ಮಾರುಕಟ್ಟೆಯಲ್ಲಿ ಮೇಲುಗೈಗಾಗಿ ಶ್ಯೋಮಿ ಹೊಸ ತಂತ್ರ
ಶ್ಯೋಮಿ ಭಾರತದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಕೂಡ ತನ್ನ ಹೊಸ ಡಿವೈಸ್‌ಗಳ ಮೂಲಕ ಕೋಲಾಹಲವನ್ನು ಎಬ್ಬಿಸುತ್ತಿದೆ. ಶ್ಯೋಮಿ ರೀಟೈಲ್ ಮಾರುಕಟ್ಟೆಗಳನ್ನು ಎಲ್ಲಿಯಾದರೂ ತಲುಪಿದಲ್ಲಿ ಇದು ಮಾರಾಟದಲ್ಲಿ ಹೊಸ ದಾಖಲೆಯನ್ನು ದಾಖಲಿಸುವುದು ನಿಜವಾಗಿದೆ.
ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಸೂಪರ್ ಟಿಪ್ಸ್
ಶ್ಯೋಮಿ ಭಾರತದ ಮುಖ್ಯಸ್ಥ ಮನು ಜೈನ್ ಹೇಳುವಂತೆ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಪ್ರತೀ ವಾರ 2 ಅಥವಾ 3 ಲಕ್ಷ ಗ್ರಾಹಕರು ನೋಂದಾಯಿಸುತ್ತಿದ್ದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಯಂದು 1.75 ಲಕ್ಷ ಯೂನಿಟ್‌ಗಳಷ್ಟು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ರೆಡ್ಮೀ ನೋಟ್ 4 ಜಿ ಮಾಡೆಲ್ ಅನ್ನು ಸದ್ಯದಲ್ಲೇ ಏರ್‌ಟೆಲ್ ಮಳಿಗೆಗಳಲ್ಲಿ ಬಿಡುಗಡೆಗೊಳಿಸುವ ಇರಾದೆ ಕಂಪೆನಿಗಿದೆ. ಶ್ಯೋಮಿ ರೆಡ್ಮೀ ನೋಟ್, ಎಮ್‌ಐ 3 ಮತ್ತು ರೆಡ್ಮೀ 1 ಎಸ್ ಮಾಡೆಲ್‌ಗಳನ್ನು ಭಾರತದಲ್ಲಿ ಒದಗಿಸುತ್ತಿದೆ.

ಭಾರತದಲ್ಲಿ ಶ್ಯೋಮಿ ಗ್ರಾಹಕರಿಗೆ ಅತಿ ಪ್ರಿಯವಾದ ಫೋನ್ ಆಗಿದ್ದು ಫೋನ್‌ಗಳು ಮಾರಾಟವಾಗುವುದನ್ನು ನೋಡುತ್ತಿರುವಾಗಲೇ ಈ ಅಂಶ ದೃಢಪಡುತ್ತದೆ. ಇನ್ನು ಶ್ಯೋಮಿ ಗೂಗಲ್ ಒನ್ ಫೋನ್ ಮ್ಯಾನುಫೇಕ್ಚರಿಂಗ್ ಯೋಜನೆಯಲ್ಲಿ ಭಾಗವಹಿಸುತ್ತಿದ್ದು ಶ್ಯೋಮಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಫ್ಲ್ಯಾಶ್ ಸೇಲ್ಸ್/ಡೀಲ್ ಆಫ್ ದ ಡೇ ವಿಧಾನಗಳ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ಉಪಾಯದಲ್ಲಿದೆ. ಇನ್ನು ಕಂಪೆನಿಯು ಆಫ್‌ಲೈನ್‌ನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಏರ್‌ಟೆಲ್‌ನೊಂದಿಗೆ ಕೈಜೋಡಿಸಲಿದೆ.


Click it and Unblock the Notifications








