Subscribe to Gizbot

ಏರ್‌ಟೆಲ್ ಮಳಿಗೆಗಳಲ್ಲೂ ಶ್ಯೋಮಿ ರೆಡ್ಮೀ ನೋಟ್ 4 ಜಿ ಲಭ್ಯ

Written By:

4ಜಿ ಡೇಟಾ ಒಳಗೊಂಡಂತೆ ತನ್ನದೇ ಪೋಸ್ಟ್ ಪೇಡ್ ಯೋಜನೆಗಳೊಂದಿಗೆ ಏರ್‌ಟೆಲ್ ಶ್ಯೋಮಿ ರೆಡ್ಮೀ ನೋಟ್ 4 ಜಿ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿದೆ. ಇ ಕಾಮರ್ಸ್ ವೆಬ್‌ಸೈಟ್ ಆದ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದ್ದು ಏರ್‌ಟೆಲ್ ಫೋನ್ ಅನ್ನು ಮಾರಾಟ ಮಾಡುತ್ತಿದ್ದರೂ ಫೋನ್ ಅನ್ನು ಖರೀದಿಸುವವರು ಫ್ಲಿಪ್‌ಕಾರ್ಟ್‌ನಲ್ಲೇ ಡಿವೈಸ್ ಅನ್ನು ಖರೀದಿಸಬೇಕಾಗುತ್ತದೆ.

ರೆಡ್ಮೀ ನೋಟ್ 4 ಜಿ ಇನ್ನು ಏರ್‌ಟೆಲ್ ಮಳಿಗೆಗಳಲ್ಲೂ

ಇದನ್ನೂ ಓದಿ: ಈ ಫೋನ್‌ಗಳ ಮೇಲೆ ಪಡೆಯಿರಿ ಅದ್ಭುತ ದರಕಡಿತ

ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ಆರು ನಗರಗಳಲ್ಲಿ 133 ಏರ್‌ಟೆಲ್ ಮಳಿಗೆಗಳಿಂದ ರೆಡ್ಮೀ ನೋಡ್ 4ಜಿ ಹ್ಯಾಂಡ್‌ಸೆಟ್ ಅನ್ನು ರೂ 9,999 ಕ್ಕೆ ಬಳಕೆದಾರರು ಖರೀದಿಸುವಂತೆ ಏರ್‌ಟೆಲ್ ಶ್ಯೋಮಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಏರ್‌ಟೆಟ್‌ನ ಎಮ್ಐ ಪೇಜ್‌ನಿಂದ ಹ್ಯಾಂಡ್‌ಸೆಟ್ ಅನ್ನು ಬಳಕೆದಾರರು ಕಾಯ್ದಿರಿಸಬಹುದಾಗಿದ್ದು ಮೇಲೆ ತಿಳಿಸಿದ ನಗರಗಳಲ್ಲಿನ ಯಾವುದೇ ಏರ್‌ಟೆಲ್ ಮಳಿಗೆಗಳಲ್ಲಿ ಖರೀದಿದಾರರು ಫೋನ್ ಅನ್ನು ಕೊಂಡುಕೊಳ್ಳಬಹುದು. ಕಾಯ್ದಿರಿಸುವಿಕೆ (ಬುಕ್ಕಿಂಗ್) ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು ಇಂದಿನವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನಗದನ್ನು ನೀಡುವುದರ ಮೂಲಕ ಆನ್‌ಲೈನ್‌ನಲ್ಲಿ ಫೋನ್ ಅನ್ನು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

ಇನ್ನು ಏರ್‌ಟೆಲ್ 'ಎಮ್‌ಐ ಡೇ' ಅನ್ನು ಪ್ರತೀ ವಾರ ನಡೆಸುತ್ತಿದ್ದು ಈ ಸಮಯದಲ್ಲಿ ಆಯ್ಕೆಮಾಡಿರುವ ಏರ್‌ಟೆಲ್ ಮಳಿಗೆಗಳಿಂದ ಬಳಕೆದಾರರು ಪೂರ್ವ ಬುಕ್ಕಿಂಗ್ ಇಲ್ಲದೇ ರೆಡ್ಮೀ ನೋಟ್ 4ಜಿಯನ್ನು ಖರೀದಿಸಬಹುದಾಗಿದೆ.

English summary
Airtel will now be selling the Xiaomi Redmi Note 4G smartphone with its own postpaid plans including 4G data starting Thursday. Until now, the smartphone was available exclusively via e-commerce website Flipkart.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot