Just In
- 2 hrs ago
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- 4 hrs ago
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- 20 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 20 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
Don't Miss
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Movies
ವೈವಾಹಿಕ ಬಂಧಕ್ಕೆ ಒಳಗಾದ ಸ್ಯಾಂಡಲ್ವುಡ್ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ
- News
ಪತ್ರಿಕಾ ಸ್ವಾತಂತ್ರವನ್ನು ಬೆಂಬಲಿಸಿ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕಾ
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು 'ರೆಡ್ಮಿ 8A ಡ್ಯುಯಲ್' ಫೋನಿನ ಫಸ್ಟ್ ಸೇಲ್!..ಬೆಲೆ 6,499ರೂ!
ಶಿಯೋಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಬಜೆಟ್ ಸ್ಮಾರ್ಟ್‌ಫೋನ್ 'ರೆಡ್ಮಿ 8A ಡ್ಯುಯಲ್' ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಮೊದಲ ಸೇಲ್ ಇಂದು ಮಧ್ಯಾಹ್ನ 12ರಿಂದ ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮಾರಾಟ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 6,499ರೂ.ಗಳು ಆಗಿದೆ.

ರೆಡ್ಮಿ 8A ಡ್ಯುಯಲ್ ಸ್ಮಾರ್ಟ್‌ಫೋನ್ ಬಜೆಟ್ ಫೋನ್ ಆಗಿದ್ದು, ತನ್ನ ವರ್ಗದಲ್ಲಿಯೇ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಬೆಂಬಲಿತ 5,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ ಎರಡು ವೇರಿಯಂಟ್ ಮಾದರಿಗಳಲ್ಲಿ ಬಿಡುಗಡೆ ಆಗಿದ್ದು, ಅವು ಕ್ರಮವಾಗಿ 2GB RAM ಮತ್ತು 3GB RAM ಸಾಮರ್ಥ್ಯದಲ್ಲಿವೆ. ಹಾಗಾದರೇ ರೆಡ್ಮಿ 8A ಡ್ಯುಯಲ್ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ರೆಡ್ಮಿ 8A ಸ್ಮಾರ್ಟ್‌ಫೋನ್ 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಡಾಟ್ ನಾಚ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ಕವಚ ಪಡೆದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 270 ppi ಆಗಿದೆ.

ಪ್ರೊಸೆಸರ್ ಬಲವೇನು
ರೆಡ್ಮಿ 8A ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ಸಹ ಇದೆ. ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಇದ್ದು, ಅವುಗಳು ಕ್ರಮವಾಗಿ 2GB+32GB ಮತ್ತು 3GB+ 32GB ಆಗಿವೆ. ಇನ್ನು ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.

ಕ್ಯಾಮೆರಾ ಹೇಗಿದೆ
ರೆಡ್ಮಿ 8A ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಹಿಂಬದಿಯ ರಿಯರ್ ಕ್ಯಾಮೆರಾವು ಸೋನಿಯ IMX363 ಸಾಮರ್ಥ್ಯದ 13ಎಂಪಿ ಸೆನ್ಸಾರ್ ಪಡೆದಿದೆ. ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. ಕ್ಯಾಮೆರಾದಲ್ಲಿ ಆಟೋ ಫೋಕಸ್ ಸೇರಿದಂತೆ ಆಕರ್ಷಕ ಎಡಿಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್
ರೆಡ್ಮಿ 8A ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ ಆಗಿರುವುದು ಇದರ ಬ್ಯಾಟರಿಯೇ. ಈ ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಉಳಿದಂತೆ P2i ಕೋಟಿಂಗ್, ಎಫ್‌ಎಮ್ ರೇಡಿಯೊ, ಯುಎಸ್‌ಬಿ ಸಿ ಪೋರ್ಟ್, ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ
ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ರೆಡ್ಮಿ 8A ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಬೇಸಿಕ್ ವೇರಿಯಂಟ್ 2GB RAM + 32GB ಬೆಲೆಯು 6,499ರೂ ಆಗಿದೆ. 3GB RAM + 32GB ಬೆಲೆಯು 6,999ರೂ ಆಗಿದೆ. ಇಂದು (ಫೆ. 18) ಅಮೆಜಾನ್ ಮತ್ತು mi.com ತಾಣಗಳಲ್ಲಿ ಈ ಸ್ಮಾರ್ಟ್‌ಫೋನ ಮೊದಲ ಸೇಲ್ ಆರಂಭವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470