ಭಾರತದಲ್ಲಿ ಶಿಯೋಮಿ MIUI 13 ಅಪ್‌ಡೇಟ್ ಲಾಂಚ್: ಏನಿರಲಿದೆ ಹೊಸತು?
ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ಶಿಯೋಮಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಆಂಡ್ರಾಯ್ಡ್ ಸ್ಕಿನ್ MIUI 13 ಅನ್ನು ಸಹ ಬಿಡುಗಡೆ ಮಾಡಿದೆ. ಹೊಸ MIUI 13 ಸಾಕಷ್ಟು ನೂತನ ಅಪ್‌ಡೇಟ್‌ಗಳನ್ನು ಒಳಗೊಂಡಿದ್ದು, ಆಯ್ದ ಕೆಲವು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಸುಗಮ ಕಾರ್ಯಕ್ಷಮತೆ, ಸಂಸ್ಕರಿಸಿದ ವಿನ್ಯಾಸ, ಬಹುಕಾರ್ಯಕ ಫೀಚರ್ಸ್, ವೇಗದ ಸಂಗ್ರಹಣೆ, ಅಧಿಕ ಹಿನ್ನೆಲೆ ಪ್ರಕ್ರಿಯೆ ದಕ್ಷತೆ, ಚುರುಕಾದ ಪ್ರಕ್ರಿಯೆ ಮತ್ತು ದೀರ್ಘ ಬ್ಯಾಟರಿ ಅವಧಿಯನ್ನು ತರುತ್ತದೆ.

ಹೌದು, ಶಿಯೋಮಿಯು ಹೊಸದಾಗಿ MIUI 13 ಸ್ಕಿನ್ ಓಎಸ್ ಆವೃತ್ತಿಯನ್ನು ಅನಾವರಣ ಮಾಡಿದೆ. ಈ ಸ್ಕಿನ್ ಓಎಸ್ ಆಯ್ದ ಶಿಯೋಮಿಯ ಫೋನ್‌ಗಳಲ್ಲಿ ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಯು ಆಪ್ಟಿಮೈಸ್ಡ್ ಫೈಲ್ ಸ್ಟೋರೇಜ್ ಸಿಸ್ಟಮ್, RAM ಆಪ್ಟಿಮೈಸೇಶನ್, ಪ್ರೊಸೆಸರ್ ಆದ್ಯತಾ ಆಪ್ಟಿಮೈಸೇಶನ್ (PPO), ಸ್ಮಾರ್ಟ್ ಬ್ಯಾಲೆನ್ಸ್, ಸೂಪರ್ ವಾಲ್‌ಪೇಪರ್‌ಗಳು ಮತ್ತು ಹೆಚ್ಚಿನವುಗಳಂತಹ ಹೊಸ ಸುಧಾರಣೆಗಳನ್ನು ತರುತ್ತದೆ.

ಯಾವ ಫೋನ್‌ಗಳಲ್ಲಿ MIUI 13 ಲಭ್ಯ?
ಶಿಯೋಮಿ ತನ್ನ MIUI 13 ಸ್ಕಿನ್ ಓಎಸ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್‌ಡೇಟ್ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಸಾಫ್ಟ್‌ವೇರ್ ನವೀಕರಣವನ್ನು ಕ್ರಮೇಣ ಇತರ ಸಾಧನಗಳಿಗೆ ಲಭ್ಯ ಮಾಡಲಿದೆ. ಸದ್ಯ ಸಂಸ್ಥೆಯು MIUI 13 ಬೆಂಬಲ ಪಡೆದ ಫೋನ್‌ಗಳ ಸಂಪೂರ್ಣ ಪಟ್ಟಿ ಅನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ, ಮೊದಲ ತರಂಗದಲ್ಲಿ, MIUI 13, 10 ಶಿಯೋಮಿ ಮತ್ತು ರೆಡ್ಮಿ ಫೋನ್‌ಗಳಿಗೆ ಲಭ್ಯವಿರುತ್ತದೆ. ಹಾಗಾದರೆ ಯಾವೆಲ್ಲಾ ಫೋನ್‌ಗಳಲ್ಲಿ MIUI 13 ಸಪೋರ್ಟ್ ಕಾಣಲಿವೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಯಾವೆಲ್ಲಾ ಹೊಸ ಫೀಚರ್ಸ್ ಇರಲಿವೆ
* ಸುಗಮ ಕಾರ್ಯಕ್ಷಮತೆ
* ಸಂಸ್ಕರಿಸಿದ ವಿನ್ಯಾಸ
* ಬಹುಕಾರ್ಯಕ ಫೀಚರ್ಸ್
* ವೇಗದ ಸಂಗ್ರಹಣೆ
* ಹಿನ್ನೆಲೆ ಪ್ರಕ್ರಿಯೆ ದಕ್ಷತೆ
* ಚುರುಕಾದ ಪ್ರಕ್ರಿಯೆ ಮತ್ತು ದೀರ್ಘ ಬ್ಯಾಟರಿ

MIUI 13 ಬೆಂಬಲ ಪಡೆದ ಫೋನ್‌ಗಳ ಲಿಸ್ಟ್:
* ಮಿ 11 ಅಲ್ಟ್ರಾ
* ಮಿ 11X ಪ್ರೊ
* ಶಿಯೋಮಿ 11T ಪ್ರೊ
* ಮಿ 11X
* ಶಿಯೋಮಿ 11 ಲೈಟ್ NE 5G
* ಮಿ 11 ಲೈಟ್
* ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್
* ರೆಡ್ಮಿ ನೋಟ್ 10 ಪ್ರೊ
* ರೆಡ್ಮಿ ನೋಟ್ 10
* ರೆಡ್ಮಿ 10 ಪ್ರೈಮ್
MIUI 13 ನೊಂದಿಗೆ ನಿಮ್ಮ ಫೋನ್ ಅಪ್‌ಡೇಟ್ ಮಾಡುವುದು ಹೇಗೆ?
ಇತ್ತೀಚಿನ ಹೊಸ ಸಾಫ್ಟ್‌ವೇರ್‌ಗೆ ನಿಮ್ ಫೋನ್ ಅಪ್‌ಗ್ರೇಡ್ ಮಾಡಲು, ಮೊದಲು ಫೋನಿನಲ್ಲಿ ಸೆಟ್ಟಿಂಗ್‌ಗಳ ಮೆನು > about > ಸಾಫ್ಟ್‌ವೇರ್ ನವೀಕರಣ (software update) > ಸಾಫ್ಟ್‌ವೇರ್ ನವೀಕರಣಕ್ಕಾಗಿ ಪರಿಶೀಲಿಸಿ > ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ಅಪ್‌ಡೇಟ್ ಮಾಡುವ ಮೊದಲು ನಿಮ್ಮ ಫೋನಿನ ಎಲ್ಲಾ ಡೇಟಾವನ್ನು ಬ್ಯಾಕ್‌ಅಪ್ ಮಾಡಲು ಮರೆಯದಿರಿ. ಹಾಗೆಯೇ ಅಪ್‌ಡೇಟ್ ಮಾಡಲು ಸ್ಥಿರ ವೈಫೈ ನೆಟ್‌ವರ್ಕ್ ಬಳಕೆ ಉತ್ತಮ. MIUI 12ರ ಕೆಲವು ಅಪ್‌ಡೇಟ್ ಫೀಚರ್ಸ್ ಆಯ್ಕೆಗಳು ಇಲ್ಲಿವೆ ನೋಡಿ. ಹೊಸ ನ್ಯಾವಿಗೇಶನ್ ಹಾಗೂ ಗೆಸ್ಚರ್, ಎಲ್ಲ ಆಪ್ಸ್‌ಗಳಿಗೆ ಡಾರ್ಕ್ ಮೋಡ್, ಸಿಸ್ಟಮ್ ಲೆವಲ್‌ನಲ್ಲಿ ಬದಲಾವಣೆ, ಬ್ಯಾಟರಿ ಕಾರ್ಯದಕ್ಷತೆ ಹಾಗೂ ಹೆಚ್ಚಿನ ಅನಿಮೇಶನ್ ಆಯ್ಕೆಗಳು.


Click it and Unblock the Notifications








