Home
ಸುದ್ದಿಜಾಲ

499ರೂ.ಗೆ ರೆಡ್​ಮಿ 6 ಪ್ರೋ!..ವೆಬ್‌ಸೈಟ್ ತೆರೆಯುವ ಮುನ್ನ ಎಚ್ಚರ!!

ಶಿಯೋಮಿ ಕಂಪೆನಿ ಒಮ್ಮೊಮ್ಮೆ ಫ್ಲಾಶ್‌ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್ ನೀಡುವ ಸ್ಪರ್ಧೆಯನ್ನು ಆಯೋಜಿಸುವುದರಿಂದಲೇ ಏನೋ, ಕೇವಲ 499 ರೂ.ಗೆ ಶಿಯೋಮಿ ಸ್ಮಾರ್ಟ್‌ಫೋನ್ ಪಡೆಯಿರಿ ಎಂಬ ಮೋಸದ ಸಂದೇಶಗಳಿಗೆ ಹಲವರು ಬಲಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಮಾರುಕಟ್ಟೆಗೆ ರೆಡ್​ಮಿ 6 ಪ್ರೋ ಮೊಬೈಲ್ ಕೂಡ ಇಂತಹುದೇ ಹೈಪ್ ಸೃಷ್ಟಿಸಿದೆ.

ಹೌದು, ಫೇಕ್ ಫಿಶಿಂಗ್ ಸೈಟ್‌ಗಳು ಎಂದು ಕರೆಯಲಾಗುವ ಹಲವು ವೆಬ್​ಸೈಟ್​ಗಳು ಗ್ರಾಹಕರ ಡೇಟಾಗಳನ್ನು ಕದಿಯುವ ಸಲುವಾಗಿ 499 ರೂ.ಗೆ ಶಿಯೋಮಿ ಸ್ಮಾರ್ಟ್‌ಫೋನ್ ಪಡೆಯಿರಿ ಎಂಬ ಮೋಸದ ಜಾಹಿರಾತನ್ನು ಪ್ರಕಟಿಸುತ್ತಿವೆ. ಈ ಮೋಸದ ಕಂಪೆನಿಗಳು ಜಾಲತಾಣಗಳಲ್ಲಿ ಹರಿಬಿಡುವ ಈ ಜಾಹಿರಾತುಗಳನ್ನು ನಂಬಿ ಸಾವಿರಾರು ಜನರು ಮೋಸ ಹೋಗುತ್ತಿದ್ದಾರೆ.

499ರೂ.ಗೆ ರೆಡ್​ಮಿ 6 ಪ್ರೋ!..ವೆಬ್‌ಸೈಟ್ ತೆರೆಯುವ ಮುನ್ನ ಎಚ್ಚರ!!

ಅಧಿಕೃತ ಕಂಪನಿ ವೆಬ್​ಸೈಟ್​ಗಳ ರೀತಿಯಲ್ಲೇ ಲೊಗೊ ಸೇರಿದಂತೆ ವೆಬ್‌ಸೈಟ್ ಹೆಸರನ್ನು ಕ್ರಿಯೇಟ್ ಮಾಡಿಕೊಳ್ಳುವ ಸೈಬರ್ ಕ್ರಿಮಿನಲ್‌ಗಳು 90% ಡಿಸ್ಕೌಂಟ್​​ನಲ್ಲಿ ಮೊಬೈಲ್ ನೀಡಿರುವುದಾಗಿ ವಂಚಿಸುತ್ತಿದ್ದಾರೆ. ಭರ್ಜರಿ ಆಫರ್ ಸಿಕ್ಕಿರುವ ಖುಷಿಯಲ್ಲಿ ಅದನ್ನು ಪರಿಶೀಲಿಸದೇ ವಸ್ತುಗಳನ್ನು ಖರೀದಿಸಲು ಮುಂದಾಗುವವರ ಖಾತೆಗೆ ಕನ್ನ ಬೀಳುವುದು ಖಚಿತವಾಗಿದೆ.

ಒಂದು ವೇಳೆ ಆ ಮೊಬೈಲ್ ಅನ್ನು ಖರೀದಿಸದೇ ಇದ್ದರೂ, ಈ ವೆಬ್​ಸೈಟ್​ನಲ್ಲಿ ಮೊಬೈಲ್​ನ್ನು ಖರೀದಿಸಲು ಪ್ರಯತ್ನಿಸಿದರೂ ಬೇರೊಂದು ಪುಟಕ್ಕೆ ಮರು ನಿರ್ದೇಶಿಸುತ್ತದೆ. ಬಳಿಕ ಮತ್ತಷ್ಟು ಜನರಿಗೆ ಈ ಪ್ರಸ್ತಾಪವನ್ನು ಕಳುಹಿಸಿದರೆ ಮಾತ್ರ ನಿಮಗೆ ಈ ಆಫರ್​ನಲ್ಲಿ ಮೊಬೈಲ್ ಖರೀದಿಸಬಹುದು ಎಂಬ ಮಾಹಿತಿ ಸಿಗುತ್ತದೆ. ಹೀಗೆ ಇದನ್ನು ಮುಂದುವರೆಸಲು ಪ್ರೇರೇಪಿಸುತ್ತದೆ.

499ರೂ.ಗೆ ರೆಡ್​ಮಿ 6 ಪ್ರೋ!..ವೆಬ್‌ಸೈಟ್ ತೆರೆಯುವ ಮುನ್ನ ಎಚ್ಚರ!!

ಹೀಗೆ ನಿಮ್ಮ ಸಹಾಯದಿಂದ ಇತರರನ್ನು ವಂಚಿಸಲು ಯೋಚಿಸುವ ಕ್ರಿಮಿನಲ್‌ಗಳು ನೀವು ಬಳಸುವ ಖಾತೆಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಾರೆ. ಒಮ್ಮೆ ಅವರ ಮಾತಿಗೆ ಮರುಳಾಗಿ ಅವರು ಹೇಳಿದಂತೆಲ್ಲಾ ಕೇಳಿದರೆ, ನಿಮ್ಮ ಖಾತೆಯನ್ನು ಸಹ ಹ್ಯಾಕ್ ಮಾಡುವುದಲ್ಲದೇ, ನಿಮ್ಮ ಬ್ಯಾಂಕ್ ಖಾತೆಯನ್ನು ಸಹ ಖಾಲಿ ಮಾಡುತ್ತಾರೆ. ಹಾಗಾಗಿ, ಇಂತಹುಗಳಿಂದ ಎಚ್ಚರವಾಗಿರಿ.

ಓದಿರಿ: ಇನ್ಮುಂದೆ ವಾಟ್ಸ್ಆಪ್ ಸ್ಟೇಟಸ್ ತೆರೆದರೆ ನಿಮಗೆ ಕಾಣಿಸುವುದೇ ಬೇರೆ!!

Best Mobiles in India

English summary
Several fake websites keep surfacing on the web from time to time with the aim to trap users and capture their sensitive information. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+