ಭಾರತದಲ್ಲಿ ಶಿಯೋಮಿ OLED ವಿಷನ್ ಟಿವಿ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

|

ಶಿಯೋಮಿ ಸಂಸ್ಥೆಯು ಭಾರತದಲ್ಲಿ ನೂತನವಾಗಿ ತನ್ನ ಕೆಲವು ಸಾಧನಗಳನ್ನು ಪರಿಚಯಿಸಿದೆ. ಸಂಸ್ಥೆಯು ಶಿಯೋಮಿ ನೆಕ್ಸ್ಟ್‌ ಕಾರ್ಯಕ್ರಮದಲ್ಲಿ ಶಿಯೋಮಿ 12 ಪ್ರೊ 5G, ಶಿಯೋಮಿ ಪ್ಯಾಡ್‌ 5, ಶಿಯೋಮಿ ಸ್ಮಾರ್ಟ್‌ ಟಿವಿ 5A ಮತ್ತು ಶಿಯೋಮಿ OLED ವಿಷನ್ ಟಿವಿ ಸಾಧನಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಯು ಭಾರತದಲ್ಲಿ ಸಂಸ್ಥೆಯ ಮೊದಲ OLED ಮಾದರಿಯ ಟಿವಿ ಆಗಿದೆ. ಇದು IMAX ವರ್ಧಿತ, DTSX, ಡಾಲ್ಬಿ ವಿಷನ್ IQ, ಡಾಲ್ಬಿ ಅಟ್ಮೋಸ್ ಆಯ್ಕೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಶಿಯೋಮಿ OLED ವಿಷನ್ ಟಿವಿ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

ಶಿಯೋಮಿಯ OLED ವಿಷನ್ ಟಿವಿಯು 4K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 50 ಇಂಚಿನ OLED ಪ್ಯಾನೆಲ್ ಅನ್ನು ಹೊಂದಿದೆ. ಡಿಸ್‌ಪ್ಲೆಯು ಟ್ರೂ 10 ಬಿಟ್ ಫಿಲ್ಮ್‌ ಮೇಕರ್ ಮೋಡ್, 1.5 ಮಿಲಿಯನ್ 1 ಕಾಂಟ್ರಾಸ್ಟ್ ರೇಶಿಯೋ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ. ಇದು 8.29 ಮಿಲಿಯನ್ ಸ್ವಯಂ ಪ್ರಕಾಶಿಸುವ ಪಿಕ್ಸೆಲ್‌ಗಳನ್ನು ಹೊಂದಿದ್ದು ಅದು ತಮ್ಮದೇ ಆದ ಬಣ್ಣಗಳನ್ನು ಉತ್ಪಾದಿಸುತ್ತದೆ. ಹಾಗೆಯೇ ಈ ಟಿವಿಯು 97% ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ ಬೆಜೆಲ್ ಲೆಸ್ ವಿನ್ಯಾಸವನ್ನು ಹೊಂದಿದೆ.

ಸಂಸ್ಥಯ OLED ವಿಷನ್ ಟಿವಿ 1.48L ಸ್ಪೀಕರ್ ಕ್ಯಾವಿಟಿ ಮತ್ತು 4 ಸಕ್ರಿಯ ಮತ್ತು 4 ನಿಷ್ಕ್ರಿಯ ಆಡಿಯೋ ಸ್ಪೀಕರ್ ಡ್ರೈವರ್‌ಗಳನ್ನು ಹೊಂದಿದೆ. ಇದರೊಂದಿಗೆ ಈ ಟಿವಿಯು ಡಾಲ್ಬಿ ಅಟ್ಮೋಸ್ (Dolby Atmos) ಮತ್ತು DTX ಆಡಿಯೊ ಸಪೋರ್ಟ್‌ ಅನ್ನು ಒಳಗೊಂಡಿದೆ. ಇನ್ನು ಈ ಟಿವಿಯ ಸ್ಪೀಕರ್‌ಗಳು 30W ನ ವಾಯಿಸ್‌ ಉತ್ಪಾದನೆಯನ್ನು ನೀಡುತ್ತದೆ. ಹಾಗೆಯೇ ಈ ಟಿವಿಯು 3GB RAM ಮತ್ತು 32GB ಆಂತರಿಕ ಸಂಗ್ರಹಣೆಯ ಆಯ್ಕೆ ಅನ್ನು ಪಡೆದಿದೆ. ಇನ್ನು ಕನೆಕ್ಟಿವಿ ಆಯ್ಕೆಗಳಲ್ಲಿ ವೈ ಫೈ 6, 3 HDMI 2.1 ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಆಪ್ಟಿಕಲ್ ಪೋರ್ಟ್ ಸೇರಿವೆ.

ಭಾರತದಲ್ಲಿ ಶಿಯೋಮಿ OLED ವಿಷನ್ ಟಿವಿ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

ಶಿಯೋಮಿ OLED ವಿಷನ್ ಟಿವಿ ಇದೇ ಮೇ 19 ರಿಂದ ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿ ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ OLED ಟಿವಿ ಭಾರತದಲ್ಲಿ 89,999 ರೂ. ಗಳಲ್ಲಿ ಲಭ್ಯವಿರುತ್ತದೆ. ಕಂಪನಿಯು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 6,000 ರೂ ರಿಯಾಯಿತಿಯನ್ನು ನೀಡುತ್ತಿದೆ. ಈ ಕೊಡುಗೆಯೊಂದಿಗೆ ಗ್ರಾಹಕರು ಟಿವಿಯನ್ನು 83,999ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಶಿಯೋಮಿ ಸ್ಮಾರ್ಟ್ ಟಿವಿ 5A ಫೀಚರ್ಸ್‌
ಶಿಯೋಮಿ ಸ್ಮಾರ್ಟ್ ಟಿವಿ 5A ಸಾಧನವು ಬೆಜೆಲ್-ಲೆಸ್ ಮೆಟಾಲಿಕ್ ವಿನ್ಯಾಸದೊಂದಿಗೆ ಪೂರ್ಣ HD ಡಿಸ್ಪ್ಲೇ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ ಈ ಟಿವಿಯು ಮೂರು ವೇರಿಯಂಟ್‌ಗಳ ಆಯ್ಕೆ ಪಡೆದಿದೆ. ಅವು ಕ್ರಮವಾಗಿ 32-ಇಂಚಿನ, 40-ಇಂಚಿನ ಮತ್ತು 43-ಇಂಚಿನ. ಹಾಗೆಯೇ ಇದು ಕಾರ್ಟೆಕ್ಸ್ A55 ಸಿಸ್ಟಮ್-ಆನ್-ಚಿಪ್‌ನಿಂದ 1.5GB RAM ಅನ್ನು ಹೊಂದಿದೆ, ಇದು 50% ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.

ಆಡಿಯೊಗಾಗಿ, ಇದು dtsX ತಂತ್ರಜ್ಞಾನ ಮತ್ತು ಡಾಲ್ಬಿ ಆಡಿಯೊಗೆ ಬೆಂಬಲದೊಂದಿಗೆ 24W ಸ್ಪೀಕರ್ ಅನ್ನು ಹೊಂದಿದೆ. ಇದು ಶಿಯೋಮಿಯ ಪ್ಯಾಚ್‌ವಾಲ್ ಸ್ಕಿನ್‌ನೊಂದಿಗೆ ಗೂಗಲ್‌ನ ಆಂಡ್ರಾಯ್ಡ್ ಟಿವಿ 11 ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ. ಈ ಪ್ಯಾಚ್‌ವಾಲ್ ಸ್ಕಿನ್ IMDb ಏಕೀಕರಣ, ಸಾರ್ವತ್ರಿಕ ಹುಡುಕಾಟ ವೈಶಿಷ್ಟ್ಯ, ಮಕ್ಕಳ ಮೋಡ್ ಮತ್ತು 300 ಕ್ಕೂ ಹೆಚ್ಚು ಲೈವ್ ಚಾನಲ್‌ಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಮತ್ತು ಸಂಪರ್ಕಕ್ಕಾಗಿ ಇದು 5GHz ಮತ್ತು 2.4GHz ಚಾನಲ್‌ಗಳು ಮತ್ತು ಬ್ಲೂಟೂತ್ 5.0 ಗೆ ಬೆಂಬಲದೊಂದಿಗೆ ಡ್ಯುಯಲ್ ಬ್ಯಾಂಡ್ ವೈಫೈ ಅನ್ನು ಹೊಂದಿದೆ.

Best Mobiles in India

English summary
Xiaomi OLED Vision TV with Dolby Atmos Launched in India: Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X