ಭಾರತದಲ್ಲಿ ಮೊದಲ ಮಿ ಎಕ್ಸ್‌ಪಿರಿಯನ್ಸ್ ಸ್ಟೋರ್ ಆರಂಭಿಸುತ್ತಿರುವ ಶಿಯೋಮಿ
ಬಜೆಟ್ ಫೋನ್ ಗಳ ಲೋಕದಲ್ಲಿ ಹೊಸ ಅಧ್ಯಾಯವನ್ನೇ ಬರೆದಿರುವ ಚೀನಾ ಮೂಲದ ಶಿಯೋಮಿ ಮೊಬೈಲ್ ಸಂಸ್ಥೆ, ಚೆನ್ನೈಯಲ್ಲಿ ಭಾರತದಲ್ಲಿ ಮೊದಲ ಮಿ ಹೋಂ ಎಕ್ಸ್ಪೀರಿಯೆನ್ಸ್ ಮಳಿಗೆಯನ್ನು ಆರಂಭಿಸಿದೆ. ಇದು ಶಿಯೋಮಿಯ 25ನೇ ಮಳಿಗೆಯಾಗಿದೆ. ಭಾರತದಲ್ಲಿ ಇನ್ನು ಬಿಡುಗಡೆಯಾಗಲಿರುವ ಶಿಯೋಮಿ ಸಂಸ್ಥೆಯ ಐ.ಒ.ಟಿ ಉತ್ಪನ್ನಗಳನ್ನು (ಇಂಟರ್ನೆಟ್ ಆಫ್ ಪ್ರಾಡಕ್ಟ್ಸ್/ಥಿಂಗ್ಸ್ ತಂತ್ರಜ್ಞಾನ) ಈ ಮಳಿಗೆಯಲ್ಲಿ ಪ್ರದರ್ಶಿಸುತ್ತದೆ. ಜೊತೆಗೆ ಶಿಯೋಮಿ ಕಂಪೆನಿಯ ಎಲ್ಲಾ ತರಹದ ಸ್ಮಾರ್ಟ್ ಫೋನ್ ಗಳು, ವಿಆರ್(ವೆರ್ಚುವಲ್ ರಿಯಾಲಿಟಿ) ಹೆಡ್ ಸೆಟ್ , ಮಿ ಟಿವಿ 4 ಗಳು ಈ ಮಳಿಗೆಯಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಮಿ ಎಕ್ಸ್ಪೀರಿಯೆನ್ಸ್ ಮಳಿಗೆ ಸ್ಥಾಪನೆಯ ಮುಖ್ಯ ಉದ್ದೇಶವೆಂದರೆ, ಜಗತ್ತಿನೆಲ್ಲೆಡೆ ಬಿಡುಗಡೆಯಾಗುವ ಶಿಯೋಮಿ ಉತ್ಪನ್ನಗಳನ್ನು ಬಲು ಬೇಗನೆ ಜನರ ಬಳಿ ತಲುಪಿಸುವುದು ಮತ್ತು ಗ್ರಾಹಕರಿಗೆ ಇನ್ನಷ್ಟು ಹೊಸತನವಾದ ಅನುಭವನ್ನು ನೀಡುವುದು ಆಗಿದೆ. ಹಾಗೂ ಈ ಮಳಿಗೆಯಲ್ಲಿ ಗ್ರಾಹಕರು ಶಿಯೋಮಿ ಉತ್ಪನ್ನಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ನೀಡಬಹುದು.
ಶಿಯೋಮಿ ಮಿ ಎಕ್ಸ್ಪೀರಿಯೆನ್ಸ್ ಮಳಿಗೆಯಲ್ಲಿ ಭಾರತದ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಶಿಯೋಮಿ ಸಂಸ್ಥೆಯ ಐ.ಒ.ಟಿ ಉತ್ಪನ್ನಗಳಾದ ಮಿ ಕ್ಯಾಟೆಲ್, ಮಿ ರೈಸ್ ಕುಕ್ಕರ್, ಮಿ ಬೈಕ್, ಮಿ ನೈನ್ ಬೂಟ್, ಮತ್ತು ಮಿ ವೈಯಿಂಗ್ ಸ್ಕೇಲ್ನಂತಹ ಜನಸ್ನೇಹಿ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.
ಓದಿರಿ: ಬೆಂಗಳೂರಿಗರೇ ನಿಮ್ಮ ಮನೆಯನ್ನು ಆಧಾರ್ ಮಾದರಿಯಲ್ಲಿ ಕಡ್ಡಾಯವಾಗಿ ಲಿಂಕ್ ಮಾಡಬೇಕು: ಯಾಕೆ
ಇದರೊಂದಿಗೆ ಮಿ ಬಾಡಿ ಫ್ಯಾಟ್ ಸ್ಕೇಲ್ (ದೇಹದಲ್ಲಿರುವ ಕೊಬ್ಬನ್ನು ಅಳೆಯುವ ಮಾಪನ) ವೂ ಈ ಮಳಿಗೆಯಲ್ಲಿ ನೀವು ಕಾಣಬಹುದು. ದಿನನಿತ್ಯ ಜೀವನಕ್ಕೆ ಬೇಕಾಗುವ ಅತ್ಯುನ್ನತ ತಂತ್ರಜ್ಞಾನ ಆಧಾರಿತ ಗ್ರಹಪಯೋಗಿ ಉತ್ಪನ್ನಗಳು ಈ ಮಳಿಗೆಯಲ್ಲಿ ಲಭ್ಯವಿದೆ. ಹೊಸದಾಗಿ ಬಿಡುಗಡೆಯಾದ ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೊ ಮೊಬೈಲ್ ಗಳು ಈ ಮಳಿಗೆಯಲ್ಲಿ ಸಿಗಲಿದೆ.
ಐ.ಒ.ಟಿ ಉತ್ಪನ್ನಗಳನ್ನು (ಇಂಟರ್ನೆಟ್ ಆಫ್ ಪ್ರಾಡಕ್ಟ್ಸ್/ಥಿಂಗ್ಸ್ ತಂತ್ರಜ್ಞಾನ) ಭಾರತೀಯ ಮಾರುಕಟ್ಟೆಗೆ ಪರಿಚಯಿಸುವುದು ಮತ್ತು ಐ.ಒ.ಟಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುದೇ ಮಿ ಹೋಮ್ ಎಕ್ಸ್ಪೀರಿಯೆನ್ಸ್ ಮಳಿಗೆಯ ಮೂಲ ಧ್ಯೇಯವಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿಯ ಐ.ಒ.ಟಿ ಉತ್ಪನ್ನಗಳು ಹೊಸ ಛಾಪನ್ನು ಮೂಡಿಸಿದರೆ ನಾವು ಅಚ್ಚರಿಪಡಬೇಕಾಗಿಲ್ಲ.

ಈವರೆಗೆ ಭಾರತದಲ್ಲಿ 24 ಶಿಯೋಮಿಯ ಅಧಿಕೃತ ಮಳಿಗೆಗಳನ್ನು ತೆರೆದಿದ್ದು, ಇದು 25ನೇ ಮತ್ತು ಭಾರತ ಮೊದಲ ಮಿ ಹೋಂ ಎಕ್ಸ್ಪೀರಿಯೆನ್ಸ್ ಮಳಿಗೆಯಾಗಿದೆ. ಈ ವರ್ಷ ಭಾರತದಲ್ಲಿ 100 ಶಿಯೋಮಿ ಅಧಿಕೃತ ಮಳಿಗೆಗಳನ್ನು ತೆರೆಯುವ ಯೋಜನೆ ಇದೆ ಎಂದು ಶಿಯೋಮಿಯ ಭಾರತದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮನು ಜೈನ್ ಹೇಳಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಮೊದಲ ಮಿ ಅಧಿಕೃತ ಮಳಿಗೆ ಭಾರತದಲ್ಲಿ ಆರಂಭವಾಗಿದ್ದು, ಮತ್ತು ಈಗ ಬೆಂಗಳೂರು, ದೆಹಲಿ, ಪುಣೆ ಹೈದರಾಬಾದ್ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಲ್ಲಿ ತನ್ನ ಮಳಿಗೆಗಳನ್ನು ವಿಸ್ತರಿಸಿದೆ.


Click it and Unblock the Notifications








