ಶಿಯೋಮಿ ಪ್ಯಾಡ್ 6s ಪ್ರೊ ಟ್ಯಾಬ್ ಲಾಂಚ್!..ಇದರ ಫೀಚರ್ಸ್‌ಗೆ ಗ್ರಾಹಕರು ಫಿದಾ!
ಶಿಯೋಮಿ ಕಂಪೆನಿಯು ಶಿಯೋಮಿ 14 ಅಲ್ಟ್ರಾ ಫೋನ್ ಬಿಡುಗಡೆಯ ಜೊತೆಗೆ ಶಿಯೋಮಿ ಪ್ಯಾಡ್ 6s ಪ್ರೊ (Xiaomi Pad 6S Pro) ಟ್ಯಾಬ್ಲೆಟ್ ಅನ್ನು ಕೂಡ ಬಿಡುಗಡೆ ಮಾಡಿದೆ. ಅಂದಹಾಗೆ ಈ ನೂತನ ಟ್ಯಾಬ್ಲೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಪಡೆದಿದ್ದು, ಡಾಲ್ಬಿ ಅಟ್ಮೋಸ್ ಆಡಿಯೋ ಜೊತೆಗೆ 6 ಸ್ಪೀಕರ್ ಸೆಟ್‌ಅಪ್ ಸಹ ಪಡೆದಿದೆ.
ಹೌದು, ಶಿಯೋಮಿ ಸಂಸ್ಥೆಯು ಶಿಯೋಮಿ ಪ್ಯಾಡ್ 6s ಪ್ರೊ ಟ್ಯಾಬ್ಲೆಟ್ ಅನ್ನು ಚೀನಾದಲ್ಲಿ ಬಿಡುಗಡೆಗೆ ಮಾಡಿದೆ. ಈ ಟ್ಯಾಬ್ ಬರೋಬ್ಬರಿ 10000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ.

ಅಲ್ಲದೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆ ಸಹ ಪಡೆದುಕೊಂಡಿದೆ. ಹಾಗೆಯೇ ಈ ಟ್ಯಾಬ್ ಮೂರು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಗ್ರಾಹಕರು ಇದನ್ನು ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೆ ಶಿಯೋಮಿ ಪ್ಯಾಡ್ 6 ಪ್ರೊ ಟ್ಯಾಬ್ಲೆಟ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಶಿಯೋಮಿ ಪ್ಯಾಡ್ 6s ಪ್ರೊ ಫೀಚರ್ಸ್
ಶಿಯೋಮಿ ಪ್ಯಾಡ್ 6s ಪ್ರೊ ಟ್ಯಾಬ್ಲೆಟ್ 12.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 2000 x 3200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇಯು 304 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದ್ದು, 2050 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಲ್ಲಿ ಪಡೆದಿದೆ.

ಇದರೊಂದಿಗೆ 1400:1 ಕಾಂಟ್ರಾಸ್ಟ್ ಅನುಪಾತ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಸಪೋರ್ಟ್ ಇದೆ. ಶಿಯೋಮಿ ಪ್ಯಾಡ್ 6 ಪ್ರೊ 144 Hz ರಿಫ್ರೆಶ್ ರೇಟ್ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನಲ್ಲಿರಲಿ ಇದೆ.
ಹಾಗೆಯೇ ನೂತನ ಶಿಯೋಮಿ ಪ್ಯಾಡ್ 6s ಪ್ರೊ ಟ್ಯಾಬ್ಲೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ v13 ಸಪೋರ್ಟ್‌ನಲ್ಲಿ ರನ್ ಆಗಲಿದೆ. ಹಾಗೆಯೇ ಇದು ಮೂರು ಸ್ಟೋರೇಜ್ ಆಯ್ಕೆಗಳನ್ನು ಪಡೆದಿದ್ದು, ಅವುಗಳಯ ಕ್ರಮವಾಗಿ 8GB / 12GB / 16GB RAM ಹಾಗೂ 256GB / 512GB / 1TB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿವೆ.
ಶಿಯೋಮಿ ಈ ನೂತನ ಟ್ಯಾಬ್ ಡ್ಯುಯಲ್ ರಿಯರ್ ಕ್ಯಾಮೆರಾ ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿ ಇದೆ. ಮುಂಭಾಗದಲ್ಲಿ ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಶಿಯೋಮಿ ಪ್ಯಾಡ್ 6s ಪ್ರೊ 10,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದು 120W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಒಳಗೊಂಡಿದೆ. ಅಲ್ಲದೇ ಡಾಲ್ಬಿ ಅಟ್ಮೋಸ್ ಆಡಿಯೋ ಜೊತೆಗೆ 6 ಸ್ಪೀಕರ್ ಸೆಟ್‌ಅಪ್ ಅನ್ನು ಇದು ಒಳಗೊಂಡಿದೆ.
ಬೆಲೆ ಮಾಹಿತಿ
ಶಿಯೋಮಿ ಪ್ಯಾಡ್ 6s ಪ್ರೊ 8GB + 256GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 3,299 ಆಗಿದೆ. ಹಾಗೆಯೇ 12GB + 256GB ವೇರಿಯಂಟ್ ದರವು CNY 3,599 ಆಗಿದ್ದು, ಇನ್ನು 16GB + 1TB ವೇರಿಯಂಟ್ ಬೆಲೆಯು CNY 4,499 ಆಗಿದೆ.


Click it and Unblock the Notifications








