Subscribe to Gizbot

ಶಿಯೋಮಿಯ ಹೊಸ ಫೋನ್ ‘ರೆಡ್ ಮಿ ನೋಟ್ 4X’..!!

By: Precilla Dias

ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮತ್ತು ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್ ಫೋನ್ ಗಳನ್ನು ಗ್ರಾಹಕರ ಕೈಗೆ ನೀಡುವಲ್ಲಿ ಮುಂಚುಣಿಯಲ್ಲಿರುವ ಚೀನಾ ಮೂಲದ ಶಿಯೋಮಿ ಮತ್ತೊಂದು ಸ್ಮಾರ್ಟ್ ಫೋನ್ ಬಿಡುಗಡೆಗೆ ಸದ್ದಿಲ್ಲದೇ ಸಿದ್ಧತೆ ನಡೆಸಿದೆ, ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಅಲೆಯನ್ನು ಎಬ್ಬಿಸುವ ಕಾರ್ಯವನ್ನು ಮಾಡಲಿದೆ.

ಶಿಯೋಮಿಯ ಹೊಸ ಫೋನ್ ‘ರೆಡ್ ಮಿ ನೋಟ್ 4X’..!!

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್ ಮಿ 4A, ರೆಡ್ ಮಿ 4 ಮತ್ತು ರೆಡ್ ಮಿ 4 ನೋಟ್ ಸ್ಮಾರ್ಟ್ ಫೋನ್ ಗಳು ಸದ್ದು ಮಾಡುತ್ತಿವೆ. ಇದರ ಜೊತೆಗೆ ಶಿಯೋಮಿ ರೆಡ್ ಮಿ ನೋಟ್ 4X ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ವಿವಿಧ ಮೂಲಗಳಿಂದ ಲಭ್ಯವಾಗಿದೆ.

ಶಿಯೋಮಿಯ ಹೊಸ ಫೋನ್ ‘ರೆಡ್ ಮಿ ನೋಟ್ 4X’..!!

ರೆಡ್ ಮಿ ನೋಟ್ 4X ಸ್ಮಾರ್ಟ್ ಫೋನ್ ಹೈ ಎಂಡ್ ವರ್ಷನ್ ಆಗಿದೆ. ರೆಡ್ ಮಿ ನೋಟ್ 4Xನಲ್ಲಿ ನಾವು 4GB RAM ಕಾಣಬಹುದಾಗಿದೆ. ಇದರೊಂದಿಗೆ 64 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ವೇಗವಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 625 ಚಿಪ್ ಸೆಟ್ ಸಹ ಇದೆ.

ಈ ಕುರಿತು ಶಿಯೋಮಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡದಿದ್ದರೂ, ಅನೇಕ ಆನ್ ಲೈನ್ ಮಾಹಿತಿದಾರರು ಈ ಫೋನಿನ ಬೆಲೆಯನ್ನು, ವಿವಿಧ ಮಾದರಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ರೆಡ್ ಮಿ ನೋಟ್ 4X 3GB RAM/ 16 GB ROM ಆವೃತ್ತಿಯ ಬೆಲೆ $ 117, 3GB RAM/ 32 GB ROM ಆವೃತ್ತಿಯ ಬೆಲೆ $ 147 ಹಾಗೂ 4 GB RAM- 64 GB ROM ಆವೃತ್ತಿ ಬೆಲೆ $191 ಮತ್ತು $ 206 ಆಗಿರಲಿದೆ.

ರೆಡ್ ಮಿ ನೋಟ್ 4X ಸಹ ನೋಟ್ 4 ಮಾದಿರಿಯಲ್ಲೇ ವಿಶೇಷತೆಗಳನ್ನು ಹೊಂದಿರಲಿದೆ. ಆದರೆ ಬಣ್ಣಗಳಲ್ಲಿ ಮಾತ್ರವೇ ವ್ಯತ್ಯಾಸವಿರಲಿದೆ ಎನ್ನುವುದು ಸದ್ಯದ ಮಾಹಿತಿ. ಈ ಫೋನ್ ಲಾಂಚ್ ದಿನಾಂಕದ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇವೆ.

Read more about:
English summary
Xiaomi Redmi 4X launched in multiple variants
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot