Subscribe to Gizbot

ಭಾರತದಲ್ಲಿ ಶಿಯೋಮಿಯ ಮೂರನೆ ಘಟಕ!..ಪ್ರತಿ ನಿಮಿಷಕ್ಕೆ 7 ಪವರ್‌ ಬ್ಯಾಂಕ್‌ ಉತ್ಪಾದನೆ!!

Written By:

ಸ್ಯಾಮ್‌ಸಂಗ್ ಜತೆಗೆ ಭಾರತದ ನಂಬರ್ ಒನ್ ಮೊಬೈಲ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದಿರುವ ಶಿಯೋಮಿ ಭಾರತದಲ್ಲಿ ಮೂರನೆಯ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ.! ಹಿಪಾಡ್‌ ಟೆಕ್ನಾಲಜಿಯ ಜತೆಗೆ ಒಪ್ಪಂದ ಮಾಡಿಕೊಂಡಿರುವ ಶಿಯೋಮಿ ಇದೀಗ ಭಾರತದಲ್ಲಿ ತನ್ನ ಉತ್ಪಾದನೆಯತ್ತ ಕೇಂದ್ರೀಕರಿಸಿದೆ.!!

ಈ ಉತ್ಪಾದನಾ ಘಟಕವು ಭಾರತದಲ್ಲಿ ಕ್ಸಿಯೊಮಿಯ 3ನೇ ಗುತ್ತಿಗೆ ಆಧಾರಿತ ಉತ್ಪಾದನಾ ಘಟಕವಾಗಿದ್ದು, ಹಿಪಾಡ್ ಟೆಕ್ನಾಲಜಿಯ ಜತೆಗೆ ಪವರ್‌ ಬ್ಯಾಂಕ್‌ಗಳನ್ನು ನಿರ್ಮಿಸಲು ಶಿಯೋಮಿ ಈ ಒಪ್ಪಂದ ಮಾಡಿಕೊಂಡಿದೆ.! ಈ ಘಟಕದಿಂದ ಪ್ರತಿ ನಿಮಿಷಕ್ಕೆ 7 ಪವರ್‌ ಬ್ಯಾಂಕ್‌ಗಳನ್ನು ಉತ್ಪಾಧಿಸುವ ಗುರಿಯನ್ನು ಸಹ ಶಿಯೋಮಿ ಹೊಂದಿದೆ.!!

ಭಾರತದಲ್ಲಿ ಶಿಯೋಮಿಯ ಮೂರನೆ ಘಟಕ!..ಪ್ರತಿ ನಿಮಿಷಕ್ಕೆ 7 ಪವರ್‌ ಬ್ಯಾಂಕ್!!

ಈ ಬಗ್ಗೆ ಉದ್ಯೋಗ ಜಾಲತಾಣ ಲಿಂಕ್ಡ್ ಇನ್ ನಲ್ಲಿ ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನು ಜೈನ್‌ ಅವರು ಮಾಹಿತಿ ನೀಡಿದ್ದು, ಶಿಯೋಮಿ ನೇರವಾಗಿ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯದಿದ್ದರೂ ಸಹ ತಂತ್ರಜ್ಞಾನ ಸಹಾಯದಿಂದ ಉತ್ಪಾದನೆಗೆ ಬೇಕಾದ ಸೌಕರ್ಯಗಳನ್ನು ಶಿಯೋಮಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.!!

ಭಾರತದಲ್ಲಿ ಶಿಯೋಮಿಯ ಮೂರನೆ ಘಟಕ!..ಪ್ರತಿ ನಿಮಿಷಕ್ಕೆ 7 ಪವರ್‌ ಬ್ಯಾಂಕ್!!

ಈ ಘಟಕದಿಂದ 500 ಮಂದಿಗೆ ಉದ್ಯೋಗಾವಕಶ ಮತ್ತು ಪ್ರತಿ ನಿಮಿಷಕ್ಕೆ 7 ಪವರ್‌ ಬ್ಯಾಂಕ್‌ ಉತ್ಪಾದನೆ ಮಾಡುವುದಾಗಿ ತಿಳಿಸಿದ ಮನು ಜೈನ್‌ ಅವರು ಮಾತ್ರ ಶಿಯೋಮಿ ಎಷ್ಟು ಹೂಡಿಕೆ ಮಾಡುತ್ತಿದೆ ಎನ್ನುವ ವಿವರಗಳನ್ನು ಮಾತ್ರ ಬಹಿರಂಗಪಡಿಸಿಲ್ಲ.!!

ಓದಿರಿ: ಬಾಹ್ಯಾಕಾಶ ಟೂರಿಸಂಗೆ ಮನಸ್ಸು ಮಾಡದ ಇಸ್ರೊ!!

English summary
Recently, for the first time, Xiaomi reached the top slot with South Korean tech giant Samsung in terms of market share in India.to know nmore visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot