TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತೀಯರ ನೆಚ್ಚಿನ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಜಾಹಿರಾತು ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಮೊದಲು ಯಾವುದೇ ಕಾರಣಕ್ಕೂ ತನ್ನಲ್ಲಿ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸ್ಆಪ್ ಸಂಸ್ಥೆ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ ಎಂದು ಇತ್ತೀಚಿನ ವರದಿಗಳು ದೃಢಪಡಿಸಿವೆ.
WaBetaInfo ಪ್ರಕಟಿಸಿರುವ ವರದಿ ಅನ್ವಯ ವಾಟ್ಸ್‌ಆಪ್ ತನ್ನ ಬಳಕೆದಾರರ ಸ್ಟೇಟಸ್ನಲ್ಲಿ ಜಾಹೀರಾತುಗಳನ್ನು ತೋರಿಸಲಿದೆ ಎಂದು ಹೇಳಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ್ದ ವರದಿಯಲ್ಲಿಯೂ ಸಹ ವಾಟ್ಸ್ಆಪ್‌ನಲ್ಲಿ ಜಾಹೀರಾತುಗಳು 2019ರಿಂದ ಆರಂಭವಾಗಲಿವೆ ಎಂದು ಹೇಳಿರುವುದು ಈಗ ವಾಟ್ಸ್‌ಆಪ್ ಕೂಡ ಜಾಹಿರಾತು ತರುವ ಸೂಚನೆಗಳನ್ನು ನೀಡಿದೆ.
ಲಭ್ಯವಾದ ಮಾಹಿತಿ ಅನ್ವಯ ಈ ಜಾಹೀರಾತು ವಿಡಿಯೋ ರೂಪದಲ್ಲಿದ್ದು, ಇನ್ಸ್ಟಾಗ್ರಾಂ ಸ್ಟೋರೀಸ್ನಂತೆಯೇ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. ಫೇಸ್‌ಬುಕ್ ಇದೇ ವರ್ಷ ಜೂನ್ನಲ್ಲಿ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಜಾಹೀರಾತನ್ನು ಆರಂಭಿಸಿತ್ತು. ಇದೇ ರೀತಿ ಈಗ ವಾಟ್ಸ್ಆಪ್‌ನಲ್ಲಿಯೂ ಜಾಹಿರಾತು ಟೆಸ್ಟಿಂಗ್ನ್ನೂ ಈಗಾಗಲೇ ಆರಂಭಿಸಿದೆ ಎನ್ನಲಾಗಿದೆ.
ಇಲ್ಲಿಯವರೆಗೂ ಉಚಿತವಾಗಿ ಸೇವೆಯನ್ನು ನೀಡುತ್ತಿದ್ದ ವಾಟ್ಸಆಪ್‌ನಲ್ಲಿಯೂ ಆದಾಯ ಮಾಡಲು ಮಾತೃಸಂಸ್ಥೆ ಸಿದ್ಧತೆ ನಡೆಸಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸ್ಆಪ್ ಜಾಹಿರಾತುಗಳನ್ನು ನೀಡದೇ ಹೇಗೆಲ್ಲಾ ಹಣ ಗಳಿಸುತ್ತಿತ್ತು ಎಂಬ ಸ್ಟೋರಿ ಕೂಡ ವೈರಲ್ ಆಗಿದ್ದನ್ನು ಸಹ ಈ ಕೆಳಗೆ ನೀವು ನೋಡಬಹುದು.
ಇಂದು ವಾಟ್ಸ್ಆಪ್ ಮೌಲ್ಯ ಎಷ್ಟು?
2014 ರಲ್ಲಿ ವಾಟ್ಸ್ಆಪ್ ಅನ್ನು ಫೇಸ್‌ಬುಕ್ ಖರೀದಿ ಮಾಡಿದ್ದು 1.23 ಸಾವಿರ ಕೋಟಿ ರೂ.ಗೆ.! ಆದರೆ, ಇಂದು ವಾಟ್ಸ್ಆಪ್ ಮೌಲ್ಯ ಎಷ್ಟು ಎಂಬುದನ್ನು ಸುಮ್ಮನೆ ಬೆಲೆ ಕಟ್ಟಲು ಸಾಧ್ಯವಿಲ್ಲ. 2014ರಿಂದ ಈಚೆಗೆ ಭಾರೀ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ವಾಟ್ಸ್ಆಪ್ ಬೆಲೆ ಇಂದು ಎಷ್ಟೋ ಲಕ್ಷ ಕೋಟಿಗಳನ್ನು ಮೀರಿದೆ ಎಂದರೆ ಆಶ್ಚರ್ಯವೇನಿಲ್ಲ.!
ಫೇಸ್‌ಬುಕ್‌ಗಿಂತ ಹೆಚ್ಚು ಗಳಿಕೆ.!
ಒಂದು ಅಂದಾಜಿನ ಪ್ರಕಾರ, ವಾಟ್ಸ್‌ಆಪ್ ಫೇಸ್‌ಬುಕ್‌ಗಿಂತ ಹೆಚ್ಚು ಗಳಿಕೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ವಾಟ್ಸ್ಆಪ್ ನೇರವಾಗಿ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಸಾವಿರಾರು ಕೋಟಿ ಹಣಗಳಿಕೆಯ ಮೂಲವಾಗಿದೆ. ಏಕೆಂದರೆ, ವಾಟ್ಸ್‌ಆಪ್ ಅವಶ್ಯಕತೆ ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಆನ್‌ಲೈನ್ ದೈತ್ಯ ಕಂಪೆನಿಗಳಿಗೂ ಇದೆ.
ಹಣಗಳಿಕೆ ಸಂಪೂರ್ಣ ಡಿಫರೆಂಟ್!
ಮೊದಲೇ ಹೇಳಿದಂತೆ ವಾಟ್ಸ್ಆಪ್ ಹಣ ಮಾಡುವುದೇ ನಮ್ಮೆಲ್ಲರಿಗೂ ಒಂತರ ವಿಚಿತ್ರ. ನಮಗೆ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಹಣಗಳಿಸುತ್ತಿರುವುದು ನಮ್ಮ ದತ್ತಾಂಶಗಳಿಂದ. ವಾಟ್ಸ್‌ಆಪ್‌ಗೆ ದತ್ತಾಂಶಗಳೇ ಅದರ ಬಂಡವಾಳ. ಹಾಗಾಗಿ, ಈ ದತ್ತಾಂಶ ವಾಟ್ಸ್ಆಪ್‌ಗೆ ಕೇವಲ ಚಿನ್ನವನ್ನೆ ಹೊಂದಿರುವ 'ಚಿನ್ನದ ಗಣಿ" ಇದ್ದಹಾಗೆ.
ಏನಿದು ವಾಟ್ಸ್ಆಪ್ ದತ್ತಾಂಶ?
ನಾವು ವಾಟ್ಸ್ಆಪ್ ಮೂಲಕ ಕಳುಹಿಸಿದ ಒಂದೊಂದು ಮೆಸೇಜ್ ಸಹ ಅಮೆರಿಕದಲ್ಲಿರುವ ವಾಟ್ಸ್‌ಆಪ್ ಸರ್ವರ್‌ಗೆ ಹೋಗಿ ಅಲ್ಲಿಂದ ರವಾನೆಯಾಗುತ್ತದೆ. ಹೀಗೆ ಅಲ್ಲಿ ಸಂಗ್ರಹವಾದ ಎಲ್ಲಾ ಸಂದೇಶಗಳನ್ನು ಸರ್ವರ್ ಡಿಕೋಡ್ ಮಾಡಿ ನೋಡುತ್ತದೆ. ಇವುಗಳ ಒಟ್ಟು ದತ್ತಾಂಶವೇ ಈಗ ಇ-ಕಾಮರ್ಸ್ ಸೇರಿದಂತೆ ಪ್ರತಿಯೊಂದು ಆನ್‌ಲೈನ್ ಸಂಸ್ಥೆಗಳಿಗೆ ಹಾಟ್‌ಕೇಕ್ ಆಗಿದೆ.
ದತ್ತಾಂಶಕ್ಕೆ ಅಷ್ಟೊಂದು ಬೆಲೆ ಏಕೆ?
ವಾಟ್ಸ್‌ಆಪ್ ಬಳಸುತ್ತಿರುವವರ ಮೂಡ್ ಯಾವ ರೀತಿ ಇದೆ, ಅವರು ಈಗ ಏನನ್ನು ಬಯಸುತ್ತಿದ್ದಾರೆ, ಅವರು ಎಲ್ಲಿದ್ದಾರೆ ಎಂಬೆಲ್ಲಾ ತಿಳಿದುಕೊಳ್ಳುವುದಕ್ಕೆ ಈ ಡೇಟಾ ನೆರವಾಗುತ್ತದೆ.ಈ ಡೇಟಾ ಈಗ ಇ-ಕಾಮರ್ಸ್ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಚಿನ್ನದ ಗಣಿಯಾಗಿದ್ದು, ಜಾಹೀರಾತು ತೋರಿಸಿ ಗ್ರಾಹಕರನ್ನು ಸೆಳೆಯುವ ಚಿನ್ನವೇ ದತ್ತಾಂಶವಾಗಿದೆ.
ಡಾಟಾ ಜಗತ್ತು ಇದು!
ಇಡೀ ಜಗತ್ತು ಇಂದು ಡಾಟಾದ ಮೇಲೆ ನಿಂತಿದೆ. ಇ-ಕಾಮರ್ಸ್ ಕಂಪನಿಗಳೂ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಈಗ ಡಾಟಾಬೇಕಿದೆ. ಒಂದು ವಸ್ತುವನ್ನು ಯಾರಿಗೆ ಮಾರಬೇಕು, ಹೇಗೆ ಮಾರಬೇಕು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಡಾಟಾ ಬೇಕಿದೆ. ಹಾಗಾಗಿಯೇ, ವಾಟ್ಸ್ಆಪ್‌ನ ಸಂಪೂರ್ಣ ಮೌಲ್ಯ ಡಾಟಾದಲ್ಲಿಯೇ ಇದೆ!
ಉದಾಹರಣೆ ಹೀಗಿದೆ!
ನೀವು ಇರುವ ಸ್ಥಳದಲ್ಲಿ ಮಳೆ ಬರುತ್ತಿದೆ ಎಂದು ವಾಟ್ಸ್ಆಪ್ ಮೂಲಕ ಸಂಭಾಷಣೆ ನಡೆಸಿದರೆ ಅಲ್ಲಿ ಮಳೆ ಬಂದಿದೆ ಎಂದರ್ಥ. ಹಾಗಾಗಿ, ನಿಮಗೆ ಮಳೆಗೆ ಸಂಬಂಧಿಸಿದ ಸಾಮಗ್ರಿಗಳ ಜಾಹೀರಾತು ತೋರಿಸಿದರೆ ಅವನ್ನು ಖರೀದಿ ಮಾಡುವಂತೆ ನಿಮ್ಮನ್ನು ಟೆಂಪ್ಟ್ ಮಾಡಬಹುದು. ಇದು ದತ್ತಾಂಶದ ಆದಾಯಕ್ಕಿರುವ ಅತ್ಯಂತ ಸರಳ ಲೆಕ್ಕಾಚಾರ.
ಮಾರುಕಟ್ಟೆ ಸಮೀಕ್ಷೆಗಿಂತ ಭಿನ್ನ!
ಒಂದು ವಸ್ತುವನ್ನು ಮಾರಲು ಮಾರುಕಟ್ಟೆ ಸಮೀಕ್ಷೆಯನ್ನು ನಡೆಸಿದರೂ ಕೂಡ ಇವೆಲ್ಲವೂ ನೈಜ ಸನ್ನಿವೇಶವನ್ನು ಕಟ್ಟಿಕೊಡಲಾರವು. ಆದರೆ, ವಾಟ್ಸ್ಆಪ್‌ನಲ್ಲಿ ಹಾಗಲ್ಲ. ಇಲ್ಲಿನ ಎಲ್ಲ ಸಂವಹನಗಳೂ ನೈಜ. ಹೀಗಾಗಿ ಇದರಿಂದ ತೆಗೆದ ಎಲ್ಲ ಮಾಹಿತಿಯೂ ನೈಜ. ಹಾಗಾಗಿಯೇ, ಇದರ ದತ್ತಾಂಶಕ್ಕೆ ಚಿನ್ನದ ಮೌಲ್ಯ.
ಫೇಸ್‌ಬುಕ್‌ಗೆ ವಾಟ್ಸ್‌ಆಪ್ ಲಾಭ!
ವಾಟ್ಸ್ಆಪ್ ಡೇಟಾವನ್ನು ಬಳಸಿಕೊಂಡು ಫೇಸ್‌ಬುಕ್ ಕೂಡ ತನ್ನ ಜಾಹೀರಾತುಗಳನ್ನು ಇನ್ನಷ್ಟು ಸರಿಯಾಗಿ ಟಾರ್ಗೆಟ್ ಮಾಡುತ್ತಿದೆ. ವಾಟ್ಸ್‌ಆಪ್ ದತ್ತಾಂಶಗಳನ್ನು ಬಳಸಿಕೊಂಡು ಯಾವ ಫೇಸ್‌ಬುಕ್ ಬಳಕೆದಾರನಿಗೆ ಯಾವ ಜಾಹಿರಾತನ್ನು ನೀಡಬೇಕು ಎಂದು ಫೇಸ್‌ಬುಕ್ ನಿರ್ಧರಿಸುತ್ತಿದೆ. ಇದರಿಂದ, ಫೇಸ್‌ಬುಕ್ ಲಾಭ ಕೂಡ ಹೆಚ್ಚಾಗುತ್ತಿದೆ.
ಆದಾಯವಿದ್ದರೂ ನಷ್ಟ!
ಮೊದಲೇ ಹೇಳಿದಂತೆ ವಾಟ್ಸ್ಆಪ್ 2017ರಲ್ಲಿ 40 ಕೋಟಿ ಡಾಲರ್ ನಷ್ಟವನ್ನು ತೋರಿಸಿದೆ.ಆದರೆ, ವಾಟ್ಸ್‌ಆಪ್ ಖರೀದಿಸಿದ ನಂತರ ಫೇಸ್‌ಬುಕ್‌ನ ಲಾಭದಲ್ಲಿ ನೂರಾರು ಪಟ್ಟು ಹೆಚ್ಚಳವಾಗಿದೆ. ಇದರರ್ಥ ವಾಟ್ಸ್ಆಪ್ ಡೇಟಾ ಬಳಸಿಕೊಂಡು ಫೇಸ್‌ಬುಕ್ ಸಾವಿರಾರು ಕೋಟಿ ಲಾಭ ಮಾಡಿಕೊಳ್ಳುತ್ತಿದೆ. ಇದು ''ಅಳಿಯ ಅಲ್ಲ. ಆದರೆ, ಮಗಳ ಗಂಡ'' ಎಂಬಂತಾಗುತ್ತದೆ.
ಪ್ರೈವೆಸಿಗೆ ದಕ್ಕೆ ಆಗೊಲ್ಲಾ!
ವಾಟ್ಸ್‌ಆಪ್ ಹೀಗೆ ದತ್ತಾಂಶ ಸಂಗ್ರಹಿಸಿದರೆ ನಮ್ಮ ಗೌಪ್ಯತೆಯ ಕಥೆಯೇನು ಎಂದು ನೀಮಗನಿಸುವುದು ನಿಜ. ಆದರೆ. ನಾವು ಕಳುಹಿಸುವ ಸಂದೇಶ ವಾಟ್ಸ್‌ಆಪ್ ಸರ್ವರ್‌ಗೆ ಹೋದಾಗ, ನಮ್ಮ ಮೊಬೈಲಿನಿಂದ ಸಂದೇಶ ಕಳುಹಿಸಿದ್ದು ಎಂಬ ಅಂಶವನ್ನು ಡಿಕೋಡ್ ಮಾಡುವುದಿಲ್ಲ. ಬದಲಿಗೆ ಸಂದೇಶವನ್ನಷ್ಟೇ ಡಿಕೋಡ್ ಮಾಡುತ್ತದೆ. ಹೀಗಾಗಿ, ವಾಟ್ಸ್‌ಆಪ್ ಬಳಕೆದಾರನ ಪ್ರೈವೆಸಿಗೆ ಧಕ್ಕೆಯಾಗುವುದಿಲ್ಲ.