಿಷನ್' ಅನ್ನು ಘೋಷಿಸಿದೆ. ಹಾಗೆಯೆ ಹೊಸ ಆಂಡ್ರಾಯ್ಡ್ ಸ್ಕಿನ್ MIUI 12 ಅನ್ನು ಸಹ ಅನಾವರಣಗೊಳಿಸಿತು. ಹೊಸ MIUI 12 ಸಾಕಷ್ಟು ನೂತನ ಅಪ್‌ಡೇಟ್‌ಗಳೊನ್ನು ಒಳಗೊಂಡಿದ್ದು, ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಸುಗಮ ಕಾರ್ಯಕ್ಷಮತೆ, ಡಾರ್ಕ್‌ ಮೋಡ್‌ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒದಗಿಸಲಿದೆ.

MIUI 12 ಆಂಡ್ರಾಯ್ಡ್ ಸ್ಕಿನ್

ಹೌದು, ಶಿಯೋಮಿಯು ಹೊಸದಾಗಿ MIUI 12 ಆಂಡ್ರಾಯ್ಡ್ ಸ್ಕಿನ್ ಓಎಸ್‌ ಆವೃತ್ತಿಯನ್ನು ಅನಾವರಣ ಮಾಡಿದೆ. ಈ ಸ್ಕಿನ್ ಓಎಸ್‌ ಶಿಯೋಮಿಯ ಫೋನ್‌ಗಳ ಡಿಸ್‌ಪ್ಲೇ, ಸೆಟ್ಟಿಂಗ್ ಐಕಾನ್ಸ್‌ಗಳು ಮತ್ತು ಕಂಟೆಂಟ್ ಹಾಗೂ ವಾಲ್‌ಪೇಪರ್ ಡಿಸೈನ್ ಸೇರಿದಂತೆ ಹಲವು ಫೀಚರ್ಸ್‌ಗಳಿಗೆ ಹೊಸ ರೂಪ ನೀಡಲಿದೆ. ಹಾಗೆಯೇ ಮಲ್ಟಿಫಂಗ್ಷನ್ ಕಾರ್ಯಗಳಿಗೆ ಪೂರಕವಾಗಿ ಕೆಲಸ ಮಾಡಲಿದ್ದು, AI ಕರೆ, ಹೊಸ ಗೌಪ್ಯತೆ ಮತ್ತು ಭದ್ರತಾ ಫೀಚರ್ಗಳನ್ನು ನೀಡಲಿದೆ. ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಜೊತೆಗೆ ಈ ಸ್ಕಿನ್ ಓಎಸ್ ಪೂರಕವಾಗಿ ಕಾರ್ಯನಿರ್ವಹಿಸಲಿದೆ.

ಯಾವೆಲ್ಲಾ ಹೊಸ ಫೀಚರ್ಸ್‌ ಇರಲಿವೆ

ಯಾವೆಲ್ಲಾ ಹೊಸ ಫೀಚರ್ಸ್‌ ಇರಲಿವೆ

* ಹೊಸ ನ್ಯಾವಿಗೇಶನ್ ಹಾಗೂ ಗೆಸ್ಚರ್
* ಎಲ್ಲ ಆಪ್ಸ್‌ಗಳಿಗೆ ಡಾರ್ಕ್ ಮೋಡ್
* ಸಿಸ್ಟಮ್ ಲೆವಲ್‌ನಲ್ಲಿ ಬದಲಾವಣೆ
* ಬ್ಯಾಟರಿ ಕಾರ್ಯದಕ್ಷತೆಯನ್ನು
* ಹೆಚ್ಚಿನ ಅನಿಮೇಶನ್ ಆಯ್ಕೆಗಳು

ಲಭ್ಯತೆ ಯಾವಾಗ?

ಲಭ್ಯತೆ ಯಾವಾಗ?

ಶಿಯೋಮಿ ಸದ್ಯ ಚೀನಾದಲ್ಲಿ ಅನಾವರಣ ಮಾಡಿರುವ MIUI 12 ಸ್ಕಿನ್ ಓಎಸ್‌ ಅನ್ನು ಪ್ರಸ್ತುತ ಬೀಟಾ ಆವೃತ್ತಿಯ ಬಳಕೆದಾರರಿಗೆ ಲಭ್ಯ ಮಾಡಿದೆ. ಸದ್ಯ ಕೊರೊನಾ ವೈರಸ್‌ ಅಟ್ಟಹಾಸ ಇರುವುದರಿಂದ ಸಾಮಾನ್ಯ ಆವೃತ್ತಿಯ ಬಳಕೆದಾರರಿಗೆ MIUI 12 ಸ್ಕಿನ್ ಓಎಸ್‌ ಅನ್ನು ಇದೇ ಜೂನ್ ತಿಂಗಳಿನಲ್ಲಿ ಲಭ್ಯ ಮಾಡುವ ಸಾಧ್ಯತೆಗಳಿವೆ.

ಯಾವ ಫೋನ್‌ಗಳಲ್ಲಿ ಲಭ್ಯ

ಯಾವ ಫೋನ್‌ಗಳಲ್ಲಿ ಲಭ್ಯ

ಶಿಯೋಮಿ ತನ್ನ MIUI 12 ಸ್ಕಿನ್ ಓಎಸ್‌ ಅನ್ನು ಹೊಸ ಫೋನ್ ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯ ಮಾಡಲಿದೆ. ಒಟ್ಟು ಮೂರು ಬ್ಯಾಚ್‌ಗಳನ್ನಾಗಿ ವಿಂಗಡಿಸಿದ್ದು, ಹಂತ ಹಂತವಾಗಿ MIUI 12 ಓಎಸ್‌ ಅನ್ನು ಸೇರಿಸಲಿದೆ. ಫೋನಿನಲ್ಲಿರುವ ಆಂಡ್ರಾಯ್ಡ್ ಓಎಸ್ ಜೊತೆಗೆ MIUI 12 ಓಎಸ್‌ ಸಪೋರ್ಟ್ ಇರಲಿದೆ.

ಬ್ಯಾಚ್ 1

ಬ್ಯಾಚ್ 1

* ಶಿಯೋಮಿ ಮಿ 10 ಪ್ರೊ
* ಶಿಯೋಮಿ ಮಿ 10
* ಶಿಯೋಮಿ ಮಿ 10 ಯುವ ಆವೃತ್ತಿ
* ಶಿಯೋಮಿ ಮಿ 9 ಪ್ರೊ
* ರೆಡ್ಮಿ ಕೆ 30 ಪ್ರೊ
* ರೆಡ್ಮಿ ಕೆ 30
* ರೆಡ್ಮಿ ಕೆ 20 ಪ್ರೊ
* ರೆಡ್ಮಿ ಕೆ 20

ಬ್ಯಾಚ್ 2

ಬ್ಯಾಚ್ 2

* ಮಿ ಮಿಕ್ಸ್ 3
* ಶಿಯೋಮಿ ಮಿ 8 ಸರಣಿ
* ರೆಡ್ಮಿ ನೋಟ್ 8 ಪ್ರೊ
* ರೆಡ್ಮಿ ನೋಟ್ 7
* ರೆಡ್ಮಿ ನೋಟ್ 7 ಪ್ರೊ

ಬ್ಯಾಚ್ 3

ಬ್ಯಾಚ್ 3

* ಮಿ ಮಿಕ್ಸ್ 2
* ರೆಡ್ಮಿ 8 ಮತ್ತು 8A
* ರೆಡ್ಮಿ 7 ಮತ್ತು 7A
* ಮಿ CC 9
* ಮಿ CC 9 ಪ್ರೊ
* ಮಿ CC 9e

Best Mobiles in India

English summary
Xiaomi has also announced the list of devices that will be getting the new MIUI 12 update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X