Redmi Go: ಅಗ್ಗದ 'ರೆಡ್‌ಮಿ ಗೋ' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ!
ಚೀನಾ ಮೂಲದ ಶಿಯೋಮಿ ಅಗ್ಗದ ಬೆಲೆಯಲ್ಲಿ 'ರೆಡ್ಮಿ ಗೋ' ಸ್ಮಾರ್ಟ್‌ಫೋನ್ ಪರಿಚಯಿಸಿ ಮಾರುಕಟ್ಟೆಯಲ್ಲಿ ಈಗಾಗಲೇ ಭಾರಿ ಸದ್ದು ಮಾಡಿದೆ. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಘೋಷಿಸಿ ಗ್ರಾಹಕರಿಗೆ ಖುಷಿ ತಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 425 ಪ್ರೊಸೆಸರ್‌ನ ಕಾರ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದೆ.

ಹೌದು, ಶಿಯೋಮಿಯು ಜನಪ್ರಿಯ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 'ರೆಡ್ಮಿ ಗೋ' ಫೋನಿನ ಬೆಲೆಯಲ್ಲಿ ಕಡಿತ ಮಾಡಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಈ ಫೋನ್ 4,499ರೂ ಪ್ರೈಸ್‌ಟ್ಯಾಗ್ ಅನ್ನು ಪಡೆದಿತ್ತು. ಆದ್ರೆ ಇದೀಗ ಬೆಲೆ ಇಳಿಕೆಯಿಂದ ಕೇವಲ 4,299ರೂ.ಗೆ ಲಭ್ಯವಿದೆ. ಗ್ರಾಹಕರು ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್, ಅಧಿಕೃತ ಶಿಯೋಮಿ ವೆಬ್‌ಸೈಟ್ ಮತ್ತು ಆಫ್‌ಲೈನ್ ಶಿಯೋಮಿ ಹೋಮ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ ರೆಡ್ಮಿ ಗೋ ಫೋನಿನ ಫೀಚರ್ಸ್‌ಗಳು ಹೇಗಿವೆ ಅನ್ನೊದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 16:9 ಆಕಾರ ಅನುಪಾತದಲ್ಲಿ ಬಂದಿರುವ ಡಿಸ್‌ಪ್ಲೇ 1280 x 720 ಪಿಕ್ಸೆಲ್‌ಗಳ ಸಾಮರ್ಥ್ಯದ್ದಾಗಿದೆ. 380 ನಿಟ್ಸ್ ಬ್ರೈಟ್‌ನೆಸ್, 72 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್ ಮತ್ತು 1000: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿರುವ ಬಜೆಟ್ ಫೋನ್‌ಗಳ ಮಧ್ಯಮ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 1.4GHz ಕ್ವಾಲ್ಕಾಮ್ ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಅನ್ನು ಹೊಂದಿದೆ.ಅಡ್ರಿನೊ 308 ಜಿಪಿಯು ಜೊತೆಗೂಡಿ ಬಂದಿರುವುದು ಸ್ವಲ್ಪ ವಿಶೇಷತೆ ಎನ್ನಬಹುದು. ಇನ್ನು 1GB RAM ಮತ್ತು 8GB ಆಂತರಿಕ ಸಂಗ್ರಹದೊಂದಿಗೆ ಬಿಡುಗಡೆಯಾಗಿರುವ ಫೋನ್ ಮೆಮೊರಿಯನ್ನು SD ಕಾರ್ಡ್ ಮೂಲಕ 128GB ವಿಸ್ತರಿಸುವ ಆಯ್ಕೆ ಇದೆ.

ಕ್ಯಾಮೆರಾ ಹೇಗಿದೆ
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಎಫ್ / 2.0 ಅಪರ್ಚರ್, ಎಲ್ಇಡಿ ಫ್ಲ್ಯಾಶ್ ಮತ್ತು 1.12 ಎಮ್ಎಮ್ಪಿ ಪಿಕ್ಸೆಲ್ ಗಾತ್ರದೊಂದಿಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಹಾಗೂ ಮುಂದೆ ಎಫ್ / 2.2 ಅಪರ್ಚರ್ ಮತ್ತು 1.12 ಎಮ್ಎಮ್ ಪಿಕ್ಸೆಲ್ ಗಾತ್ರದ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳನ್ನು ನೀಡಲಾಗಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗುವ ಕ್ಯಾಮೆರಾಗಳ ವಿಶೇಷತೆಗಳು ಇದರಲ್ಲಿವೆ ಎನ್ನಬಹುದು.

ಇತರೆ ಫೀಚರ್ಸ್
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 4G VoLTE, ಬ್ಲೂಟೂತ್ 4.1, ವೈಫೈ 802.11 ಬೌ / ಗ್ರಾಂ / ಎನ್, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ 2.0 ಬೆಂಬಲ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಂಡ್ರಾಯ್ಡ್ 8.1 (ಓರಿಯೊ ಗೋ ಆವೃತ್ತಿ) ಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ.


Click it and Unblock the Notifications








