ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಬೇಕೆ?; ಈ ಫೋನ್‌ಗಳಿಗಿದೆ ಭಾರೀ ಡಿಸ್ಕೌಂಟ್!
ಉತ್ತಮ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಬಹುಪಾಲು ಮಂದಿಯ ಕನಸು.ಆದರೆ, ಹಣದ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಇದು ಸಾಧ್ಯವಾಗುವುದಿಲ್ಲ. ವಿಷಯ ಏನೆಂದರೆ ಈ ಅತ್ಯುತ್ತಮವಾದ ಈ ಸ್ಮಾರ್ಟ್‌ಫೋನ್‌ಗಳಿಗೆ ಬೆಲೆ ಇಳಿಕೆಯಾಗಿದ್ದು, ಈ ಮೂಲಕ ನೀವು ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಬಹುದಾಗಿದೆ.
ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ಸಾಕಷ್ಟು ಫೋನ್‌ಗಳು ಸದ್ದು ಮಾಡುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಒನ್‌ಪ್ಲಸ್, ಶಿಯೋಮಿ,ಮೊಟೊರೊಲಾ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಅಫರ್ ನೀಡಲಾಗಿದೆ. ಈ ಎಲ್ಲಾ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ಅತ್ಯುತ್ತಮ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ದೀರ್ಘ ಬಾಳಿಕೆ ಬರುತ್ತವೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯೋಣ.

ಒನ್‌ಪ್ಲಸ್ 10R: ಒನ್‌ಪ್ಲಸ್ 10R ಫೋನ್ ಇತ್ತೀಚೆಗೆ ಹೆಚ್ಚು ಮಾರಾಟ ಆಗುತ್ತಿರುವ ಸ್ಮಾರ್ಟ್‌ಫೋನ್ ಆಗಿದ್ದು, ಇತ್ತೀಚೆಗೆ ಎರಡನೇ ಬಾರಿಗೆ ಇದರ ಬೆಲೆಯಲ್ಲಿ ಕಡಿತವಾಗಿದೆ. ಅಂದರೆ ಕಳೆದ ವರ್ಷ 4,000ರೂ. ಗಳ ಬೆಲೆ ಇಳಿಕೆ ಕಂಡಿದ್ದ ಈ ಫೋನ್ ಇದೀಗ ಮತ್ತೆ 3,000ರೂ. ಗಳ ಬೆಲೆ ಇಳಿಕೆಯೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 8GB+128GB (80W), 12GB+256GB (80W) ಮತ್ತು 12GB+256GB (150W) ನ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, 34,999ರೂ. ಗಳ ಆರಂಭಿಕ ಬೆಲೆ ಹೊಂದಿದೆ.
ಶಿಯೋಮಿ 12 ಪ್ರೊ: ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಫೋನ್ ಇದಾಗಿದೆ. ಈ ಫೋನ್ ಮೇಲೆ ಬರೋಬ್ಬರಿ 10,000ರೂ. ಗಳ ಬೆಲೆ ಇಳಿಕೆಯಾಗಿದೆ. ಈ ಮೂಲಕ ನ ನೀವು 8GB ವೇರಿಯಂಟ್ ಫೋನ್ ಅನ್ನು 52,999ರೂ. ಗಳಿಗೆ ಹಾಗೂ 12GB ವೇರಿಯಂಟ್ ಫೋನ್ ಅನ್ನು 54,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 1 ಪ್ರೊಸೆಸರ್ ಬಲ ಹೊಂದಿದೆ.

ಶಿಯೋಮಿ 11 ಲೈಟ್ NE 5G: ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 2021 ರಲ್ಲಿ ಲಾಂಚ್ ಆಗಿದ್ದು, 3,000ರೂ. ಗಳ ಬೆಲೆ ಕಡಿತವನ್ನು ಹೊಂದಿದೆ. ಈ ಮೂಲಕ ಗ್ರಾಹಕರು 6GB ವೇರಿಯಂಟ್ ಫೋನ್ ಅನ್ನು 26,999ರೂ. ಗಳಿಗೆ ಹಾಗೂ 8GB ವೇರಿಯಂಟ್ ಫೋನ್ ಅನ್ನು 28,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.
ಮೊಟೊ ಎಡ್ಜ್ 30: ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್ 3,000ರೂ. ಗಳ ಬೆಲೆ ಕಡಿತ ಹೊಂದಿದ್ದು, ಈ ಮೂಲಕ 6GB ವೇರಿಯಂಟ್‌ಗೆ 24,999ರೂ. ಗಳು ಹಾಗೂ 8GB ವೇರಿಯಂಟ್‌ಗೆ 26,999ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778+ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 12 ಅನ್ನು ರನ್ ಮಾಡುತ್ತದೆ.
ಮೊಟೊ G72: ಮಾರುಕಟ್ಟೆಯಲ್ಲಿ ಮಗದೊಂದು ಜನಪ್ರಿಯ ಸ್ಮಾರ್ಟ್‌ಫೋನ್ ಆಗಿರುವ ಮೊಟೊ G72 ಫೋನ್ ಸಹ 3,000ರೂ. ಗಳ ಡಿಸ್ಕೌಂಟ್ ಪಡೆದಿದ್ದು, ಈ ಮೂಲಕ 15,999ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

ಇಲ್ಲಿ ತಿಳಿಸಲಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಈ ಬೆಲೆ ಇಳಿಕೆ ಆಫರ್‌ನೊಂದಿಗೆ ಇನ್ನೂ ಹೆಚ್ಚಿನ ಆಫರ್ ಅನ್ನು ಸಹ ಪಡೆದುಕೊಳ್ಳಬಹುದು. ಅಂದರೆ ಗ್ರಾಹಕರು ಅಗತ್ಯ ಬ್ಯಾಂಕ್ ಕಾರ್ಡ್‌ಗಳು ಹಾಗೂ ವಿನಿಮಯ ಆಫರ್ ಮೂಲಕ ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ಆಫರ್ ಬೆಲೆಯಲ್ಲಿ ಈ ಹೊಸ ಫೋನ್‌ಗಳು ಲಭ್ಯ.


Click it and Unblock the Notifications








