'ಪೊಕೊ ಎಫ್‌1' ಆಪರೇಟಿಂಗ್‌ನಲ್ಲಿ ದೋಷ!..ಫೋನ್‌ ಹಿಂಪಡೆಯಲು ಶಿಯೋಮಿ ನಿರ್ಧಾರ!

|

ಚೀನಾ ಮೂಲದ ಶಿಯೋಮಿ ಕಂಪನಿಯು ಇದೀಗ ಹೊಸದಾಗಿ 'ಪೊಕೊ ಎಫ್‌2' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದ್ದು, ಆದರೆ ಈ ನಡುವೆ ಕಂಪನಿಯ ಜನಪ್ರಿಯ 'ಪೊಕೊ ಎಫ್‌1' ಸ್ಮಾರ್ಟ್‌ಫೋನ್‌ಗಳ ಟಚ್‌ಸ್ಕ್ರೀನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಇತ್ತೀಚಿಗೆ ಬೆಲೆ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಉತ್ತಮ ಮಾರಾಟದಲ್ಲಿದ್ದ ಪೊಕೊ ಎಫ್‌1 ನಲ್ಲಿನ ದೋಷಗಳಿಗೆ ಕಾರಣ ಇನ್ನು ನಿಗೂಢ.

'ಪೊಕೊ ಎಫ್‌1' ಆಪರೇಟಿಂಗ್‌ನಲ್ಲಿ ದೋಷ!..ಫೋನ್‌ ಹಿಂಪಡೆಯಲು ಶಿಯೋಮಿ ನಿರ್ಧಾರ!

ಹೌದು, ಶಿಯೋಮಿ ಕಂಪನಿಯು ಇತ್ತೀಚಿಗೆ MIUI 10.3.5.0 ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಅಪ್‌ಡೇಟ್ ಕಂಡಿರುವ 'ಪೊಕೊ ಎಫ್‌1' ಸ್ಮಾರ್ಟ್‌ಫೋನ್‌ಗಳ ಟಚ್‌ಸ್ಕ್ರೀನ್‌ನ ಆಪರೇಟಿಂಗ್‌ನಲ್ಲಿ ಇದೀಗ ದೋಷಗಳು ಕಂಡುಬಂದಿವೆ. ದೋಷಕ್ಕೆ ನಿಖರ ಕಾರಣಗಳೆನು ಎನ್ನುವುದನ್ನು ತಿಳಿಯಲು ಕಂಪನಿಯು ನಿರ್ಧರಿಸಿದ್ದು, ಅದಕ್ಕಾಗಿ ದೋಷಯುಕ್ತ 'ಪೊಕೊ ಎಫ್‌1' ಸ್ಮಾರ್ಟ್‌ಫೋನ್‌ಗಳನ್ನು ಹಿಂಪಡೆಯಲು ಮುಂದಾಗಿದೆ.

'ಪೊಕೊ ಎಫ್‌1' ಆಪರೇಟಿಂಗ್‌ನಲ್ಲಿ ದೋಷ!..ಫೋನ್‌ ಹಿಂಪಡೆಯಲು ಶಿಯೋಮಿ ನಿರ್ಧಾರ!

MIUI 10.3.5.0 ಅಪ್‌ಡೇಟ್ ನಂತರ ಪೊಕೊ ಎಫ್‌1 ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್‌ ಸ್ಟ್ರಕ್‌, ಗೋಸ್ಟ್‌ ಟಚ್‌ ಮತ್ತು ಸ್ಕ್ರೀನ್‌ಟಚ್‌ ವಿಳಂಬ ಇಂತಹ ದೋಷವನ್ನು ಕಾಣಿಸಿಕೊಂಡಿವೆ. ಹೀಗಾಗಿ ದೋಷಯುಕ್ತ ಪೊಕೊ ಎಫ್‌1 ಸ್ಮಾರ್ಟ್‌ಫೋನ್‌ಗಳನ್ನು ಹಿಂಪಡೆದುಕೊಂಡು ಟಚ್‌ಸ್ಕ್ರೀನ್‌ನಲ್ಲಿ ಕಂಡು ಬಂದಿರುವ ದೋಷಕ್ಕೆ ಕಾರಣಗಳೆನು ಎನ್ನುವುದನ್ನು ತಿಳಿಯಲಾಗುತ್ತದೆ ಎಂದು ಪೊಕೊ ಬ್ರ್ಯಾಂಡ್‌ ಮುಖ್ಯಸ್ಥ 'ಆಲ್ವಿನ್ ತ್ಸೆ' ಅವರು ಟ್ವಿಟ್‌ ಮೂಲಕ ಹೇಳಿದ್ದಾರೆ.

'ಪೊಕೊ ಎಫ್‌1' ಆಪರೇಟಿಂಗ್‌ನಲ್ಲಿ ದೋಷ!..ಫೋನ್‌ ಹಿಂಪಡೆಯಲು ಶಿಯೋಮಿ ನಿರ್ಧಾರ!

ಪೊಕೊ ಎಫ್‌1 ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್‌ ಸ್ಟ್ರಕ್‌, ಗೋಸ್ಟ್‌ ಟಚ್‌ ಮತ್ತು ಸ್ಕ್ರೀನ್‌ಟಚ್‌ ವಿಳಂಬ ಇಂತಹ ದೋಷಗಳು ಕಂಡುಬಂದಿವೆ. ಆದ್ರೆ ಈ ದೋಷಗಳನ್ನು ಕಂಪನಿಯು OTA ಅಪ್‌ಡೇಟ್‌ ಮೂಲಕ ಸರಿಪಡಿಸಲು ಆಗುವುದಿಲ್ಲ ಎಂದಿರುವ ಕಂಪನಿಯು ಅದಕ್ಕಾಗಿ ಕೇಲವು ಸ್ಮಾರ್ಟ್‌ಫೋನ್‌ಗಳನ್ನು ಹಿಂಪಡೆದು ಪರೀಕ್ಷಿಸಿ ಯಾವ ಕಾರಣಗಳಿಂದಾಗಿ ಈ ದೋಷಗಳು ಕಾಣಿಸಿಕೊಂಡಿವೆ ಎಂದು ತಿಳಿಯಲು ಮುಂದಾಗಿದೆ.

ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ! ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

ಈ ಸ್ಮಾರ್ಟ್‌ಫೋನ್‌ 6.18 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್‌ ಶಕ್ತಿಯನ್ನು ಹೊಂದಿದೆ. 6GB ಅಥವಾ 8GB RAM ಜೊತೆಗೆ 256GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದ್ದು. ಹಾಗೆಯೇ 12ಎಂಪಿ+5ಎಂಪಿ ಸೆನ್ಸಾರ್‌ನ ಡ್ಯುಯಲ್‌ ಕ್ಯಾಮೆರಾ ಆಯ್ಕೆ ಪಡೆದಿರುವುದರೊಂದಿಗೆ 4,000mAh ಬ್ಯಾಟರಿ ಪವರ್‌ ಅನ್ನು ಹೊಂದಿದೆ.

ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

Best Mobiles in India

English summary
Xiaomi is calling for Poco F1 users to turn in their device if they are facing touchscreen issues. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X