ಶಿಯೋಮಿ ರಿಪಬ್ಲಿಕ್ ಡೇ ಸೇಲ್: ಫೋನ್ ಮತ್ತು ಟಿವಿಗಳಿಗೆ ಭಾರೀ ಡಿಸ್ಕೌಂಟ್!
ಇ-ಕಾಮರ್ಸ್ ತಾಣಗಳು ವಿಶೇಷ ದಿನಗಳಂದು ರಿಯಾಯಿತಿ ಸೇಲ್ ನಡೆಸುವಂತೆ ಇತ್ತೀಚಿಗೆ ಮೊಬೈಲ್ ಕಂಪನಿಗಳು ಸಹ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪೆಷಲ್ ಸೇಲ್ ಶುರು ಮಾಡಿವೆ. ಆ ಪೈಕಿ ಶಿಯೋಮಿ ಕಂಪನಿಯು ಇದೀಗ ಗಣರಾಜ್ಯೋತ್ಸವದ ಅಂಗವಾಗಿ ಅಧಿಕೃತ Mi.com ವೆಬ್‌ಸೈಟ್ನಲ್ಲಿ ಹಾಗೂ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಹಯೋಗದೊಂದಿಗೆ ರಿಪಬ್ಲಿಕ್ ಡೇ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ಕಂಪನಿಯ ಆಯ್ದ ಉತ್ಪನ್ನಗಳು ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿವೆ.

ಹೌದು, ಶಿಯೋಮಿ ಸಂಸ್ಥೆಯು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಜೊತೆಗೂಡಿ ರಿಪಬ್ಲಿಕ್ ಡೇ ಸೇಲ್ ಅನ್ನು ಆಯೋಜಿಸಿದ್ದು, ಈ ಸೇಲ್ ಮೇಳವು ಜನವರಿ 20 (ಇಂದು) ರಿಂದ ಜನವರಿ 24 ರವರೆಗೆ ನಡೆಯಲಿದೆ. ಸೇಲ್‌ನಲ್ಲಿ ರೆಡ್ಮಿ ನೋಟ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಮತ್ತು ಮಿ ವಾಚ್ ಡಿವೈಸ್‌ಗಳಿಗೆ ರಿಯಾಯಿತಿ ಲಭ್ಯ ಇರಲಿದೆ. ಇನ್ನು ಗ್ರಾಹಕರು Mi.com ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ತಾಣಗಳಲ್ಲಿ ಈ ಕೊಡುಗೆ ಪಡೆಯಬಹುದಾಗಿದೆ. ಹಾಗಾದರೇ ಆಫರ್ ಪಡೆದ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ 9 ಸರಣಿ ಫೋನ್‌ಗಳು
ರೆಡ್ಮಿ 9i ಬಜೆಟ್ ದರದಲ್ಲಿ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಈ ಸೇಲ್ ಮೇಳದಲ್ಲಿ 4GB + 64GB ಸ್ಟೋರೇಜ್ ವೇರಿಯಂಟ್ ಫೋನ್ 7,999ರೂ.ಗಳಿಗೆ ಲಭ್ಯವಾಗಲಿದೆ. ಅದೇ ರೀತಿ ರೆಡ್ಮಿ 9 ಪ್ರೈಮ್ 4GB + 64GB ಸ್ಟೋರೇಜ್ ವೇರಿಯಂಟ್‌ನ ಫೋನ್ ರಿಪಬ್ಲಿಕ್ ಡೇ ಸೇಲ್ 9,499ರೂ.ಗಳಿಗೆ ಲಭ್ಯವಾಗಲಿದೆ.

ರೆಡ್ಮಿ ನೋಟ್ 9 ಸರಣಿ ಫೋನ್‌ಗಳು
ಜನಪ್ರಿಯ ರೆಡ್ಮಿ ನೋಟ್ 9 ಫೋನ್ 6GB + 128GB ಸ್ಟೋರೇಜ್ ವೇರಿಯಂಟ್ ಬೆಲೆಯಲ್ಲಿ 1,000ರೂ.ರಿಯಾಯಿತಿ ಲಭ್ಯವಾಗಲಿದೆ. ರೆಡ್ಮಿ ನೋಟ್ 9 ಪ್ರೊ 4GB + 128GB ವೇರಿಯಂಟ್ 13,999ರೂ.ಗಳಿಗೆ ಸಿಗಲಿದೆ. ರಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ 6GB + 64GB ವೇರಿಯಂಟ್ ದರವು 17,499ರೂ.ಗಳ ಪ್ರೈಸ್‌ಟ್ಯಾಗ್ ಪಡೆದಿವೆ.

ಮಿ ಸ್ಮಾರ್ಟ್ ಟಿವಿಗಳು
ರಿಪಬ್ಲಿಕ್ ಡೇ ಸೇಲ್‌ನಲ್ಲಿ ಮಿ ಸ್ಮಾರ್ಟ್ ಟಿವಿಗಳು ಸುಮಾರು 1000ರೂ. ವರೆಗೂ ರಿಯಾಯಿತಿ ಪಡೆದಿವೆ. ಮಿ LED ಟಿವಿ 4A ಪ್ರೊ (32-ಇಂಚು) ಬೆಲೆಯು 14,499ರೂ. ಆಗಿದೆ. ಮಿ LED ಟಿವಿ 4A ಪ್ರೊ (43-ಇಂಚು) ದರವು 23,999ರೂ.ಗಳಾಗಿವೆ. ಮಿ LED ಟಿವಿ 4X (55-ಇಂಚು) 38,999ರೂ.ಗಳಿಗೆ ಲಭ್ಯವಾಗಲಿದೆ. ಮಿ ಟಿವಿ ಸ್ಟಿಕ್ ಮತ್ತು ಮಿ ಬಾಕ್ಸ್ 4K ಡಿವೈಸ್‌ಗಳು ಕ್ರಮವಾಗಿ 2,299ರೂ. ಮತ್ತು 3,299ರೂ.ಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








