Smartphones: ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು 7 ಸಾವಿರದೊಳಗೆ ಆಫರ್ ಬೆಲೆಗೆ ಲಭ್ಯ! ಆಕರ್ಷಕ ಫೀಚರ್ಸ್
ಸ್ಮಾರ್ಟ್‌ಫೋನ್‌ಗಳು(Smartphones) ಇಂದು ಕೈಗೆಟಕುವ ದರದಿಂದ ಲಕ್ಷಗಟ್ಟಲೆ ಬೆಲೆಯಲ್ಲಿ ಲಭ್ಯ ಇವೆ. ಇವುಗಳನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಹಾಗೂ ಪ್ರತಿಷ್ಟೆಗೆ ತಕ್ಕಂತೆ ಖರೀದಿ ಮಾಡುತ್ತಾರೆ. ಈ ಕಾರಣಕ್ಕೆ ಬಜೆಟ್ ಬೆಲೆಯ ಫೋನ್‌ಗಳು (budget priced phone) ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಆಗುತ್ತಿವೆ. ಅದೂ ಸಹ ಆಫರ್ ಬೆಲೆ ಜೊತೆಗೆ.
ಹೌದು, ಎಲ್ಲರಿಗೂ ಸಹ ದುಬಾರಿ ಬೆಲೆಯ ಫೋನ್‌ಗಳನ್ನು ಖರೀದಿ ಮಾಡಲು ಆಗುವುದಿಲ್ಲ. ಅಂಥವರು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅದರಂತೆ ನಾವಿಲ್ಲಿ ಕೇವಲ ಏಳು ಸಾವಿರ ಒಳಗೆ ಲಭ್ಯ ಇರುವ ಅದರಲ್ಲೂ ಆಫರ್ ಬೆಲೆಯಲ್ಲಿ ಲಭ್ಯ ಇರುವ ಫೋನ್‌ಗಳ ಮಾಹಿತಿ ತಿಳಿಸಿದ್ದೇವೆ. ಈ ಫೋನ್‌ಗಳು ಉತ್ತಮ ಸ್ಟೋರೇಜ್ ಆಯ್ಕೆ ಹಾಗೂ ಕಾರ್ಯಕ್ಷಮತೆಯನ್ನು ಹೊಂದಿವೆ.

ಶಿಯೋಮಿ ರೆಡ್ಮಿ 12C: ಈ ಸ್ಮಾರ್ಟ್‌ಫೋನ್ (Xiaomi Redmi 12C) ಅನ್ನು ನೀವು 6,799ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 6.71ಇಂಚಿನ IPS LCD ಡಿಸ್‌ಪ್ಲೇ ಪಡೆದಿದ್ದು, 60 Hz ರಿಫ್ರೆಶ್ ರೇಟ್ ಆಯ್ಕೆ ಮೂಲಕ ಅತ್ಯುತ್ತಮ ಅನುಭವ ನೀಡಲಿದೆ. ಇದರೊಂದಿಗೆ ಆಕ್ಟಾ ಕೋರ್ (2 GHz, ಡ್ಯುಯಲ್ ಕೋರ್ + 1.8 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಹಾಗೂ 4 GB RAM ಆಯ್ಕೆ ಪಡೆದಿದೆ. ಜೊತೆಗೆ 50 MP + 0.08 MP ಡ್ಯುಯಲ್ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಪಡೆದಿದೆ.
ಶಿಯೋಮಿ ರೆಡ್ಮಿ 11 ಪ್ರೈಮ್ 5G: ಈ ಸ್ಮಾರ್ಟ್‌ಫೋನ್ (Xiaomi Redmi 11 Prime 5G) ಅನ್ನು ನೀವು 6,239 ರೂ.ಗಳ ಬೆಲೆಯಲ್ಲಿ ಕೊಂಡುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90 Hz ರಿಫ್ರೆಶ್ ರೇಟ್ ಮೂಲಕ ಉತ್ತಮ ಬಳಕೆಯ ಅನುಭವ ನೀಡಲಿದೆ. ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಬಲ ಹಾಗೂ 4 GB RAM ನೊಂದಿಗೆ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ.
ಮೊಟೊ E13 : ಈ ಸ್ಮಾರ್ಟ್‌ಫೋನ್‌ಗೆ (Moto E13) ಕೇವಲ 5,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 60 Hz ರಿಫ್ರೆಶ್ ರೇಟ್ ಹಾಗೂ ಆಕ್ಟಾ ಕೋರ್ (1.6 GHz, ಡ್ಯುಯಲ್ ಕೋರ್ + 1.6 GHz, ಹೆಕ್ಸಾ ಕೋರ್) ಯುನಿಸೊಕ್ T606 ಪ್ರೊಸೆಸರ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ 2 GB RAM ಹಾಗೂ 13 MP ಪ್ರಾಥಮಿಕ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ.

ಪೊಕೊ C51 : ಈ ಫೋನ್ (Poco C51) ಅನ್ನು ನೀವು 6,249 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 60 Hz ರಿಫ್ರೆಶ್ ರೇಟ್ ಹೊಂದಿದ್ದು, ಆಕ್ಟಾ ಕೋರ್ (2.2 GHz, ಕ್ವಾಡ್ ಕೋರ್ + 1.8 GHz, ಕ್ವಾಡ್ ಕೋರ್) ಮೀಡಿಯಾ ಟೆಕ್ ಹಿಲಿಯೊ G36 ಪ್ರೊಸೆಸರ್ ಸಾಮರ್ಥ್ಯ ಹಾಗೂ 4 GB RAM ಮೂಲಕ ಕಾಣಿಸಿಕೊಂಡಿದೆ. ಇದರೊಂದಿಗೆ 8 MP + 0.08 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 7: ಈ ಸ್ಮಾರ್ಟ್‌ಫೋನ್ (Infinix Smart 7) ಅನ್ನು 6,569 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು 6.6 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ಪಡೆದಿದೆ. ಇದರೊಂದಿಗೆ ಆಕ್ಟಾ ಕೋರ್ (1.6 GHz, ಕ್ವಾಡ್ ಕೋರ್ + 1.2 GHz, ಕ್ವಾಡ್ ಕೋರ್) ಯೂನಿಸೋಕ್ SC9863A ಪ್ರೊಸೆಸರ್ ಸಾಮರ್ಥ್ಯ ಹಾಗೂ 4 GB RAM ನೊಂದಿಗೆ ಕಾಣಿಸಿಕೊಂಡಿದೆ. ಉಳಿದಂತೆ ಈ ಫೋನ್ 13 MP + 0.3 MP ಡ್ಯುಯಲ್ ರಿಯರ್ ಕ್ಯಾಮೆರಾ, 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F04: ಈ ಫೋನ್ (Samsung Galaxy F04) ಅನ್ನು ನೀವು 6,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು 6.5 ಇಂಚಿನ PLS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಕ್ಟಾ ಕೋರ್ (2.3 GHz, ಕ್ವಾಡ್ ಕೋರ್ + 1.8 GHz, ಕ್ವಾಡ್ ಕೋರ್) ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಹಾಗೂ 4 GB RAM ಮೂಲಕ ಉತ್ತಮ ಅನುಭವ ನೀಡಲಿದೆ. ಇದರೊಂದಿಗೆ 13 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ.


Click it and Unblock the Notifications








