ಭಾರತೀಯರಿಗೆ ಬ್ಯಾಡ್ ನ್ಯೂಸ್ ನೀಡಿದ ಶಿಯೋಮಿ; Zili ಆಪ್ ಸ್ಥಗಿತ
ಶಿಯೋಮಿ ಬ್ರ್ಯಾಂಡ್ ಈಗಾಗಲೇ ಸುಧಾರಿತ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.ಅದರಲ್ಲೂ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದ್ದು, ಈ ಖುಷಿ ವಿಚಾರಗಳೊಂದಿಗೆ ಭಾರತೀಯ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ಸಹ ನೀಡಲು ಮುಂದಾಗಿದೆ.
ಹೌದು, ಭಾರತದಲ್ಲಿ ಕಳೆದ ವರ್ಷ ಶಿಯೋಮಿ ಗಮನಾರ್ಹವಾದ ಹೊಡೆತಗಳನ್ನು ಎದುರಿಸಿದೆ ಎನ್ನಲಾಗಿದೆ. ಈ ಕಾರಣಕ್ಕೆ ಜನಪ್ರಿಯ ಶಾರ್ಟ್ ವಿಡಿಯೋ ಆಪ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ನಂತರದಲ್ಲಿ ಈ ಆಪ್ ಭಾರೀ ಸದ್ದು ಮಾಡಿತ್ತು. ಆದರೂ ಶಿಯೋಮಿ ಈ ಆಪ್ ಸೇವೆಗೆ ಫುಲ್‌ಸ್ಟಾಪ್ ಇಡಲಿದೆ. ಹಾಗಿದ್ರೆ, ಈ ನಿರ್ಧಾರಕ್ಕೆ ನಿಖರ ಮುಖ್ಯ ಕಾರಣ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಝಿಲಿ (Zili) ಆಪ್ ಸ್ಥಗಿತ
ಈಗಂತೂ ಎಲ್ಲಾ ಪ್ರಮುಖ ಸಂಸ್ಥೆಗಳು ಅಷ್ಟೇ ಏಕೆ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲೂ ಶಾರ್ಟ್‌ವಿಡಿಯೋ ಫೀಚರ್ಸ್ ಅನ್ನು ಪರಿಚಯಿಸಲಾಗಿದ್ದು, ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇದೇ ರೀತಿಯ ಸೇವೆ ನೀಡುತ್ತಾ ಬರುತ್ತಿದ್ದ ಝಿಲಿ ಆಪ್ ಸ್ಥಗಿತ ಮಾತ್ರ ಹಲವಾರು ಭಾರತೀಯ ಬಳಕೆದಾರರಿಗೆ ಬೇಸರದ ಸಂಗತಿಯಾಗಿದೆ.
ಎದಿನಿಂದ ಸ್ಥಗಿತ
ಈ ಶಾರ್ಟ್ ವಿಡಿಯೋ ಆಪ್ ಟಿಕ್ ಟಾಕ್‌ನ ತದ್ರೂಪಿ ಎನಿಸಿಕೊಂಡಿದ್ದು, ಟಿಕ್‌ಟಾಕ್ ಅನ್ನು ನಿಷೇಧ ಮಾಡಿದ ನಂತರ ಲಕ್ಷಾಂತರ ಡೌನ್‌ಲೋಡ್‌ಗಳನ್ನು ಮಾಡಲಾಗಿದೆ. ಆದರೆ, ಈ ವರ್ಷದ ಅಂದರೆ ಮುಂದಿನ ತಿಂಗಳು ಮಾರ್ಚ್ 13 ರಂದು ಭಾರತೀಯ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಈ ಮೂಲಕ ಅದೆಷ್ಟೋ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ ಶಿಯೋಮಿ. 2018 ರಲ್ಲಿ ಪ್ರಾರಂಭವಾದ ಝಿಲಿ 2020 ರ ನಂತರ ಗಣನೀಯ ಬೆಳವಣಿಗೆಯನ್ನು ಕಂಡಿತ್ತು.
ಶಿಯೋಮಿ ಹೇಳಿದ್ದೇನು?
ಝಿಲಿ ಆಪ್ ಅನ್ನು ಸ್ಥಗಿತಗೊಳಿಸುವ ಮೊದಲು ಬಳಕೆದಾರರಿಗೆ ಮಹತ್ವದ ಮಾಹಿತಿ ನೀಡಿರುವ ಶಿಯೋಮಿ, ಬಳಕೆದಾರರು ಆಪ್‌ನಲ್ಲಿನ ಕಂಟೆಂಟ್ ಅನ್ನು ಆಫ್‌ಲೈನ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಈ ಆಪ್ ಸ್ಥಗಿತವಾಗುವ ಮೊದಲೇ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದೆ.

ಟಿಕ್‌ಟಾಕ್ ಸ್ಥಗಿತವಾದ ನಂತರ ಜಿಲಿಯ ನಾಗಾಲೋಟ...
ಟಿಕ್‌ಟಾಕ್‌ನ ನಿಷೇಧದ ಮೂರು ವಾರಗಳಲ್ಲಿ ಝಿಲಿ ಆಪ್ ಡೌನ್‌ಲೋಡ್ 8 ಮಿಲಿಯನ್‌ಗೆ ತಲುಪಿತ್ತು. ಇನ್ನು ಗೂಗಲ್ ಪ್ಲೇ ಲಿಸ್ಟ್ ಪ್ರಕಾರ, ಆಪ್ ಇಲ್ಲಿಯವರೆಗೆ 100 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ. ಇಷ್ಟೆಲ್ಲಾ ಬೆಳವಣಿಗೆಗೆ ಮೂಲ ಕಾರಣ ಶಿಯೋಮಿಯ ಯಾವುದೇ ಸ್ಮಾರ್ಟ್‌ಫೋನ್ ನಲ್ಲಿ ಈ ಆಪ್ ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ.
ಝಿಲಿ ಸ್ಥಗಿತಕ್ಕೆ ಕಾರಣ ಏನು?
ಇಷ್ಟೆಲ್ಲಾ ಆದ ನಂತರ ಸಿಕ್ವೊಯಾ ಬೆಂಬಲಿತ ಟ್ರೆಲ್‌ನಂತಹ ಆಪ್‌ಗಳ ಉಲ್ಬಣ ಹೆಚ್ಚಾದವು. ಜೊತೆಗೆ ದೇಶದಲ್ಲಿ ಶಾರ್ಟ್ ವಿಡಿಯೋ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಈ ರೀತಿಯ ಆಪ್‌ಗಳ ಸೃಷ್ಟಿ ಸಹ ಹೆಚ್ಚಾಯಿತು.ಪ್ರಮುಖವಾಗಿ ಟೈಗರ್ ಗ್ಲೋಬಲ್ ಬೆಂಬಲಿತ ಶೇರ್‌ಚಾಟ್ ಸಹ ತನ್ನ ಪ್ರಾಬಲ್ಯ ಸಾಧಿಸಿತು.ಹಾಗೆಯೇ ಮತ್ತು Moj ಹಾಗೂ ಎಮ್‌ಎಕ್ಸ್ TakaTak ಆಪ್ ವಿಲೀನಗೊಂಡವು ಇಷ್ಟೆಲ್ಲಾ ಬೆಳವಣಿಗೆ ನಡುವೆ ಗೂಗಲ್ ಮತ್ತು ಮೆಟಾದಂತಹ ದೊಡ್ಡ ಟೆಕ್ ಕಂಪೆನಿಗಳು ಮಾರುಕಟ್ಟೆಯ ಬೇಡಿಕೆಯ ಗಮನಾರ್ಹ ಪಾಲನ್ನು ತಮ್ಮದಾಗಿಸಿಕೊಂಡಿವೆ.

ಝಿಲಿ ಆಪ್ ಸ್ಥಗಿತಗೊಳ್ಳುತ್ತಿರುವುದು ಇದೇ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಎಂಬುದು ನಿಖರವಾಗಿಲ್ಲ. ಆದರೆ ಶಿಯೋಮಿ ಭಾರತದಲ್ಲಿ ಹಲವು ಪರಿಶೀಲನೆಯನ್ನು ಎದುರಿಸುತ್ತಿದೆ ಎಂಬುದು ಮಾತ್ರ ಸತ್ಯ. ಇದರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮತ್ತು ಸ್ಮಾರ್ಟ್‌ಫೋನ್ ದಾಸ್ತಾನು ನಿರ್ವಹಣೆಯನ್ನು ಸುಧಾರಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


Click it and Unblock the Notifications








