ಶಿಯೋಮಿಯ ಈ ಟ್ಯಾಬ್ ಬೆಲೆಯಲ್ಲಿ ಸಖತ್ ಇಳಿಕೆ!..ಎಷ್ಟು ಉಳಿತಾಯ ಗೊತ್ತಾ?
ಟೆಕ್ ಮಾರುಕಟ್ಟೆಯಲ್ಲಿ ಶಿಯೋಮಿ ಸಂಸ್ಥೆಯು ಹಲವು ಭಿನ್ನ ಸ್ಮಾರ್ಟ್ ಉತ್ಪನ್ನಗಳ ಮೂಲಕ ಸದ್ದು ಮಾಡಿದೆ. ಶಿಯೋಮಿ ಸಂಸ್ಥೆಯು ಫೋನ್‌ಗಳ ಜೊತೆಗೆ ಟ್ಯಾಬ್ ಡಿವೈಸ್‌ಗಳು ಗಮನ ಸೆಳೆದಿವೆ. ಆ ಪೈಕಿ ಶಿಯೋಮಿ ಪ್ಯಾಡ್ 6 ಡಿವೈಸ್ ಬೆಲೆ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಆಕರ್ಷಕ ಎನಿಸಿಕೊಂಡಿದೆ. ಇದೀಗ ಭರ್ಜರಿ ಬೆಲೆ ಇಳಿಕೆ ಪಡೆದಿದ್ದು, ಮತ್ತೆ ಗಮನ ಸೆಳೆದಿದೆ.
ಹೌದು, ಶಿಯೋಮಿ ಸಂಸ್ಥೆಯ ಶಿಯೋಮಿ ಪ್ಯಾಡ್ 6 ಡಿವೈಸ್ ಬೆಲೆಯಲ್ಲಿ 2,000ರೂ. ಗಳ ಭರ್ಜರಿ ಇಳಿಕೆ ಮಾಡಿದೆ. ಈ ಟ್ಯಾಬ್ ಎರಡು ವೇರಿಯಂಟ್ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ 6GB + 128GB ಹಾಗೂ 8GB + 256GB ಆಗಿವೆ. ಈ ಎರಡು ವೇರಿಯಂಟ್ ಬೆಲೆಯಲ್ಲಿಯೂ ಇದೀಗ ದರ ಕಡಿತ ಆಗಿದೆ.

ಅಂದಹಾಗೆ ಈ ಡಿವೈಸ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ ಈ ಟ್ಯಾಬ್ಲೆಟ್ ಫುಲ್ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟ್ಯಾಬ್ಲೆಟ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಶಿಯೋಮಿ ಪ್ಯಾಡ್ 6 ಫೀಚರ್ಸ್ ಹೀಗಿವೆ
ಶಿಯೋಮಿ ಪ್ಯಾಡ್ 6 11 ಇಂಚಿನ 2.8K IPS LCD ಸ್ಕ್ರೀನ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1,800x2,880 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 550 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್, 309ppi ಪಿಕ್ಸೆಲ್ ಸಾಂದ್ರತೆ, ಡಾಲ್ಬಿ ವಿಷನ್ ಬೆಂಬಲ ಮತ್ತು 144Hz ವರೆಗೆ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ 30Hz, 48Hz, 50Hz, 60Hz, 90Hz, 120Hz, ಮತ್ತು 144Hz ಏಳು ರಿಫ್ರೆಶ್ ರೇಟ್‌ಗಳನ್ನು ಹೊಂದಿದೆ.

ಶಿಯೋಮಿ ಪ್ಯಾಡ್ 6 ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್ 13-ಆಧಾರಿತ MIUI 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಅನ್ನು ಪಡೆದಿದೆ.
ಇನ್ನು ಟ್ಯಾಬ್ಲೆಟ್ ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದು 105-ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡಲಿದೆ.
ಶಿಯೋಮಿ ಪ್ಯಾಡ್ 6 ಡಿವೈಸ್ 8,840mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಜೊತೆಗೆ 33W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲಿಸಲಿದ್ದು, 100 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎನ್ನಲಾಗಿದೆ.
ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi 6, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿವೆ. ಇದು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್ ಮತ್ತು ಹಾಲ್ ಸೆನ್ಸಾರ್‌ನಂತಹ ಸೆನ್ಸಾರ್‌ಗಳನ್ನು ಇದು ಒಳಗೊಂಡಿದೆ.

ಶಿಯೋಮಿ ಪ್ಯಾಡ್ 6 ಕಲರ್ ಮತ್ತು ಮೆಮೊರಿ
ಭಾರತದಲ್ಲಿ ಶಿಯೋಮಿ ಪ್ಯಾಡ್ 6 ಡಿವೈಸ್ 6GB + 128 GB RAM ಸ್ಟೋರೇಜ್ ಆಯ್ಕೆ ಹಾಗೂ 8GB + 256 GB ಸ್ಟೋರೇಜ್ ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇದು ಗ್ರ್ಯಾಫೈಟ್ ಗ್ರೇ ಮತ್ತು ಮಿಸ್ಟ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ.


Click it and Unblock the Notifications








