ಭಾರತದಲ್ಲಿ ಅಗ್ಗದ ರೆಡ್ಮಿ 9A ಸ್ಮಾರ್ಟ್‌ಫೋನ್ ಲಾಂಚ್!..ಬೆಲೆ ಜಸ್ಟ್ 6,799ರೂ.!
ಶಿಯೋಮಿ ಸಂಸ್ಥೆಯು ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸದಾಗಿ ರೆಡ್ಮಿ 9A ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್ 10 OS ಸಪೋರ್ಟ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಆರಂಭಿಕ ಬೆಲೆಯು ಜಸ್ಟ್ 6,799ರೂ. ಆಗಿದೆ.

ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ರೆಡ್ಮಿ 9A ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, 13ಎಂಪಿ ಸೆನ್ಸಾರ್‌ನ ರಿಯರ್ ಕ್ಯಾಮೆರಾ ಇದೆ. ಈ ಫೋನ್ 2GB RAM + 32GB ಮತ್ತು 3GB RAM + 32GB ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇನ್ನುಳಿದಂತೆ ಈ ಫೋನಿನ ಬೆಲೆ ಎಷ್ಟು ಹಾಗೂ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ರೆಡ್ಮಿ 9A ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9 ಅನುಪಾತವನ್ನು ಪಡೆದಿದೆ.

ಪ್ರೊಸೆಸರ್ ಯಾವುದು
ರೆಡ್ಮಿ 9A ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 2GB RAM + 32GB ಮತ್ತು 3GB RAM + 32GB ವೇರಿಯಂಟ್‌ನ ಎರಡು ಆಂತರಿಕ ಸ್ಟೋರೇಜ್ ಆಯ್ಕೆಯಗಳನ್ನು ಹೊಂದಿದೆ.

ಕ್ಯಾಮೆರಾ ರಚನೆ
ರೆಡ್ಮಿ 9A ಸ್ಮಾರ್ಟ್‌ಫೋನ್ ಸಿಂಗಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಹಿಂಬದಿಯಲ್ಲಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಬಲ
ರೆಡ್ಮಿ 9A ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLET, ವೈ-ಫೈ 802.11 ಎ / ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ
ರೆಡ್ಮಿ 9A ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 2GB RAM + 32GB ವೇರಿಯಂಟ್ ದರವು 6,799ರೂ.ಗಳು ಆಗಿದೆ. ಹಾಗೆಯೇ 3GB RAM + 32GB ವೇರಿಯಂಟ್ ಬೆಲೆಯು 7,499ರೂ.ಗಳಾಗಿದೆ. ಇನ್ನು ಈ ಫೋನ್ ಅಮೆಜಾನ್ ತಾಣದಲ್ಲಿ ಲಭ್ಯವಾಗಲಿದೆ. ನೈಟ್ ಬ್ಲ್ಯಾಕ್, ಸೀ ಬ್ಲೂ, ನೇಚರ್ ಗ್ರೀನ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.


Click it and Unblock the Notifications




